ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ: ಹ್ಯೂಸ್ #12

By Mahesh

ಸಿಡ್ನಿ, ನ.27: ಆಟದ ವೇಳೆ ಗಾಯಗೊಂಡು ಸಾವನ್ನಪ್ಪಿದ ನತದೃಷ್ಟ ಕ್ರಿಕೆಟರ್ ಗಳ ದುರಂತಪಟ್ಟಿಯಲ್ಲಿ 12ನೇಯವರಾಗಿ ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಫಿಲ್ ಹ್ಯೂಸ್ ಗುರುವಾರ ಸೇರ್ಪಡೆಗೊಂಡಿದ್ದಾರೆ.

ಸೀನ್ ಅಬಾಟ್ ಎಸೆತ ಚೆಂಡು ಹ್ಯೂಸ್ ತಲೆಗೆ ಬಡಿದು ಹ್ಯೂಸ್ ಸಾವನ್ನಪ್ಪಿದ ಸುದ್ದಿ ಕ್ರಿಕೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಕ್ರೀಡಾಭಿಮಾನಿಗಳಂತೂ ಕಂಬನಿಯ ಕಡಲಲ್ಲಿ ಮುಳುಗಿದ್ದಾರೆ. ಅದರೆ, ಮೈದಾನದಲ್ಲಿ ಮಾರಾಣಾಂತಿಕ ಗಾಯಗೊಂಡು ಪ್ರಾಣತೆತ್ತ ಅವರ ಪಟ್ಟಿ ನೋಡಿದರೆ ಮೊದಲ ಸಾವು 1870ರಲ್ಲಿ ಆಗಿತ್ತು ಎಂದು ತಿಳಿದು ಬರುತ್ತದೆ.[ಹ್ಯೂಸ್ ಸಾವಿಗೆ ಕಂಬಿನಿ ಮಿಡಿದ ಟ್ವೀಟ್ ಲೋಕ]

1998ರಲ್ಲಿ ರಮಣ್ ಲಂಬಾ ಅವರ ಹಣೆಗೆ ಚೆಂಡು ಬಡಿದಾಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ಕರುಳು ಚುರುಕ್ ಎಂದಿತ್ತು. ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿ ತನಕ ಸುಮಾರು 12 ಜನ ಈ ರೀತಿ ಮೈದಾನದಲ್ಲಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಜಂಟಲ್ ಮೆನ್ಸ್ ಗೇಮ್ ನಲ್ಲಿ ದುರಂತಗಳ ಸಂಖ್ಯೆ ಕಡಿಮೆ ಇದ್ದರೂ ಎಚ್ಚರಿಕೆ ಗಂಟೆಯಂತೂ ಹೌದು. [ಕುತ್ತಿಗೆಯನ್ನೇ ಸೀಳಿದ್ದ ಮಾರಕ ಬೌನ್ಸರ್]

Full list: Cricketers who died of injuries on the field

ಮೈದಾನದಲ್ಲಿ ಗಾಯಗೊಂಡು ನೆಲಕ್ಕುರುಳಿ ಜೀವತೆತ್ತ ಕ್ರಿಕೆಟರ್ ಗಳ ಪಟ್ಟಿ ಇಂತಿದೆ:

12. ಫಿಲ್ ಹ್ಯೂಸ್ (ಆಸ್ಟ್ರೇಲಿಯಾ, 25) -2014
ನ.25ರಂದು ನ್ಯೂ ಸೌಥ್ ವೇಲ್ಸ್ ಪರ ಆಡುತ್ತಿದ್ದ ಹ್ಯೂಸ್ ಅವರು 63 ರನ್ ಗಳಿಸಿ ಆಡುತ್ತಿದ್ದಾಗ ದಕ್ಷಿಣ ಆಸ್ಟ್ರೇಲಿಯಾ ಪರ ಬೌಲರ್ ಸೀನ್ ಅಬಾಟ್ ಅವರು ಎಸೆದ ಬೌನ್ಸರ್ ಹ್ಯೂಸ್ ತಲೆಗೆ ಬಡಿದಿದೆ. ತಕ್ಷಣವೇ ಸಿಡ್ನಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ, ತಲೆ ಬುರುಡೆ ಸೀಳಿದ್ದು, ತೀವ್ರವಾಗಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಎರಡು ದಿನಗಳ ನಂತರ ಹ್ಯೂಸ್ ನಿಧನರಾಗಿದ್ದಾರೆ. [ಫಿಲ್ ಹ್ಯೂಸ್ ದುರಂತ ಸಾವು]

