ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2016ರಲ್ಲಿ ಭಾರತದಲ್ಲೇ ವಿಶ್ವ ಟಿ20 ಟೂರ್ನಿ

By Mahesh

ದುಬೈ, ಜ.29: ಮುಂಬರುವ ವಿಶ್ವ ಟ್ವೆಂಟಿ 20 ಸಮರವನ್ನು ಆಯೋಜಿಸುವ ಹೊಣೆಯನ್ನು ಬಿಸಿಸಿಐ ಕೈಗೆ ಐಸಿಸಿ ನೀಡಿದೆ. 2016ರ ವಿಶ್ವಟಿ20 ಟೂರ್ನಿ ಭಾರತದಲ್ಲಿ ನಡೆಯಲಿದೆ ಎಂದು ಐಸಿಸಿ ಗುರುವಾರ ಪ್ರಕಟಿಸಿದೆ. ಈ ಮೂಲಕ ಮೊದಲ ಬಾರಿಗೆ ಐಸಿಸಿ ಟಿ20 ಟೂರ್ನಿ ಆಯೋಜನೆ ಭಾರತಕ್ಕೆ ಸಿಕ್ಕಿದೆ.

2016ರ ಮಾರ್ಚ್ 11 ರಿಂದ ಏಪ್ರಿಲ್ 3 ರ ತನಕ ವಿಶ್ವಟಿ20 ಟೂರ್ನಿ ಜರುಗಲಿದೆ. ಇದುವರೆವಿಗೂ ಐದು ಬಾರಿ ಐಸಿಸಿ ಟಿ20 ಟೂರ್ನಿಯನ್ನು ನಡೆಸಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಟಿ20 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಟಿ20 ಟೂರ್ನಿಯನ್ನು ಧೋನಿ ನೇತೃತ್ವದ ಟೀಂ ಇಂಡಿಯಾ ಗೆದ್ದುಕೊಂಡಿತ್ತು. [ಕೊಹ್ಲಿಗೆ ಈಗ ಪ್ರಥಮ ಬಾರಿಗೆ ಪಟ್ಟಕ್ಕೇರಿದ ಖುಷಿ]

India to host ICC World Twenty20 2016 from March 11

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಚುಟುಕು ಕ್ರಿಕೆಟ್ ಟೂರ್ನಿಯನ್ನು ಯಾವ ದೇಶವು ಎರಡು ಬಾರಿ ಗೆದ್ದು ಚಾಂಪಿಯನ್ ಎನಿಸಿಕೊಂಡಿಲ್ಲ. 2007ರಲ್ಲಿ ಭಾರತ, 2009ರಲ್ಲಿ ಪಾಕಿಸ್ತಾನ, 2010ರಲ್ಲಿ ಇಂಗ್ಲೆಂಡ್, 2012ರಲ್ಲಿ ವೆಸ್ಟ್ ಇಂಡೀಸ್ ಹಾಗೂ 2014ರಲ್ಲಿ ಶ್ರೀಲಂಕಾ ಟೂರ್ನಿಯ ಚಾಂಪಿಯನ್ ಆಗಿ ಟ್ರೋಫಿ ಎತ್ತಿದ್ದವು. [ಟಿ20: ಸ್ಪಿನ್ನರ್ ಸುನಿಲ್ 'ಸೂಪರ್' ವಿಶ್ವದಾಖಲೆ]

ವಿಶ್ವಟಿ20 ಆಯೋಜನೆ ಜೊತೆಗೆ 2019ರ ತನಕ ಐಸಿಸಿ ತನ್ನ ಟೂರ್ನಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮುಂದಿನ ವಿಶ್ವಕಪ್ 2019ರಲ್ಲಿ ಇಂಗ್ಲೆಂಡ್ ನಲ್ಲಿ ಮೇ 30 ರಿಂದ ಜುಲೈ 15ರ ತನಕ ನಡೆಯಲಿದೆ. ಇದಲ್ಲದೆ 2017 ಚಾಂಪಿಯನ್ ಟ್ರೋಫಿ ಟೂರ್ನಿ ಕೂಡಾ ಇಂಗ್ಲೆಂಡ್ ನಲ್ಲಿ ಜೂನ್ 1 ರಿಂದ ಜೂನ್ 19ರ ತನಕ ನಡೆಯಲಿದೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಐಸಿಸಿ ಇವೆಂಟ್ ಕ್ಯಾಲೆಂಡರ್ ಹೀಗಿದೆ:
* ಐಸಿಸಿ ವಿಶ್ವ ಟಿ20 ಅರ್ಹತಾ ಸುತ್ತು 2015, ಐರ್ಲೆಂಡ್/ಇಂಗ್ಲೆಂಡ್, ಜುಲೈ 6 ರಿಂದ 26, 2015.

* ಐಸಿಸಿ U19 ಕ್ರಿಕೆಟ್ ವಿಶ್ವಕಪ್ 2016 (ಬಾಂಗ್ಲಾದೇಶ), ಜನವರಿ 22ರಿಂದ ಫೆಬ್ರವರಿ 14, 2016.

* ಐಸಿಸಿ ವಿಶ್ವ ಟಿ20 2016 (ಭಾರತ), ಮಾರ್ಚ್ 11 ರಿಂದ ಏಪ್ರಿಲ್ 3, 2016.

* ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 (ಇಂಗ್ಲೆಂಡ್), ಜೂನ್ 1ರಿಂದ ಜೂನ್ 19, 2017.

* ಐಸಿಸಿ ಮಹಿಳಾ ವಿಶ್ವಕಪ್ 2017 (ಇಂಗ್ಲೆಂಡ್) ಆಗಸ್ಟ್ 4 ರಿಂದ ಆಗಸ್ಟ್ 27, 2017

* ಐಸಿಸಿ U19 ಕ್ರಿಕೆಟ್ ವಿಶ್ವಕಪ್ 2018 (ನ್ಯೂಜಿಲೆಂಡ್), ಜನವರಿ 12 ರಿಂದ ಫೆಬ್ರವರಿ 4, 2018.

* ಐಸಿಸಿ ವಿಶ್ವ ಟಿ20 ಅರ್ಹತಾಸುತ್ತು 2018 (ಬಾಂಗ್ಲಾದೇಶ), ಮಾರ್ಚ್ 1 ರಿಂದ ಏಪ್ರಿಲ್ 4, 2018.

* ಐಸಿಸಿ ಮಹಿಳಾ ವಿಶ್ವ ಟಿ20 2018 (ವೆಸ್ಟ್ ಇಂಡೀಸ್) ನವೆಂಬರ್ 2 ರಿಂದ ನವೆಂಬರ್ 25, 2018.

* ಐಸಿಸಿ ಕ್ರಿಕೆಟ್ ವಿಶ್ವಕಪ್ 2019 (ಇಂಗ್ಲೆಂಡ್), ಮೇ 30 ರಿಂದ ಜುಲೈ 15, 2019.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X