ಜಾವಲಿನ್‌ ಎಸೆತ: ವಿಶ್ವ ದಾಖಲೆ ಬರೆದ ಭಾರತ ನೀರಜ್

By:
Subscribe to Oneindia Kannada

ನವದೆಹಲಿ, ಜುಲೈ 24: ಪೋಲೆಂಡ್ ನಲ್ಲಿ ನಡೆಯುತ್ತಿರುವ ಐಎಎಎಫ್‌ ವರ್ಲ್ಡ್‌ ಅಂಡರ್‌ 20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಯುವ ಜಾವಲಿನ್‌ ಎಸೆತಗಾರ ನೀರಜ್‌ ಚೋಪ್ರಾ ವಿಶ್ವದಾಖಲೆ ನಿರ್ಮಿಸಿದ್ದಾರೆ.

ನೀರಜ್ ಅವರ ಸಾಧನೆಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು, ಸಾರ್ವಜನಿಕರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. [ನೀರಜ್ ಗೆ ಮೋದಿ ಸೇರಿ, ಎಲ್ಲರಿಂದ ಬಹುಪರಾಕ್]

ಹರ್ಯಾಣ ಮೂಲದ ನೀರಜ್ ಅವರು ಜೂನಿಯರ್‌ ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. 86.48 ಮೀ ದೂರಕ್ಕೆ ಜಾವಲಿನ್‌ ಎಸೆದು ಭಾರತಕ್ಕೆ ಈ ಕ್ರೀಡಾಕೂಟದ ಮೊದಲ ಚಿನ್ನದ ಪದಕ ದೊರಕಿಸಿಕೊಟ್ಟಿದ್ದಾರೆ.[ರಿಯೋ ಒಲಿಂಪಿಕ್ಸ್ ಗೆ ನೂರಾರು ಅಥ್ಲೀಟ್ ಗಳು]

ಹರ್ಯಾಣದ ಪಾಣಿಪತ್ ಜಿಲ್ಲೆಯ ಖಾಂಡ್ರಾ ಗ್ರಾಮದ 19 ವರ್ಷ ವಯಸ್ಸಿನ ಹರೆಯದ ನೀರಜ್‌ ಈ ಹಿಂದೆ ಗುವಾಹತಿಯಲ್ಲಿ ನಡೆದ ಸೌತ್‌ ಏಷ್ಯನ್‌ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಪಡೆದಿದ್ದರು. ಇದಾದ ಬಳಿಕ ಈಗ ವಿಶ್ವದಾಖಲೆ ಬರೆದಿದಾರೆ. 2011ರಲ್ಲಿ ಲಾಟ್ವಿಯಾದ ಜಿಗಿಸ್ಮುಂಡ್ಸ್ ಸರ್ ಮಾಯಿಸ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ನೀರಜ್ ಮುರಿದಿದ್ದಾರೆ.

ಮೊದಲು ಮುನ್ನಡೆ ಪಡೆದಿದ್ದ ದಕ್ಷಿಣ ಆಫ್ರಿಕಾದ ಜೊಹಾನ್ ಗ್ರೊಬ್ಲರ್ (80.59 ಮೀ) ಅವರು ಬೆಳ್ಳಿ ಹಾಗೂ ಗ್ರಾನಾಡಾದ ಆಂಡರ್ಸನ್ ಪೀಟರ್ಸ್ ಅವರು 79.65 ಮೀಟರ್ ದೂರ ಜಾವಲನ್ ಎಸೆದು ಕಂಚಿನ ಪದಕ ಗೆದ್ದರು.

ಎರಡನೇ ಪ್ರಯತ್ನದಲ್ಲಿ ಚಿನ್ನ ಗೆದ್ದ ನೀರಜ್

ಮೊದಲ ಪ್ರಯತ್ನದಲ್ಲಿ 79.66 ಮೀಟರ್ ದೂರ ಎಸೆದಿದ್ದ ನೀರಜ್ ಅವರು ಮುನ್ನಡೆ ಪಡೆದಿದ್ದರು. ಆದರೆ, ದಕ್ಷಿಣ ಆಫ್ರಿಕಾದ ಗ್ರಾಬ್ಲರ್ ಅವರು 80.59 ಮೀಟರ್ ಎಸೆದರು. ನಂತರ ಎರಡನೇ ಪ್ರಯತ್ನದಲ್ಲಿ 86.48 ಮೀಟರ್ ಎಸೆದ ನೀರಜ್ ಅವರು ಚಿನ್ನದ ಗೆದ್ದರು.

ಲಂಡನ್ ಒಲಿಂಪಿಕ್ಸ್ ದಾಖಲೆ ಧ್ವಂಸ

ಲಂಡನ್ ಒಲಿಂಪಿಕ್ಸ್ 2012ರಲ್ಲಿ ಟ್ರಿನಿಡಾಡ್ ಅಂಡ್ ಟ್ಯಾಬಾಗೊದ ಕೆಶೊರ್ನ್ ವಾಲ್ಕಟ್ ಅವರು 84.58 ಮೀಟರ್ ದೂರಕ್ಕೆ ಜಾವಲನ್ ಎಸೆರಿದ್ದರು. ಈಗ ನೀರಜ್ ಇದಕ್ಕಿಂತ 1.9 ಮೀಟರ್ ಹೆಚ್ಚಿನ ದೂರಕ್ಕೆ ಜಾವಲಿನ್ ಎಸೆದಿದ್ದಾರೆ.

ಕೇರಳದ ಅಂಜು ಬಾಬ್ಬಿ ಜಾರ್ಜ್

ಹಿರಿಯರ ವಿಭಾಗದಲ್ಲಿ ಕೇರಳದ ಅಂಜು ಬಾಬ್ಬಿ ಜಾರ್ಜ್ ಪದಕ ಜಯಿಸಿದ ಭಾರತದ ಏಕೈಕ ಕ್ರೀಡಾಪಟು. ಅಂಜು ಬಾಬ್ಬಿ ಅವರು 2003ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದುಕೊಂಡಿದ್ದರು.

ಜೂನಿಯರ್ ವಿಶ್ವ ಚಾಂಪಿಯನ್ ಶಿಪ್ ಸಾಧಕರು

ನೀರಜ್ ಗೂ ಮೊದಲು ಡಿಸ್ಕಸ್ ಎಸೆತಗಾರರಾದ ಸೀಮಾ ಅಂಟಿಲ್(2002 ಕಂಚು), ಮತ್ತು ನವಜೋತ್ ಸಿಂಗ್ ಧಿಲ್ಲಾನ್ (2014 ಕಂಚು) ಜೂನಿಯರ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಜಯಿಸಿದ್ದರು.

ನೀರಜ್ ಛೋಪ್ರಾ ಅವರ ದಾಖಲೆಯ ಎಸೆತದ ವಿಡಿಯೋ

ನೀರಜ್ ಛೋಪ್ರಾ ಅವರ ದಾಖಲೆಯ ಎಸೆತದ ವಿಡಿಯೋ ನೋಡಿ

English summary
A young javelin thrower from India, Neeraj Chopra, has set a new world record and aslo won the gold at IAAF World U-20 Championships in Bydgoszcz, Poland on Saturday (July 23).
Please Wait while comments are loading...