11. ಡರೇನ್ ರಾಂಡಲ್ (ದಕ್ಷಿಣ ಆಫ್ರಿಕಾ, 32)-2013
ರಾಂಡಲ್ ಗೆ ಕೂಡಾ ಹ್ಯೂಸ್ ಗೆ ಬಿದ್ದಂತೆ ಚೆಂಡು ತಲೆಯ ಒಂದು ಬದಿಗೆ ಬಡಿದಿದೆ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಾಂಡಲ್ ಪೆಟ್ಟು ತಿಂದು ಕ್ರೀಸ್ ನಲ್ಲೇ ಕುಸಿದು ಬಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲೇ ಪ್ರಾಣ ಕಳೆದುಕೊಂಡಿದ್ದರು.

10. ಜುಲ್ಫಿಕರ್ ಭಟ್ಟಿ(ಪಾಕಿಸ್ತಾನ, 22) 2013
ಪಾಕಿಸ್ತಾನದ ದೇಶಿ ಕ್ರಿಕೆಟ್ ಪಂದ್ಯವೊಂದರಲ್ಲಿ ಕ್ರಿಕೆಟರ್ ಜುಲ್ಫಿಕರ್ ಭಟ್ಟಿ ಎದೆಗೆ ರಭಸವಾಗಿ ಚೆಂಡು ತಗುಲಿತ್ತು. ತಕ್ಷಣವೇ ಕುಸಿದು ಬಿದ್ದ ಭಟ್ಟಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಅದರೆ, ಮಾರ್ಗ ಮಧ್ಯದಲ್ಲೇ ಭಟ್ಟಿ ಸಾವನ್ನಪ್ಪಿದರು.

9. ರಿಚರ್ಡ್ ಬಿಯೂಮೌಂಟ್ (ಇಂಗ್ಲೆಂಡ್, 33) 2012

ಆಟದ ನಡುವೆ ಬಳಲಿದಂತೆ ಕಂಡು ಬಂದ ರಿಚರ್ಡ್, ಎದೆ ಹಿಡಿದುಕೊಂಡು ಕುಸಿದ ಬಿದ್ದಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು, ಬಳಲಿಕೆಯಿಂದ ಹೃದಯಾಘಾತವಾಗಿದೆ ಆಸ್ಪತ್ರೆಗೆ ಬರುವ ಮುಂಚೆಯೇ ನಿಧನರಾಗಿದ್ದಾರೆ ಎಂದು ಘೋಷಿಸಿದ್ದಾರೆ.

8. ಅಲ್ಕ್ವೀನ್ ಜೆನ್ಕಿನ್ಸ್(ಇಂಗ್ಲೆಂಡ್, 72)-2009

ಇಂಗ್ಲೀಷ್ ಅಂಪೈರ್ ಜೆನ್ ಕಿನ್ಸ್ ಅವರು ಲೀಗ್ ಪಂದ್ಯವೊಂದರಲ್ಲಿ ಅಂಪೈರಿಂಗ್ ಮಾಡುವಾಗ ತಲೆಗೆ ಚೆಂಡಿನಿಂದ ಪೆಟ್ಟು ತಿಂದು ದುರಂತ ಸಾವನ್ನಪ್ಪಿದ್ದರು. ಫೀಲ್ಡರ್ ರೊಬ್ಬ ಎಸೆತ ಚೆಂಡು ಜೆನ್ ಕಿನ್ಸ್ ತಲೆಗೆ ಬಿದ್ದಿತ್ತು, ಗಾಯಗೊಂಡ ಜೆನ್ ಕಿನ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು. [ಆತ ದಾಖಲಿಸಿದ ಗೋಲನ್ನೇ ಗೆದ್ದ ಸಾವು!]

7. ವಾಸೀಂ ರಾಜ (ಪಾಕಿಸ್ತಾನ, 54) 2006
ಇಂಗ್ಲೀಷ್ ಕೌಂಟಿ ಕ್ರಿಕೆಟ್ ನಲಿ ಸರೆ ಪರ ಆಡುತ್ತಿದ್ದ ಪಾಕಿಸ್ತಾನಿ ಕ್ರಿಕೆಟರ್ ವಾಸೀಂ ರಾಜ ಅವರು ಬಂಕಿಂಗ್ ಹ್ಯಾಮ್ ಷೈರ್ ನಲ್ಲಿ ನಡೆದ ಪಂದ್ಯವೊಂದರಲ್ಲಿ ಆಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.

