ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಈ 2 ಮಕ್ಕಳ ತಾಯಿ, 5 ದಿನಗಳಲ್ಲಿ ಮೌಂಟ್ ಎವರೆಸ್ಟ್ 2 ಬಾರಿ ಹತ್ತಿಳಿದ್ರು!

ಭಾರತದ ಮಹಿಳಾ ಪರ್ವತಾರೋಹಿ, ಎರಡು ಮಕ್ಕಳ ತಾಯಿ ಅಂಶು ಜೆಮ್ಸೆನ್ಪಾ ಅವರು ಐದು ದಿನಗಳಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಪರ್ವತಾರೋಹಣ ಮಾಡಿ ಹೊಸ ದಾಖಲೆ ಬರೆದಿದ್ದಾರೆ.

By Mahesh

ನವದೆಹಲಿ, ಮೇ 21: ಭಾರತದ ಮಹಿಳಾ ಪರ್ವತಾರೋಹಿ, ಎರಡು ಮಕ್ಕಳ ತಾಯಿ ಅಂಶು ಜೆಮ್ಸೆನ್ಪಾ ಅವರು ಐದು ದಿನಗಳಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಪರ್ವತಾರೋಹಣ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಒಟ್ಟಾರೆ, ಐದು ಬಾರಿ ಹಿಮಾಲಯದ ಶಿಖರ ಹತ್ತಿಳಿದ ದಾಖಲೆ ಬರೆದಿದ್ದಾರೆ.

ಅಂಶು ಅವರು ಮೇ 16 ರಂದು ಬೆಳಗ್ಗೆ 9 ಕ್ಕೆ ಪರ್ವತಾರೋಹಣ ಪೂರ್ಣಗೊಳಿಸಿದ್ದರು. ಬಳಿಕ ಇಂದು(ಮೇ 21) ಬೆಳಗ್ಗೆ 7.45ಕ್ಕೆ ಮತ್ತೊಮ್ಮೆ ಹಿಮಾಲಯ ಏರಿದ್ದಾರೆ. ಈ ಮೂಲಕ ಒಂದೇ ಋತುವಿನಲ್ಲಿ 118 ಗಂಟೆ 15 ನಿಮಿಷಗಳಲ್ಲಿ ಎರಡು ಬಾರಿ ಪರ್ವತ ಏರಿ ದಾಖಲೆ ನಿರ್ಮಿಸಿದ್ದಾರೆ.

India's Anshu Jamsenpa creates history, climbs Mt. Everest twice in five days


ಇದರ ಜತೆಗೆ ಐದು ದಿನಗಳ ಅಂತದಲ್ಲಿ ಎರಡು ಬಾರಿ ಹಿಮಾಲಯ ಹತ್ತಿ ಒಟ್ಟು 5 ಬಾರಿ ಪರ್ವತಾರೋಹಣ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಅರುಣಾಚಲ ಪ್ರದೇಶದ ಅಂಶು ಅವರು2011ರಲ್ಲಿ ಎರಡು ಬಾರಿ ಹಾಗೂ 2013ರಲ್ಲಿ ಒಂದು ಬಾರಿ ಪರ್ವತಾರೋಹಣ ಮಾಡಿದ್ದರು. ಎವರೆಸ್ಟ್ ಸಮ್ಮಿಟರ್ ಅಸೋಸಿಯೇಷನ್‌(ಇಸಿಎ) ಪ್ರಧಾನ ಕಾರ್ಯದರ್ಶಿ ಎಲ್‌.ಆರ್. ಶೆರ್ಪಾ ಅವರು ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ ಅಂಶು ಅವರ ದಾಖಲೆಯ ವಿವರ ನೀಡಿದರು.


ಸಾವು ನೋವು: ಅಮೆರಿಕದ ಅಲಬಾಮಾದ ರೋಲ್ಯಾಂಡ್ ಯಿಯರ್ ವುಡ್(50) ಅವರು ಎವರೆಸ್ಟ್ ಪರ್ವತ ಏರುವಾಗ ಮೂರನೇ ಹಂತದಲ್ಲಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ಇದು ಈ ಋತುವಿನಲ್ಲಿ ಮೂರನೇ ಟ್ರೆಕ್ಕರ್ ಸಾವಾಗಿದೆ. ಇನ್ನೊಂಡೆದ ಭಾರತದ ಉತ್ತರಪ್ರದೇಶದ ಮೊರಾದಾಬಾದಿನ ನಿವಾಸಿ ರವಿ ಕುಮಾರ್ ಅವರು ದಕ್ಷಿಣ ಇಳಿಜಾರಿನಲ್ಲಿ ನಾಪತ್ತೆಯಾಗಿದ್ದಾರೆ.
(ಐಎಎನ್ಎಸ್)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X