ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ವಿಶ್ವಕಪ್ ತಂಡದಿಂದ ಯುವಿ ಹೊರ ಹಾಕಿದ್ದು ಧೋನಿ"

By Mahesh

ಬೆಂಗಳೂರು, ಫೆ.16: ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಯುವರಾಜ್ ಸಿಂಗ್ ಅವರ ತಂದೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಶ್ವಕಪ್ ತಂಡದಿಂದ ನನ್ನ ಮಗನನ್ನು ಹೊರಹಾಕಿದ್ದು ಎಂಎಸ್ ಧೋನಿ ಎಂದು ನೇರವಾಗಿ ಆರೋಪಿಸಿದ್ದಾರೆ.

ಇಲ್ಲಿ ತನಕ ಗುಸುಗುಸು ಪಿಸು ಪಿಸು ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದ್ದ ಬಹುಚರ್ಚಿತ ವಿಷಯ ಈಗ ಯುವರಾಜ್ ಸಿಂಗ್ ತಂದೆ ಬಾಯಿಂದ ಹೊರ ಬಿದ್ದಿದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

Dhoni behind Yuvraj's exclusion from World Cup: Father Yograj Singh

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ವಿರುದ್ಧ ಯೋಗರಾಜ್ ಸಿಂಗ್ ಅವರು ವಿಷಕಾರಿದ್ದಾರೆ.

ನಾನು ಭಾವುಕನಾಗಿ ಮಾತನಾಡುತ್ತಿಲ್ಲ. ಯುವರಾಜ್ ಸಿಂಗ್ ಉತ್ತಮ ಲಯದಲ್ಲಿದ್ದಾನೆ. ವಿಶ್ವಕಪ್ ಆಡಿದ ಅನುಭವವಿದೆ, ಆಯ್ಕೆ ಏಕೆ ಮಾಡಿಲ್ಲ ಎಂಬುದರ ಬಗ್ಗೆ ಯಾರೂ ವಿವರಣೆ ನೀಡಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ಐಪಿಎಲ್ 8 ರ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯುವರಾಜ್ ಸಿಂಗ್ ಅವರನ್ನು 16 ಕೋಟಿ ರು ಕೊಟ್ಟು ಸೋಮವಾರ ಬೆಳಗ್ಗೆ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಸಂಪೂರ್ಣ ಅಪ್ಡೇಟ್ಸ್ ಇಲ್ಲಿ ಓದಿ].


ಕಳೆದ ವರ್ಷ ಕೂಡಾ ಆರ್ ಸಿಬಿ 14 ಕೋಟಿ ರು ನೀಡಿ ಯುವರಾಜ್ ಸಿಂಗ್ ಅವರನ್ನು ಅಗ್ರಸ್ಥಾನಕ್ಕೇರಿಸಿತ್ತು. ಪ್ರಸಕ್ತ ರಣಜಿ ಋತುವಿನಲ್ಲಿ ಯುವರಾಜ್ ಸಿಂಗ್ ಅವರು ಸತತ ಮೂರು ಶತಕಗಳನ್ನು ಸಿಡಿಸಿ ಆಯ್ಕೆ ಸಮಿತಿಗೆ ತಕ್ಕ ಉತ್ತರ ನೀಡಿದ್ದರು.

ಅದರೆ, ವಿಶ್ವಕಪ್ ಸಂಭಾವ್ಯ 30 ಜನರ ತಂಡದಿಂದಲೂ ಯುವರಾಜ್ ಸಿಂಗ್ ಅವರನ್ನು ಕಡೆಗಣಿಸಲಾಗಿತ್ತು. ಈ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾಗಿತ್ತು. ಕೊನೆ ಕೊನೆಗೆ ಗಾಯಾಳು ರವೀಂದ್ರ ಜಡೇಜ ಬದಲಿಗೆ ಯುವರಾಜ್ ಸಿಂಗ್ ಸೇರುವ ಸಾಧ್ಯತೆಯಿದೆ ಎಂಬ ಸುದ್ದಿಯೂ ಹಬ್ಬಿತ್ತು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X