ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಶತಕ ಫೈನಲ್ ಸಂಭ್ರಮ

By:
Subscribe to Oneindia Kannada

ನ್ಯೂಜೆರ್ಸಿ, ಜೂನ್ 27: ಕೋಪಾ ಅಮೆರಿಕಾ 2016ರ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರರಿಗೆ Deja Vu[ಈ ಹಿಂದೆ ಕಂಡ ದೃಶ್ಯ] ಕಾಡಿದ್ದರೆ ಅದು ಅವರ ತಪ್ಪಲ್ಲ, ಚಿಲಿ ತಂಡದ ವಿರುದ್ಧವೇ ಕಳೆದ ಬಾರಿ ಸೋಲು ಕಂಡಿದ್ದ ಮೆಸ್ಸಿ ಪಡೆ ಈ ಬಾರಿಯೂ ಸೋತು ಸುಣ್ಣವಾಗಿದೆ.ಫೈನಲ್ ಪಂದ್ಯದ ರಸ ನಿಮಿಷಗಳನ್ನು 10 ಚಿತ್ರಗಳಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ.

ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಫೈನಲ್ ಫೈಟ್ ನಲ್ಲಿ ಚಿಲಿ ತಂಡ ಮತ್ತೊಮ್ಮೆ ಕಪ್ ಎತ್ತಿ ಮುತ್ತಿಟ್ಟಿದೆ. ಪೆನಾಲ್ಟಿ ಶೂಟೌಟ್ ನಲ್ಲಿ ಚಿಲಿ 4-2 ಅರ್ಜೆಂಟೀನಾವನ್ನು ಸೋಲಿಸಿದೆ. ವಿಶ್ವಕಪ್ ನಲ್ಲಿ ಜರ್ಮನಿ ವಿರುದ್ಧ, ಕೋಪಾ ಅಮೆರಿಕಾದಲ್ಲಿ ಸತತ ಎರಡು ಬಾರಿ ಚಿಲಿ ವಿರುದ್ಧ ಸೋಲು ಕಂಡ ಅರ್ಜೆಂಟೀನಾ ಹಾಗೂ ಮೆಸ್ಸಿಗೆ ಇದು ಘೋರ ದಿನವಾಗಿ ಪರಿಣಮಿಸಿದೆ.[ಟ್ವಿಟ್ಟರ್ ನಲ್ಲಿ ಲಿಯೊನೆಲ್ ಮೆಸ್ಸಿಯದ್ದೇ ಸುದ್ದಿ, ಸದ್ದು]

ನೈತಿಕ ಹೊಣೆ ಹೊತ್ತು ಮೆಸ್ಸಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. ಮೆಸ್ಸಿ ಹಾದಿಯಲ್ಲೇ ಮೆಸ್ಕಾರೆನಾಸ್, ಆಗ್ವೆರೋ ಕೂಡಾ ದೇಶದ ಪರ ಇನ್ಮುಂದೆ ಆಡುವುದಿಲ್ಲ ಎಂದಿದ್ದಾರೆ. [ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ]

ಸುಮಾರು 80 ಸಾವಿರಕ್ಕೂ ಅಧಿಕ ಅಭಿಮಾನಿಗಳನ್ನು ಹೊಂದಿದ್ದ ಮೆಟ್ ಲೈಫ್ ಸ್ಟೇಡಿಯಂನಲ್ಲಿ ಒಂದೆಡೆ ಸಂಭ್ರಮೋತ್ಸವ ಕಂಡು ಬಂದರೆ, ಮತ್ತೊಂದೆಡೆ ದುಃಖದ ವಾತಾವರಣ.

In Pictures : Chile beat Argentina 4-2 on penalties, Copa America Final, Messi Retires

ಶತಕದ ಸಂಭ್ರಮದಲ್ಲಿರುವ ಕೋಪಾ ಅಮೆರಿಕಾ ಕಪ್ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಗೋಲು ಗಳಿಸಲು ಎರಡು ತಂಡಗಳಿಗೆ ಆಗಲಿಲ್ಲ. ರೆಡ್ ಕಾರ್ಡ್ ಗಳಿಂದ ಅಧಿಕ ಅವಧಿ, ಪೆನಾಲ್ಟಿ ಶೂಟೌಟ್ ವೇಳೆ ಎರಡು ತಂಡಗಳಲ್ಲಿ ತಲಾ 10 ಆಟಗಾರರು ಮಾತ್ರ ಇದ್ದರು. 2014ರ ಫೈನಲ್ ಪಂದ್ಯದ ಕಾರ್ಬನ್ ಕಾಪಿಯಂತೆ ಕಂಡ ಈ ಪಂದ್ಯದಲ್ಲಿ ಮತ್ತೊಮ್ಮೆ ಚಿಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. [ಅರ್ಜೆಂಟೀನಾ ಮಣಿಸಿ ಕೋಪಾ ಅಮೆರಿಕಾಕ್ಕೆ ಮುತ್ತಿಟ್ಟ ಚಿಲಿ]

