ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ಲೀಗ್: ಭಾರತ ಟೂರ್ನಿಯಿಂದ ಹೊರಕ್ಕೆ, ಒಲಿಂಪಿಕ್ಸ್ ಗೆ ಪಾಕ್ ಅನರ್ಹ

By Mahesh

ಬೆಲ್ಜಿಯಂ, ಜುಲೈ 04: ವಿಶ್ವ ಹಾಕಿ ಲೀಗ್ ನ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಅತಿಥೇಯ ಬೆಲ್ಜಿಯಂ ವಿರುದ್ಧ 0-4 ಅಂತರದ ಸೋಲು ಕಂಡ ಭಾರತ ಟೂರ್ನಿಯಿಂದ ಹೊರಬಿದ್ದಿದೆ. ಇನ್ನೊಂದೆಡೆ ಐರ್ಲೆಂಡ್ ವಿರುದ್ಧ ಸೋಲು ಕಂಡ ಪಾಕಿಸ್ತಾನ, ಬ್ರೆಜಿಲ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

ಬ್ರೆಜಿಲ್ ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ 2016ಗೆ ಅರ್ಹತೆ ಪಡೆಯಲು ಪಾಕಿಸ್ತಾನದ ಪುರುಷರ ಹಾಕಿ ತಂಡಕ್ಕೆ ಐರ್ಲೆಂಡ್ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು. ಅದರೆ, ಪಾಕಿಸ್ತಾನ 0-1 ಗೋಲಿನಿಂದ ಸೋಲು ಕಂಡಿದೆ. ಈ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

 India suffer 0-4 defeat to Belgium

2ನೇ ನಿಮಿಷದಲ್ಲಿ ಗೋಸಿಯನ್ಸ್ ಗಳಿಸಿದ ಗೋಲಿನಿಂದ ಮುನ್ನಡೆ ಸಾಧಿಸಿದ ಬೆಲ್ಜಿಯಂ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಸರ್ದಾರ್ ಸಿಂಗ್ ತಂಡವನ್ನು ಕಾಡಿತು. ಬೆಲ್ಜಿಯಂ ಪರ ಫ್ಲೋರೆಂಟ್ ವ್ಯಾನ್ ಆಬುಲ್ ಉತ್ತಮ ಆಟ ಪ್ರದರ್ಶಿಸಿದರು.

ಭಾರತ ಈಗ ಕಂಚಿನ ಪದಕಕ್ಕಾಗಿ ಬ್ರಿಟನ್ ವಿರುದ್ಧ ಭಾನುವಾರ(ಜುಲೈ 05) ಸೆಣಸಬೇಕಿದೆ.ಮತ್ತೊಂದು ಉಪಾಂತ್ಯ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 1-3 ಅಂತರದಿಂದ ಸೋಲು ಕಂಡಿತು. ಕಳೆದ ವರ್ಷ ಹೇಗ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತವನ್ನು 1-2 ಅಂತರದಿಂದ ಇಂಗ್ಲೆಂಡ್ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X