ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಗೆ 15 ಆಟಗಾರರ ಭಾರತ ತಂಡ - ನಮ್ಮ ಆಯ್ಕೆ

By Mahesh

ಬೆಂಗಳೂರು, ಜ.5: ಐಸಿಸಿ ವಿಶ್ವಕಪ್ 2015ರಲ್ಲಿ ಆಡುವ 15 ಜನ ವೀರಾಗ್ರಣಿಗಳ ಹೆಸರನ್ನು ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಪ್ರಕಟಿಸಲಿದೆ. ಇದಕ್ಕೂ ಮುನ್ನ 30 ಜನ ಸಂಭಾವ್ಯ ಆಟಗಾರರಲ್ಲಿ ಅಂತಿಮ 15 ಜನರನ್ನು ಒನ್ ಇಂಡಿಯಾ ಆಯ್ಕೆ ಮಾಡಿದೆ.

ಜನವರಿ 6 ರಂದು ಮಧ್ಯಾಹ್ನದ ವೇಳೆಗೆ ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ 15 ಜನ ಕ್ರಿಕೆಟರ್ ಗಳನ್ನು ಹೆಸರಿಸಲಿದ್ದಾರೆ.[ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]

ಹಾಲಿ ವಿಶ್ವ ಕಪ್ ವಿಜೇತ ತಂಡವಾದ ಟೀಂ ಇಂಡಿಯಾ ತನ್ನ ವಿಶ್ವಕಪ್ 2015 ಟೂರ್ನಿಯನ್ನು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ಫೆ.15ರಂದು ಎದುರಿಸಲಿದೆ. ಫೆ.14ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. [30 ಮಂದಿ ಟೀಂ ಇಂಡಿಯಾ ಪ್ರಕಟ]

ಹಾಲಿ ಚಾಂಪಿಯನ್ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ಫೆ.8 ಹಾಗೂ ಅಫ್ಘಾನಿಸ್ತಾನ ವಿರುದ್ಧ ಫೆ. 10ರಂದು(ಎರಡು ಪಂದ್ಯ ಅಡಿಲೇಡ್ ಒವಲ್) ಆಡಲಿದೆ. [ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ]

ಒನ್ ಇಂಡಿಯಾ ಆಯ್ಕೆ ಮಾಡಿರುವ 15 ಜನ ಕ್ರಿಕೆಟರ್ ಗಳ ಪಟ್ಟಿ ಇಂತಿದೆ:
ವಿಕೆಟ್ ಕೀಪರ್
1. ಎಂಎಸ್ ಧೋನಿ (ಜಾರ್ಖಂಡ್/ಚೆನ್ನೈ ಸೂಪರ್ ಕಿಂಗ್ಸ್) ನಾಯಕ

Oneindia pick: India's final 15-man squad for ICC World Cup 2015

ಬ್ಯಾಟ್ಸ್ ಮನ್ ಗಳು
2. ವಿರಾಟ್ ಕೊಹ್ಲಿ(ದೆಹಲಿ/ರಾಯಲ್ ಚಾಲೆಂಜರ್ಸ್ ಬೆಂಗಳೂರು), ಉಪ ನಾಯಕ
3. ಶಿಖರ್ ಧವನ್(ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)
4. ರೋಹಿತ್ ಶರ್ಮ(ಮುಂಬೈ/ ಮುಂಬೈ ಇಂಡಿಯನ್ಸ್)
5. ಅಜಿಂಕ್ಯ ರಹಾನೆ(ಮುಂಬೈ/ ರಾಜಸ್ಥಾನ ರಾಯಲ್ಸ್)
6. ಸುರೇಶ್ ರೈನಾ (ಉತ್ತರಪ್ರದೇಶ/ಸಿಎಸ್ ಕೆ)
7. ಅಂಬಟಿ ರಾಯುಡು (ಬರೋಡಾ/ಮುಂಬೈ ಇಂಡಿಯನ್ಸ್)
8. ಮುರಳಿ ವಿಜಯ್ (ತಮಿಳುನಾಡು)

ಆಲ್ ರೌಂಡರ್ಸ್
9. ರವೀಂದ್ರ ಜಡೇಜ(ಸೌರಾಷ್ಟ್ರ/ ಸಿಎಸ್ ಕೆ)
10. ಅಕ್ಷರ್ ಪಟೇಲ್ ( ಗುಜರಾತ್/ ಕಿಂಗ್ಸ್ XI ಪಂಜಾಬ್)

ವೇಗಿಗಳು

11. ಭುವನೇಶ್ವರ್ ಕುಮಾರ್ (ಉತ್ತರಪ್ರದೇಶ/ಸೈನ್ ರೈಸರ್ಸ್ ಹೈದರಾಬಾದ್)
12. ಮಹಮ್ಮದ್ ಶಮಿ(ಬೆಂಗಾಳ/ ಡೆಲ್ಲಿ ಡೇರ್ ಡೆವಿಲ್ಸ್)
13. ಇಶಾಂತ್ ಶರ್ಮ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)
14. ಉಮೇಶ್ ಯಾದವ್ (ವಿದರ್ಭ/ ಕೋಲ್ಕತ್ತಾ ನೈಟ್ ರೈಡರ್ಸ್)

ಸ್ಪಿನ್ನರ್
15. ಆರ್ ಅಶ್ವಿನ್(ತಮಿಳುನಾಡು/ ಚೆನ್ನೈ ಸೂಪರ್ ಕಿಂಗ್ಸ್)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X