6. ರಮಣ್ ಲಂಬಾ (ಭಾರತ, 38) 1998
ಟೀಂ ಇಂಡಿಯಾ ಆಟಗಾರ ಢಾಕಾದಲ್ಲಿ ಬಾಂಗ್ಲಾದೇಶದ ಕ್ಲಬ್ ಕ್ರಿಕೆಟ್ ನಲ್ಲಿ ಆಡುವಾಗ ಶಾರ್ಟ್ ಲೆಗ್ ನಲ್ಲಿ ಹೆಲ್ಮೆಟ್ ಇಲ್ಲದೆ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡು ಅವರ ಹಣೆಗೆ ಬಡಿದು ಗಾಯಗೊಂಡು ಕೋಮಾಕ್ಕೆ ಜಾರಿದ್ದರು. ಮೂರು ದಿನದ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

5. ಇಯಾನ್ ಫೊಲಿ (ಇಂಗ್ಲೆಂಡ್, 30) 1993
ಇಂಗ್ಲೆಂಡ್ ಆಟಗಾರ ಇಯಾನ್ ಫೋಲಿ ಅವರು ಡರ್ಬಿಷೈರ್ ಪರ ಆಡುವಾಗ ಕಣ್ಣಿನ ಕೆಳಗೆ ಚೆಂಡು ಬಡಿದು ಗಾಯಗೊಂಡಿದ್ದರು. ವಾರ್ಕಿಂಗ್ಟನ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಇಯಾನ್ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು. [ಇಸ್ರೇಲ್ ಅಂಪೈರ್ ದುರಂತ ಸಾವು ]

4.ವಿಲ್ಫ್ ಸ್ಲಾಕ್(ಇಂಗ್ಲೆಂಡ್, 34) 1989
ಗಾಂಬಿಯಾದ ಬಂಜುಲ್ ನಲ್ಲಿ ನಡೆದ ದೇಸಿ ಕ್ರಿಕೆಟ್ ಪಂದ್ಯವೊಂದರಲ್ಲಿ ಕುಸಿದು ಬಿದ್ದ ಸ್ಲಾಕ್ ಅವರು ಸಾವನ್ನಪ್ಪಿದ್ದರು. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಚೆಂಡಿನ ಪೆಟ್ಟು ತಿಂದಿದ್ದ ಸ್ಲಾಕ್ ಸಾವಿನ ಕಾರಣ ನಿಗೂಢವಾಗೇ ಉಳಿದಿದೆ.

3. ಅಬ್ದುಲ್ ಅಜೀಜ್(ಪಾಕಿಸ್ತಾನ, 18) 1959
ಕರಾಚಿಯಲ್ಲಿ ಆಡುವಾಗ ಅಬ್ದುಲ್ ಅಜೀಜ್ ಎದೆಗೆ ಚೆಂಡು ಬಡಿದು ಅವರ ಹೃದಯಬಡಿತವನ್ನೇ ನಿಲ್ಲಿಸಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

2. ಆಂಡಿ ಡುಕಾಟ್(ಇಂಗ್ಲೆಂಡ್, 56) 1942
ಲಾರ್ಡ್ಸ್ ಮೈದಾನದಲ್ಲಿ ಆಡುವಾಗ ಹೃದಯಾಘಾತಕ್ಕೊಳಗಾಗಿ ಡುಕಾಟ್ ಸಾವನ್ನಪ್ಪಿದ್ದರು.

1. ಜಾರ್ಜ್ ಸಮ್ಮರ್ಸ್(ಇಂಗ್ಲೆಂಡ್, 25)- 1870
ಲಾರ್ಡ್ಸ್ ನಲ್ಲಿ ಎಂಸಿಸಿ ವಿರುದ್ಧ ನ್ಯಾಟಿಂಗ್ ಹ್ಯಾಮ್ ಷೈರ್ ಪಂದ್ಯ ನಡೆಯುವಾಗ ನ್ಯಾಟಿಂಗ್ ಹ್ಯಾಮ್ ಷೈರ್ ಪರ ಆಡುತ್ತಿದ್ದ ಜಾರ್ಜ್ ಅವರ ತಲೆಗೆ ಪೆಟ್ಟು ಬಿದ್ದಿತ್ತು. ಚಿಕಿತ್ಸೆ ಪಡೆಯದೆ ಮನೆಗೆ ತೆರಳಿದ್ದ ಜಾರ್ಜ್ ಅವರ ಸಾವಿನ ಸುದ್ದಿ ನಾಲ್ಕು ದಿನಗಳ ನಂತರ ತಿಳಿದು ಬಂದಿತು (ಐಎಎನ್ಎಸ್)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X