ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ಅಧ್ಯಕ್ಷ ಚುನಾವಣೆ ಗೆದ್ದಿದ್ದೇಕೆ? ರಿಸೈನ್ ಮಾಡಿದ್ದೇಕೆ?

By Mahesh

ಜ್ಯೂರಿಚ್, ಜೂ.3: ಫೀಫಾ ಚುನಾವಣೆ ಗೆದ್ದು ಭ್ರಷ್ಟಚಾರದ ಆರೋಪ ಹೊರೆಸಿದವರ ವಿರುದ್ಧ ಎದೆ ಸೆಟೆದು ನಿಂತ ಸೆಪ್ ಬ್ಲಾಟರ್ ಅವರು ಅಧಿಕಾರಕ್ಕೇರಿದ ನಾಲ್ಕು ದಿನಗಳ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇಕೆ? ನಾನು ಚುನಾವಣೆ ಗೆಲ್ಲಬಲ್ಲೆ ಎಂದು ತೋರಿಸಿ ದಿಢೀರನೇ ಈ ರೀತಿ ನಿರ್ಧಾರ ಕೈಗೊಂಡಿದ್ದೇಕೆ? ಎಂಬ ಪ್ರಶ್ನೆಗಳು ಎದ್ದಿವೆ. ರಾಜೀನಾಮೆ ನೀಡಿ ಬ್ಲಾಟರ್ ನೀಡಿದ ಭಾಷಣದ ವಿವರ ಇಲ್ಲಿದೆ.

79ರ ಹರೆಯದ ಬ್ಲಾಟರ್ ಜ್ಯೂರಿಚ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ಆರು ದಿನಗಳ ಹಿಂದೆ ಜ್ಯೂರಿಚ್‌ನ ಹೊಟೇಲ್‌ಗೆ ದಾಳಿ ನಡೆಸಿದ್ದ ಸ್ವಿಸ್ ಪೊಲೀಸರು ಇಬ್ಬರು ಉಪಾಧ್ಯಕ್ಷರು ಸಹಿತ 7 ಫಿಫಾ ಅಧಿಕಾರಿಗಳನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬ್ಲಾಟರ್ ಅಧಿಕಾರವಧಿಯಲ್ಲಿ ಫೀಫಾದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿತ್ತು.

Full Text: Sepp Blatter quits as FIFA President

ಅದರೆ, ಮೇ 29 ರಂದು ಚುನಾವಣೆ ನಡೆದು ಐದನೇ ಬಾರಿಗೆ ಅಧ್ಯಕ್ಷ ಪದವಿಗೇರಿದ್ದರು. 17 ವರ್ಷಗಳ ಕಾಲ ಫುಟ್ಬಾಲ್ ಜಗತ್ತಿನ ಉನ್ನತ ಹುದ್ದೆ ಪಡೆದುಕೊಂಡ ಬ್ಲಾಟರ್ ಈಗ ರಾಜೀನಾಮೆ ನೀಡಿದ್ದಾರೆ. [ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]

ಯುರೋಪ್ ಫುಟ್​ಬಾಲ್ ಸಂಸ್ಥೆಗಳ ಒಕ್ಕೂಟ (ಯುಇಎಫ್​ಎ) ಅಧ್ಯಕ್ಷ ಫ್ರಾನ್ಸ್​ನ ಮೈಕೆಲ್ ಪ್ಲಾಟಿನಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಫೀಫಾದಿಂದ ಯುಇಎಫ್​ಎ ಹಾಗೂ ದಕ್ಷಿಣ ಅಮೆರಿಕ ಫುಟ್​ಬಾಲ್ ಸಂಸ್ಥೆಗಳ ಒಕ್ಕೂಟ ಬೇರ್ಪಡುವ ಬೆದರಿಕೆ, ಪ್ರತ್ಯೇಕ ವಿಶ್ವಕಪ್ ಆಯೋಜನೆಗೆ ಯತ್ನ ಇದೆಲ್ಲದರಿಂದ ಮನನೊಂದು ಬ್ಲಾಟರ್ ತಮ್ಮ ಸ್ಥಾನ ತ್ಯಜಿಸಿದ್ದಾರೆ ಎಂಬ ಸುದ್ದಿಯಿದೆ.

ತನ್ನ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಶೀಘ್ರವೇ ವಿಶೇಷ ಅಧಿವೇಶನ ಕರೆಯಲಾಗುತ್ತದೆ ಎಂದು 17 ವರ್ಷಗಳ ಕಾಲ ಫಿಫಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಬಟ್ಲರ್ ತಿಳಿಸಿದ್ದರು. ಸೆಪ್ ಬ್ಲಾಟರ್ ಭಾಷಣದ ಪೂರ್ಣ ಪಾಠ ಇಲ್ಲಿದೆ...

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X