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಶತಕ ಫೈನಲ್ ಸಂಭ್ರಮ

ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವಲ್ಲಿ ವಿಫಲರಾದ ಲಿಯೊನೆಲ್ ಮೆಸ್ಸಿ

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಶತಕ ಫೈನಲ್ ಸಂಭ್ರಮ

ಫೈನಲ್ ಪಂದ್ಯದ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಪ್ರಶಸ್ತಿ ಸಮಾರಂಭದ ವೇದಿಕೆಗೇರಿದ ಮೆಸ್ಸಿ ಹಾಗೂ ಇತರೆ ಆಟಗಾರರು.

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಫೈನಲ್ ಸೇರಿದಂತೆ ಕೋಪಾ ಅಮೆರಿಕಾ ಟೂರ್ನಿಯುದ್ಧಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಮೆಸ್ಸಿ

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಸತತ ಎರಡನೇ ಬಾರಿಗೆ ಕೋಪಾ ಅಮೆರಿಕಾ ಕಪ್ ಎತ್ತಿದ ಸಂಭ್ರಮಾಚರಣೆಯಲ್ಲಿ ಚಿಲಿ ತಂಡ

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಸೋಲಿನ ಸೂತಕದಲ್ಲಿ ಮುಳುಗಿದ ಅರ್ಜೆಂಟೀನಾದ ಆಟಗಾರರು

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಪೆನಾಲ್ಟಿ ಮಿಸ್, ಕಪ್ ಮಿಸ್ ಮಾಡಿಕೊಂಡ ಮೆಸ್ಸಿ

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಪೆನಾಲ್ಟಿಯಲ್ಲಿ 4-2 ಅಂತರದಲ್ಲಿ ಸೋಲು ಕಂಡ ಅರ್ಜೆಂಟೀನಾ. ದುಃಖತಪ್ತ ಮೆಸ್ಸಿ

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಗೋಲ್ ಕೀಪರ್ ಆಗಿ ಉತ್ತಮ ಆಟ ಪ್ರದರ್ಶಿಸಿ, ಕಪ್ ಗೆಲ್ಲಲು ಕಾರಣರಾದ ಚಿಲಿ ತಂಡದ ಬ್ರಾವೊ

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಚಿಲಿಯ ಸ್ಯಾಂಟಿಯಾಗೋ ನಗರಿಯಲ್ಲಿ ಸಂಭ್ರಮಾಚರಣೆಯ ದೃಶ್ಯ.

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಫೈನಲ್ ಸಂಭ್ರಮ

ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಗೆದ್ದ ಚಿಲಿಯ ಬ್ರಾವೋ

ಈ ನಡುವೆ ಕೋಪಾ ಅಮೆರಿಕಾ 2016 ಆಯೋಜಕರು ಟಾಪ್ XI ಪ್ರಕಟಿಸಿದ್ದಾರೆ. ಚಿಲಿ ನಾಯಕ ಗೋಲ್ ಕೀಪರ್ ಕ್ಲಾಡಿಯೋ ಬ್ರಾವೋ ಅವರು ಗೋಲ್ ಕೀಪರ್ ಆಗಿದ್ದರೆ, ಜೀನ್ ಬೀಸೆಯೋರ್, ಗ್ಯಾರಿ ಮೆಡೆಲ್, ನಿಕೊಲಾಸ್ ಒಟಮೆಂಡಿ, ಮಾರಿಸಿಯೊ ಇಸ್ಲಾ ರಕ್ಷಣಾತ್ಮಕ ಆಟಗಾರರಾಗಿ, ಮಿಡ್ ಫೀಲ್ಡರ್ ಗಳಾಗಿ ಚಾರ್ಲ್ಸ್ ಅರಂಗ್ವೇಜ್, ಮೆಸ್ಕಾರೆನಾಸ್, ಅರ್ಟುರೋ ವಿಡಾಲ್ ಇದ್ದಾರೆ. ಫಾರ್ವರ್ಡ್ ನಲ್ಲಿ ಲಿಯೊನೆಲ್ ಮೆಸ್ಸಿ,ಅಲೆಕ್ಸಿಸ್ ಸ್ಯಾಂಚೆಜ್, ಈಡ್ವರ್ಡೊ ವರ್ಗಾಸ್ ಅಯ್ಕೆಯಾಗಿದ್ದಾರೆ.

English summary
In Pictures : After no goals were scored in regulation time and extra time, Chile and Argentina were once again taken to penalties to decide the Copa America final on June 27. Once again Chile came out on top in a 4-2 win after Lionel Messi and Lucas Biglia missed their spot kicks.
Please Wait while comments are loading...