ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ :ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾಕ್ಕೆ ಸೋಲು

By Mahesh

ಕ್ರೈಸ್ಟ್ ಚರ್ಚ್, ಫೆ.14: ಐಸಿಸಿ ವಿಶ್ವಕಪ್ ಸಮರ ಆರಂಭಗೊಂಡಿದೆ. ಅತಿಥೇಯ ನ್ಯೂಜಿಲೆಂಡ್ ಹಾಗೂ ಮಾಜಿ ವಿಶ್ವ ಚಾಂಪಿಯನ್ ಶ್ರೀಲಂಕಾ ವಿರುದ್ಧ ಉದ್ಘಾಟನಾ ಪಂದ್ಯಕ್ಕೆ ಹಗ್ಲೇ ಓವಲ್ ಮೈದಾನ ಸಾಕ್ಷಿಯಾಗಿತ್ತು. ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ 98 ರನ್‌ಗಳ ಸೋಲು ಕಂಡಿದೆ.

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರು ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಶ್ರೀಲಂಕಾಕ್ಕೆ ಪಂದ್ಯ ಗೆಲ್ಲಲು 332ರನ್ ಟಾರ್ಗೆಟ್ ನೀಡಿತ್ತು.

ಮುಖ್ಯಾಂಶಗಳು:

* ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆ 98 ರನ್ ಗಳ ಭರ್ಜರಿ ಜಯ.
* 46.1ಓವರ್ ಗಳಲ್ಲಿ 233 ರನ್ನಿಗೆ ಲಂಕಾ ಪಡೆ ಆಲೌಟ್.
* ನಾಯಕ ಏಂಜಲೋ ಮ್ಯಾಥ್ಯೂಸ್ 46 ರನ್ ಗಳಿಸಿದ್ದು ವ್ಯರ್ಥ.

ಲಂಕನ್ ಚೇಸ್:
* ಲಹಿರು ತಿರಿಮನ್ನೆ ಅರ್ಧ ಶತಕ, ನಿಧಾನಗತಿಯಲ್ಲಿ ಚೇಸಿಂಗ್ 91/1, 17 ಓವರ್ಸ್.
* ಏಕದಿನ ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರನಾದ ಕುಮಾರ್ ಸಂಗಕ್ಕಾರ
* ಆರಂಭದಿಂದಲೂ ತಿಣುಕಾಡಿದ ದಿಲ್ಶನ್ 21 ರನ್ ಗಳಿಸಿ ವೆಟ್ಟೋರಿಗೆ ರಿಟರ್ನ್ ಕ್ಯಾಚಿತ್ತು ಔಟ್.
*******
* ಶ್ರೀಲಂಕಾಕ್ಕೆ ಪಂದ್ಯ ಗೆಲ್ಲಲು 332ರನ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್
* 75 ರನ್ ಗಳಿಸಿ ಇನ್ನಿಂಗ್ಸ್ ನ ಕೊನೆ ಎಸೆತದಲ್ಲಿ ಔಟ್ ಆದ ಕೋರೆ ಆಂಡರ್ಸನ್.
* 36 ಎಸೆತಗಳಲ್ಲಿ 50 ರನ್ ಚೆಚ್ಚಿದ ಕೋರೆ ಆಂಡರ್ಸನ್.
* ಮೆಕಲಮ್ 65, ಕೇನ್ ವಿಲಿಯಮ್ಸನ್ 57, ಕೋರೆ ಆಂಡರ್ಸನ್ 75 ರನ್ ಗಳಿಸಿದರು.
* ಲಸಿತ್ ಮಾಲಿಂಗ ಅತ್ಯಂತ ಕಳಪೆ ಬೌಲರ್ 10-0-84-0 (8x4, 1x6).
* ನ್ಯೂಜಿಲೆಂಡ್ 47.3 ಓವರ್ ಗಳಲ್ಲಿ 300 ರನ್ ಸ್ಕೋರ್ ಮಾಡಿತು.
* 36.4 ಓವರ್ ಗಳಲ್ಲಿ ಕಿವೀಸ್ 200 /4 ಸ್ಕೋರ್ ಗಳಿಸಿತು.

New Zealand post 331/6

* ಆರಂಭಿಕ ಆಟಗಾರ ಗಪ್ಟಿಲ್ 49 ರನ್ ಗಳಿಸಿ ಔಟ್, ಲಕ್ಮಮ್ ಗೆ ಮೊದಲ ವಿಕೆಟ್ , ಕಿವೀಸ್ 23 ಓವರ್ಸ್ 137/2
* ಕೇನ್ ವಿಲಿಯಮ್ಸನ್ ಗೆ ಜೀವದಾನ, ಲಕ್ಮಮ್ ಎಸೆತದಲ್ಲಿ ನೀಡಿದ ಕ್ಯಾಚು ಕೈ ಚೆಲ್ಲಿದ ಸಂಗಕ್ಕಾರ.
* ಬ್ರೆಂಡನ್ ಮೆಕಲಮ್ 65 ರನ್ (49 ಎ, 10ಬೌಂ, 1ಸಿ) ಸ್ಟ್ರೈಕ್ ರೇಟ್ 132.7
* ನ್ಯೂಜಿಲೆಂಡ್ 111/1ರನ್, 15.5 ಓವರ್ಸ್ R/R 7.01
* ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ 110ರನ್, 15 ಓವರ್ಸ್
* ಮೆಕಲಮ್ ಭರ್ಜರಿ ಅರ್ಧಶತಕ 35 ಎಸೆತಗಳಲ್ಲಿ 50ರನ್ , ಈ ವಿಶ್ವಕಪ್ ಟೂರ್ನಿ ಮೊದಲ ಅರ್ಧಶತಕ ದಾಖಲು.
* ಲಸಿತ್ ಮಾಲಿಂಗ್ ಮೊದಲ ಸ್ಪೆಲ್ ನಲ್ಲಿ 4 ಓವರ್ ಗಳಲ್ಲಿ 41 ರನ್ (5 ಬೌಂಡರಿ, 1 ಸಿಕ್ಸ್) ಚೆಚ್ಚಿಸಿಕೊಂಡರು.
Brendan Mccullam

