ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫಿಕ್ಸಿಂಗ್: ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್, ಭಾರತದ ಕನಸು ಭಗ್ನ

By Mahesh

ಬೆಂಗಳೂರು, ಫೆ.21: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಫಿಕ್ಸ್ ಆಗಿತ್ತು ಎಂದು ಟ್ವಿಟ್ಟರ್ ನಲ್ಲಿ ಸುದ್ದಿ ಹರಡಿದ ಬೆನ್ನಲ್ಲೇ ವಿಶ್ವಕಪ್ 2015 ಟೂರ್ನಿಯ ಎಲ್ಲಾ ಪಂದ್ಯಗಳು ಫಿಕ್ಸ್ ಆಗಿವೆ ಎಂಬ ಸಂದೇಶ ಎಚ್ 1 ಎನ್ 1 ವೈರಾಣುಗಿಂತ ವೇಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಇಲ್ಲಿ ತನಕದ ಫಲಿತಾಂಶ ಗಮನಿಸಿದರೆ ಇದು ನಿಜ ಇರಬಹುದು ಎಂಬ ಅನುಮಾನವೂ ಕಾಡುತ್ತದೆ.

ವಾಟ್ಸಪ್ ಸ್ಮಾರ್ಟ್ ಫೋನ್ ಮೆಸೆಂಜರ್ ಮೂಲಕ ಎಲ್ಲೆಡೆ ಹರಡುತ್ತಿರುವ ಸಂದೇಶದ ಪ್ರಕಾರ ಐಸಿಸಿ ವಿಶ್ವಕಪ್ 2015ರ ಎಲ್ಲಾ 49 ಪಂದ್ಯ ಗಳು ಮೊದಲೇ ಫಿಕ್ಸ್ ಆಗಿವೆ ಎನ್ನಲಾಗಿದೆ. ಆಘಾತಕಾರಿ ಸಂಗತಿಯೆಂದರೆ ಈ ಭವಿಷ್ಯ ನಿಜವಾಗಿದೆ ಕೂಡಾ.

South Africa will 'win' title, India 'semi-finalists'

ಪಂಟರ್ ಗಳಿಗೂ ಸವಾಲಾಗಿರುವ ಈ ಸಂದೇಶ ಬೆಟ್ಟಿಂಗ್ ದಂಧೆಗೆ ಫುಲ್ ಸ್ಟಾಪ್ ಇಡುವಂತೆ ಮಾಡಿದೆ. ಬುಕ್ಕಿಗಳ ಫೇವರೀಟ್ ಎನಿಸಿರುವ ತಂಡಗಳು ಮಕಾಡೆ ಮಲಗಲಿದ್ದು, ಚೋಕರ್ಸ್ ಹಣೆ ಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಈ ಬಾರಿ ವಿಶ್ವಕಪ್ ಎತ್ತಿ ಹಿಡಿದು ಸಂಭ್ರಮಿಸಲಿದೆಯಂತೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಹಾಲಿ ಚಾಂಪಿಯನ್ ಭಾರತಕ್ಕೆ ಭಾರಿ ಮುಖಭಂಗ ಕಾದಿದ್ದು, ಸತತ ಸೋಲಿನ ನಡುವೆ ಹಾಗೂ ಹೀಗೂ ಸೆಮಿಫೈನಲ್ ತಲುಪಲಿದ್ದು, ಫೈನಲ್ ಹಂತಕ್ಕೇರಲಾರದೆ ಮುಗ್ಗರಿಸಲಿದೆ ಎಂಬ ಸಂದೇಶ ರವಾನೆಯಾಗುತ್ತಿದೆ. ಫೇಸ್ ಬುಕ್ ನಲ್ಲಿ 9 ​ಕ್ರಿಕ್​ ಎಂಬ ಪೇಜ್​ ಎಲ್ಲಾ ಪಂದ್ಯಗಳ ಫಲಿತಾಂಶವನ್ನೂ ಪ್ರಕಟಿಸಿದೆ.

ಕ್ವಾರ್ಟರ್ ಫೈನಲ್ ಹಂತಕ್ಕೆ: ನ್ಯೂಜಿಲೆಂಡ್, ಭಾರತ, ಆಸ್ಟ್ರೇಲಿಯಾ, ಜಿಂಬಾಬ್ವೆ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಪಾಕಿಸ್ತಾನ.

Message: All World Cup matches 'fixed'; South Africa will 'win' title, India 'semi-finalists'

ಭಾನುವಾರ (ಫೆ.22)ದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಕ್ಕೆ ಸೋಲುಂಟಾಗಲಿದೆ. ವಿಶ್ವಕಪ್ ನಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ತನ್ನ 'ಅಜೇಯ' ದಾಖಲೆ ಮುಂದುವರೆಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಫೆ.20ರ ತನಕ ಒಟ್ಟು 9 ಪಂದ್ಯಗಳನ್ನಾಡಲಾಗಿದ್ದು, ಇಲ್ಲಿ ತನಕ ಪಂದ್ಯಗಳ ಬಗ್ಗೆ ಬಂದಿರುವ ಭವಿಷ್ಯ ವಾಣಿ ನಿಜವಾಗಿದೆ. ಕ್ರಿಕೆಟ್ ಶಿಶು ಐರ್ಲೆಂಡ್ ತಂಡಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಿಗಲಿದೆ ಎಂಬುದನ್ನು ಮೊದಲೇ ಹೇಳಲಾಗಿದೆ. ಇದೇನು ಕಾಕತಾಳೀಯವೋ ಅಥವಾ ಎಲ್ಲವೋ ಫಿಕ್ಸ್ ಆಗಿದೆಯೋ ಈಗಲೇ ಹೇಳಲಾಗಲಾಗದು.

ಸದ್ಯಕ್ಕೆ ಫೆ.20 ರ ತನಕದ ಭವಿಷ್ಯ ನಿಜವಾಗಿದ್ದು, ಪಂದ್ಯದ ಫಲಿತಾಂಶ ಇಂತಿದೆ:

ಪಂದ್ಯ 1:
ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 2:
ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 3:
ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 4:
ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 5:
ವೆಸ್ಟ್ ಇಂಡೀಸ್ ವಿರುದ್ಧ ಐರ್ಲೆಂಡ್ ಗೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 6:
ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 7:
ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 8:
ಯುಎಇ ವಿರುದ್ಧ ಜಿಂಬಾಬ್ವೆಗೆ ಜಯ [ಪಂದ್ಯದ ವರದಿ ಓದಿ]

ಪಂದ್ಯ 9:
ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆ ಜಯ [ಪಂದ್ಯದ ವರದಿ ಓದಿ]

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X