ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಸಿದ ಇಶಾಂತ್ ಶರ್ಮ, ರೈನಾಗೆ ಒನ್ ಇಂಡಿಯಾ ಸಲಹೆ

By Mahesh

ಮೆಲ್ಬೋರ್ನ್, ಡಿ.23: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗುತ್ತಿರುವ ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ವೇಗಿ ಇಶಾಂತ್ ಶರ್ಮ ಹಾಗೂ ಸುರೇಶ್ ರೈನಾ ಅವರ ಆಹಾರ ಸಮಸ್ಯೆಗೆ ಒನ್ ಇಂಡಿಯಾದಿಂದ ಸಲಹೆ ನೀಡುತ್ತಿದ್ದೇವೆ. ಆಯ್ಕೆ ಪಟ್ಟಿ ಲೇಖನದ ಕೊನೆಯಲ್ಲಿದೆ.

ಇತ್ತೀಚೆಗೆ ವೇಗಿ ಇಶಾಂತ್ ಶರ್ಮ, ಸುರೇಶ್ ರೈನಾ ಹಾಗೂ ರವಿಶಾಸ್ತ್ರಿ ಅವರು ಕಾಂಗೂರುಗಳ ನಾಡಲ್ಲಿ ಶಾಖಾಹಾರ ಸಿಗದೆ ಕಂಗಾಲಾಗಿ ಗಲ್ಲಿ ಗಲ್ಲಿ ಹುಡುಕಿಕೊಂಡು ರಸ್ತೆ ಬದಿ ಕೆಫೆಯೊಂದರಲ್ಲಿ ಊಟ ಮಾಡಿದ ಸುದ್ದಿ ಚಿತ್ರ ಎಲ್ಲೆಡೆ ಪ್ರಸಾರವಾಗಿತ್ತು. ಟೀಂ ಇಂಡಿಯಾದ ಕೆಲ ಆಟಗಾರರ ಸಮಸ್ಯೆ ಪರಿಹಾರಕ್ಕಾಗಿ ಬಿಸಿಸಿಐ ಒಬ್ಬ ಬಾಣಸಿಗನನ್ನು ನೇಮಿಸಿತ್ತು. [10 ಕಾರಣ ಪಟ್ಟಿ ಮಾಡಿದ ಧೋನಿ]

ಅದರೆ, ಅಡಿಲೇಡ್ ನಂತರ ಬ್ರಿಸ್ಬೇನ್ ನಲ್ಲಿ ಶಾಖಾಹಾರ ಸಿಗದೆ ಇಶಾಂತ್ ಶರ್ಮ ಹಸಿದ ಹೊಟ್ಟೆಯಲ್ಲೇ ಮೈದಾನದಲ್ಲಿ ಹೋರಾಟ ನಡೆಸಿದ್ದರು. ಮೆಲ್ಬೋರ್ನ್ ನಲ್ಲಿ ಈ ಕಷ್ಟ ಎದುರಾಗದಂತೆ ಮುನ್ನಚ್ಚರಿಕೆ ವಹಿಸುವುದು ಒಳ್ಳೆಯದು.

Ishant and Raina can try these restaurants in Melbourne

ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 0-2 ಅಂತರದಿಂದ ಹಿಂದಿದೆ. ಡಿ.26ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಮೊದಲು ಅಥವಾ ಆನಂತರ ಈ ಇಬ್ಬರು ಆಟಗಾರರು ಹೊಟ್ಟೆ ತುಂಬ ತಿನ್ನಲು ಅನುಕೂಲವಾಗುವಂಥ ಭಾರತೀಯ ರೆಸ್ಟೋರೆಂಟ್ ಗಳ ಪಟ್ಟಿ ಇಲ್ಲಿದೆ

'ಮಿಸ್ ಇಂಡಿಯಾ' ರೆಸ್ಟೋರೆಂಟ್ ಸದ್ಯಕ್ಕೆ ಈ ಇಬ್ಬರು ಆಟಗಾರರಿಗೆ ತುಂಬಾ ಇಷ್ಟವಾಗಿದೆ. ಮೆಲ್ಬೋರ್ನ್ ಕ್ರೀಡಾಂಗಣದಿಂದ 30 ಮೀಟರ್ ದೂರದಲ್ಲಿರುವ ಈ ರೆಸ್ಟೋರೆಂಟ್ ಶಾಖಾಹಾರ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಮೊದಲ ದಿನವೇ 50 ಚಪಾತಿ ಆರ್ಡರ್ ಟೀಂ ಇಂಡಿಯಾ ಕಡೆಯಿಂದ ಬಂದಿದೆ ಎಂದು ಮಿಡ್ ಡೇ ವರದಿ ಮಾಡಿದೆ. [ಜಡೇಜ ಹೊರಕ್ಕೆ, ಪಟೇಲ್ ಒಳಕ್ಕೆ]

ಮಿಸ್ ಇಂಡಿಯಾ ಅಲ್ಲದೆ ಮಿಕ್ಕ ರೆಸ್ಟೋರೆಂಟ್ ಗಳು ಇಲ್ಲಿವೆ
1. ಆಂಗನ್
2. ರೆಡ್ ಪೆಪ್ಪರ್
3. ತಂದೂರಿ ಡೆನ್
4. ಹಾರ್ನ್ ಪ್ಲೀಸ್
5. ಟೋಂಕ
6. ಫ್ಲೋರಾ
7. ಟೂ ಫ್ಯಾಟ್ ಇಂಡಿಯನ್ಸ್

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X