* ಮೊದಲ 10 ಓವರ್ಸ್ : ಕಿವೀಸ್ 77/0, ಮೆಕಲಮ್ 45 ರನ್ (28b, 8X4, 1X6)
* ಮೆಕಲಮ್ 7 ಭರ್ಜರಿ ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ ಕಿವೀಸ್ 8 ಓವರ್ಸ್ 68/0
* ನಾಯಕ ಬ್ರೆಂಡನ್ ಮೆಕಲಮ್ ಮೂರು ಬೌಂಡರಿ ನೆರವಿನಿಂದ ಕಿವೀಸ್ ನಾಲ್ಕು ಓವರ್ ಗಳಲ್ಲಿ 25 ರನ್.
* ಶ್ರೀಲಂಕಾ ಪರ ಲಸೀತ್ ಮಾಲಿಂಗ ಹಾಗೂ ಕುಲಶೇಖರ ನ್ಯೂ ಬಾಲ್ ಬೌಲರ್ಸ್.
* ಸಮಯ 3.40 AM IST ಸರಿಯಾಗಿ ವಿಶ್ವಕಪ್ 2015 ರ ಮೊದಲ ಬೌಂಡರಿ ದಾಖಲಾಯಿತು. ಕುಲಶೇಖರ್ ಮೊದಲ ಓವರ್ ನ ಕೊನೆ ಎಸೆತವನ್ನು ಮೆಕಲಮ್ ನಾಲ್ಕು ರನ್ ಆಗಿ ಪರಿವರ್ತಿಸಿದರು.
* ಮಳೆ ಕಾರಣ ಪಂದ್ಯ 3.37 AM IST ಗೆ ಆರಂಭ. ಮೆಕಲಮ್-ಗಪ್ಟಿಲ್ ಓಪನರ್ಸ್.


ಫೆ.14ರಿಂದ ಆರಂಭವಾಗುವ ಪಂದ್ಯಾವಳಿಗಳು ಮಾ.29ಕ್ಕೆ ಅಂತ್ಯ ಕಾಣುತ್ತವೆ. ಆರಂಭಿಕ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡವನ್ನು ಶ್ರೀಲಂಕಾ ಕ್ರೈಸ್ಟ್ ಚರ್ಚ್ (ಹಗಲು ಪಂದ್ಯ) ನಲ್ಲಿ ಎದುರಿಸಿದರೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಹಗಲು/ರಾತ್ರಿ ಪಂದ್ಯದಲ್ಲಿ ಸೆಣಸಲಿವೆ.
LIVE: World Cup Day 1 (February 14): Sri Lanka bowl in opener

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | 2015: ಟಾಪ್ 10 ಬದಲಾವಣೆ | ಈ ಯುವ ಸ್ಟಾರ್ ಗಳ ಮೇಲೆ ಕಣ್ಣಿರಿಸಿ

ಪರಸ್ಪರ ಕಾದಾಟ: ಒಟ್ಟು ಪಂದ್ಯ;89; ನ್ಯೂಜಿಲೆಂಡ್ 41;ಶ್ರೀಲಂಕಾ ಗೆಲುವು 40;ಟೈ1 ;ಯಾವುದೇ ಫಲಿತಾಂಶವಿಲ್ಲ: 7.

ಶ್ರೀಲಂಕಾ: ಏಂಜೆಲೋ ಮ್ಯಾಥ್ಯೂಸ್(ನಾಯಕ), ಲಹಿರು ತಿರುಮನ್ನೆ (ಉಪ ನಾಯಕ) ತಿಲಕರತ್ನೆ ದಿಲ್ಶನ್, ಕುಮಾರ್ ಸಂಗಕ್ಕಾರ (ವಿಕೆಟ್ ಕೀಪರ್), ಮಹೇಲ ಜಯವರ್ದನೆ, ದಿಮುತ್ ಕರುಣಾರತ್ನೆ, ಜೀವನ್ ಮೆಂಡಿಸ್, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ, ನುವಾನ್ ಕುಲಶೇಖರ, ರಂಗಣ ಹೇರಾತ್.

ನ್ಯೂಜಿಲೆಂಡ್: ಬ್ರೆಂಡನ್ ಮೆಕಲಮ್ (ನಾಯಕ, ವಿಕೆಟ್ ಕೀಪರ್), ಕೋರೆ ಆಂಡರ್ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಇಲಿಯಟ್, ಮಾರ್ಟಿನ್ ಗಪ್ಟಿಲ್, ಆಡಂ ಮಿಲ್ನೆ, ಲೂಕ್ ರಾಂಚಿ (ವಿಕೆಟ್ ಕೀಪರ್), ಟಿಮ್ ಸೌಥಿ, ರಾಸ್ ಟೇಲರ್, ಡೇನಿಯಲ್ ವೆಟ್ಟೋರಿ, ಕೇನ್ ವಿಲಿಯಂಸನ್.
ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X