ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸತೀಶ್ 'ಕ್ರಿಕೆಟ್ ಕಾರ್ಟೂನ್' ಲೋಕದಲ್ಲಿ ಒಂದು ವಿಹಾರ

By Mahesh

ಬೆಂಗಳೂರು, ಫೆ.1: ವಿಶ್ವಕಪ್ 2015ಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಕೃತಿ 'ನಾನ್ ಸ್ಟ್ರೈಕರ್' ಲೋಕಾರ್ಪಣೆಗೊಂಡಿದೆ.

ಮುಂಬೈ ಮೂಲದ ಪತ್ರಿಕೆಯೊಂದರಲ್ಲಿ 9 ವರ್ಷಗಳ ಕಾಲ ಕೆಲಸ ಮಾಡಿರುವ ಆಚಾರ್ಯ ವ್ಯಂಗ್ಯ ಚಿತ್ರಗಳು ಇಎಸ್ ಪಿಎಸ್ ಕ್ರಿಕ್ ಇನ್ಫೋ, ಸಿಫಿ, ಸಿಟಿ ಟುಡೆ, ಬಾಲಿವುಡ್ ಹಂಗಾಮಾ ಮುಂತಾದ ವೆಬ್ ಪೋರ್ಟಲ್ ಗಳಲ್ಲಿ ಜನಪ್ರಿಯವಾಗಿವೆ.

ಜ.31 ರಂದು ಬೆಂಗಳೂರಿನ ಎಂಜಿ ರಸ್ತೆಯ ಕಿಡ್ಸ್ ಕೆಂಪ್ ಬಳಿ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ನಾನ್ ಸ್ಟ್ರೈಕರ್ ಕೃತಿ ಬಿಡುಗಡೆಯಾಗಿದೆ. ಈ ಬಗ್ಗೆ ಪತ್ರಕರ್ತ ಶ್ರೀನಿಧಿ ಒಡಿಲ್ನಾಳ ಅವರು ನೀಡಿರುವ ವರದಿ ಇಲ್ಲಿದೆ. [ಟ್ವಿಟ್ಟರ್ ನಲ್ಲಿ ಆರ್.ಕೆ.ಲಕ್ಷ್ಮಣ್ ಗೆ ವ್ಯಂಗ್ಯಚಿತ್ರಕಾರರ ನಮನ]

ಕಾರ್ಟೂನ್ ಗೆ ಇನ್ನೊಂದು ಹೆಸರೇ ಸತೀಶ್ ಆಚಾರ್ಯ. ಹೌದು, ಕಾರ್ಟೂನ್ ದೇವತೆ ತನಗೆ ಒಲಿಯಬೇಕಾದರೆ ಅಷ್ಟರಮಟ್ಟಿಗೆ ತಪಸ್ಸು ಮಾಡಿದ್ದಾರೆ. ಈಗ ಕೈಯಲ್ಲಿ ಪೆನ್ನು ಹಿಡಿದುಕೊಂಡರೆ ಸಾಕು ಕ್ಷಣಾರ್ಧದಲ್ಲಿ ಅಂದ-ಚೆಂದದ ಕಾರ್ಟೂನ್ ರೆಡಿ. ಇವರ ಗೆರೆಬರೆಯ ಒಯ್ಯಾರದ ನಕ್ಕು-ನಗಿಸುವ ಕಾರ್ಟೂನ್ ಈಗ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ ಗ್ಯಾಲರಿಯಲ್ಲಿ ಜ.31ರಿಂದ ಫೆಬ್ರವರಿ 14ರವರೆಗೆ ನಡೆಯಲಿದೆ.

ಕ್ರೀಡಾ ವರದಿಗಾರರಿಗೆ ಕೃತಿ ಅರ್ಪಣೆ

ಕ್ರೀಡಾ ವರದಿಗಾರರಿಗೆ ಕೃತಿ ಅರ್ಪಣೆ

ಕಾರ್ಯಕ್ರಮದಲ್ಲಿ ಭಾರತೀಯ ತಂಡದ ಮಾಜಿ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್ ಕಲಾವಿದರಾದ ಪ್ರಭಾಕರ ರಾವ್ಬೈಲ್ ಹೀಗೆ ಹತ್ತು-ಹಲವಾರು ಕಲಾವಿದರು, ವ್ಯಂಗ್ಯಚಿತ್ರಾಭಿಮಾನಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಇನ್ನೊಂದು ವಿಶೇಷವೆಂದರೆ, ಸತೀಶ್ ಆಚಾರ್ಯ ಅವರ ಕ್ರಿಕೆಟ್ ಕಾರ್ಟೂನ್‍ಗಳ ಪುಸ್ತಕ "ನಾನ್ ಸ್ಟ್ರೈಕರ್" ಪುಸ್ತಕ ಕೂಡ ಲೋಕಾರ್ಪಣೆಗೊಂಡಿತು. ಈ ಪುಸ್ತಕವನ್ನು ಕ್ರೀಡಾ ವರದಿ ಮಾಡುವ ಮಾಧ್ಯಮ ಮಿತ್ರರಿಗೆ ಅರ್ಪಣೆ ಮಾಡಿರುವುದು ಇದರ ಇನ್ನೊಂದು ವಿಶೇಷ.

