ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ವನಿತೆಯರಿಗೆ ಫೆಡರೇಷನ್ ಕಪ್

By Mahesh

ಮಚಲೀಪಟ್ಟಣಂ, ಡಿ.07: ಭಾರತೀಯ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಹಾಗೂ ಆಂಧ್ರ ಪ್ರದೇಶ ಬಾಲ್ ಬಾಡ್ಮಿಂಟನ್ ಆಸೋಸಿಯೇಷನ್ ನ ಆಶ್ರಯದಲ್ಲಿ ಇಲ್ಲಿ ನಡೆದ ಫೆಡರೇಷನ್ ಕಪ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ವನಿತೆಯರ ತಂಡ ಪ್ರಶಸ್ತಿಯನ್ನು ಪಡೆದು ಕೊಂಡಿದೆ.

ಡಿಸೆಂಬರ್ 4 ರಿಂದ 6 ರ ವರೆಗೆ ನಡೆದ 4 ನೇ ಫೆಡರೇಷನ್ ಕಪ್ ಬಾಲ್ ಬಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಗಳನ್ನು ಕೃಷ್ಣಾ ಜಿಲ್ಲಾ ಬಾಲ್ ಬಾಡ್ಮಿಂಟನ್ ಅಸೋಸಿಯೇಷನ್, ಮಚಲೀಪಟ್ಟಣಂ ಬಾಲ್ ಬಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿತ್ತು.

Badminton Federation Cup Championship

ಲೀಗ್ ಹಾಗೂ ಸೂಪರ್ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಗಳ ಅಂತಿಮ ಪಂದ್ಯದಲ್ಲಿ ಕರ್ನಾಟಕದ ವನಿತೆಯರ ತಂಡ ತಮಿಳುನಾಡು ತಂಡವನ್ನು 35-24, 35-18 ಮತ್ತು 35-18 ನೇರ ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.

ಸೂಪರ್ ಲೀಗ್ ನ ಇತರೆ ಪಂದ್ಯಗಳಲ್ಲಿ ಕರ್ನಾಟಕ ತಂಡ, ಕೇರಳ ತಂಡವನ್ನು 3-0, ಆಂಧ್ರವನ್ನು 3-0 ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ರಾಜ್ಯ ತಂಡ ಪರ ನಾಯಕಿ ಕಾವ್ಯ ಎಂ. ಆರ್, ರಂಜಿತ ಎಂ.ಪಿ, ಜಯಲಕ್ಷ್ಮಿ ಜಿ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು.

ರಾಜ್ಯ ತಂಡದ ಪರ ಆಡಿದ ಆರು ಮಂದಿ ಆಟಗಾರ್ತಿಯರು ಆಳ್ವಾಸ್ ತಂಡದ ಆಟಗಾರ್ತಿಯರಾಗಿದ್ದಾರೆ. ಹಾಗೂ ನಾಲ್ಕು ಮಂದಿ ತುಮಕೂರಿನ ಆಟಗಾರ್ತಿಯರು. ಮಹಿಳಾ ವಿಭಾಗದಲ್ಲಿ ತಮಿಳುನಾಡು ಹಾಗೂ ಕೇರಳ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಆಂಧ್ರ ತಂಡವು ಚಾಂಪಿಯನ್ ಆಗಿ ಪ್ರಶಸ್ತಿ ಪಡೆದರು. ಮಹಾರಾಷ್ಟ್ರ ತಂಡವು ರನ್ನರ್ ಆಪ್ ಆಗಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X