ಆರ್ ಕೆ ಲಕ್ಷ್ಮಣ್ ಅವರಿಗೆ ಶ್ರದ್ಧಾಂಜಲಿ

ಆರ್ ಕೆ ಲಕ್ಷ್ಮಣ್ ಅವರಿಗೆ ಶ್ರದ್ಧಾಂಜಲಿ

ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ 'ಕಾರ್ಟೂನ್ ಭೀಷ್ಮ'' ಎಂದೇ ಕರೆಯಲ್ಪಡುವ ದಿ. ಆರ್.ಕೆ.ಲಕ್ಷ್ಮಣ್ ಅವರಿಗೆ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮವೂ ನಡೆಯಿತು. ಸಾಹಿತಿ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ್, ಎಸ್.ಜಿ.ವಾಸುದೇವ್ ಹಲವು ಮಂದಿ ಉಪಸ್ಥಿತರಿದ್ದು ಗೌರವ ಸಮರ್ಪಿಸಿದರು.

ಎಲ್ಲಿ ಸಿಗುತ್ತದೆ ನಾನ್ ಸ್ಟ್ರೈಕರ್ ಕೃತಿ

ಎಲ್ಲಿ ಸಿಗುತ್ತದೆ ನಾನ್ ಸ್ಟ್ರೈಕರ್ ಕೃತಿ

ಎಸ್ ಪಿಎಸ್ ಕ್ರಿಕ್ ಇನ್ಫೋದಲ್ಲಿ ಪ್ರಸಾರವಾಗುವ ಹಲವು ವ್ಯಂಗ್ಯಚಿತ್ರಗಳ ಸಂಗ್ರಹವೇ ನಾನ್ ಸ್ಟೈಕರ್ ಕೃತಿ. ಸತೀಶ್ ಆಚಾರ್ಯ ಅವರ "ನಾನ್ ಸ್ಟ್ರೈಕರ್" ಪುಸ್ತಕ ಇದೀಗ ಅಮೆಜಾನ್.ಇನ್ ನಲ್ಲಿ ಲಭ್ಯವಿದೆ. ಲಿಂಕ್ ಇಲ್ಲಿದೆ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

* ಹೆಚ್ಚಿನ ಮಾಹಿತಿಗಾಗಿ ಸತೀಶ್ ಆಚಾರ್ಯ ಅವರ ಫೇಸ್ ಬುಕ್ ಪುಟ
* ಟ್ವಿಟ್ಟರ್ : @satishacharya
* ಬ್ಲಾಗ್: cartoonistsatish.blogspot.in
ಇಂಡಿಯನ್ ಕಾರ್ಟೂನ್ ಗ್ಯಾಲರಿ ತಲುಪುದು ಹೇಗೆ? :
ಬೆಂಗಳೂರಿನ ಎಂಜಿ ರಸ್ತೆಯ ಕಿಡ್ಸ್ ಕೆಂಪ್ ಬಳಿ ಇಂಡಿಯನ್ ಕಾರ್ಟೂನ್ ಗ್ಯಾಲರಿಯಿದೆ. ಟ್ರಿನಿಟಿ ವೃತ್ತದ ಸಮೀಪ ಬಸ್‌ ಇಳಿದರೆ ಸುಲಭವಾಗಿ ತಲುಪಬಹುದು.

ಹಲವು ಕಾರ್ಟೂನಿಸ್ಟ್ ಗಳ ಸಂಗಮ

ಹಲವು ಕಾರ್ಟೂನಿಸ್ಟ್ ಗಳ ಸಂಗಮ

ಹಲವು ಕಾರ್ಟೂನಿಸ್ಟ್ ಗಳ ಸಂಗಮಕ್ಕೆ ವೇದಿಕೆ ಒದಗಿಸಿದ ನಾನ್ ಸ್ಟ್ರೈಕರ್ ಪುಸ್ತಕ ಬಿಡುಗಡೆ ಸಮಾರಂಭ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X