ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ಇಂಗ್ಲೆಂಡಿನ ರೂನಿ ನಿವೃತ್ತಿ

ಇಂಗ್ಲೆಂಡಿನ ಸರ್ವಶ್ರೇಷ್ಠ ಫುಟ್ಬಾಲರ್ ವೇಯ್ನ್ ರೂನಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ದಿಢೀರ್ ನಿವೃತ್ತಿ ಪಡೆಯುತ್ತುವುದಾಗಿ ಬುಧವಾರದಂದು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

By Mahesh

ಲಂಡನ್, ಆಗಸ್ಟ್ 23: ಇಂಗ್ಲೆಂಡಿನ ಸರ್ವಶ್ರೇಷ್ಠ ಫುಟ್ಬಾಲರ್ ವೇಯ್ನ್ ರೂನಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ದಿಢೀರ್ ನಿವೃತ್ತಿ ಪಡೆಯುತ್ತಿರುವುದಾಗಿ ಬುಧವಾರದಂದು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಹಾಲಿ ಎವರ್ಟನ್ ಪರ ಆಡುತ್ತಿರುವ 31ರ ಹರೆಯದ ರೂನಿ ಅವರು ಇಂಗ್ಲೆಂಡ್‌ ಪರ 119 ಪಂದ್ಯಗಳಲ್ಲಿ 53 ಗೋಲುಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

Wayne Rooney retires from England international duty


2016ರಲ್ಲಿ ಸ್ಕಾಟ್ಲೆಂಡ್ ಪರ ತಮ್ಮ ಕೊನೆ ಪಂದ್ಯವಾಡಿದ್ದ ರೂನಿ ಅವರು ಸದ್ಯ ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದ್ದಾರೆ.


ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದು ಎವರ್ಟನ್ ಸೇರಿರುವ ರೂನಿ ಅವರು ಈಗ ಟ್ರೋಫಿ ಗೆಲ್ಲಲು ಶ್ರಮಿಸುವುದಾಗಿ ಹೇಳಿದ್ದಾರೆ. ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಪಂದ್ಯದಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ 200ನೆ ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ.

2003ರಲ್ಲಿ ತನ್ನ 17ನೆ ವಯಸ್ಸಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದ ರೂನಿ ಅವರು 2014ರ ಫಿಫಾ ವಿಶ್ವಕಪ್‌ನಲ್ಲಿ ಉರುಗ್ವೆ ವಿರುದ್ಧ 75ನ ನಿಮಿಷದಲ್ಲಿ ಗೋಲು ಬಾರಿಸಿದ್ದರು. ಈ ಮೂಲಕ ವಿಶ್ವಕಪ್‌ನಲ್ಲಿ ಮೊತ್ತ ಮೊದಲ ಗೋಲು ಬಾರಿಸಿದ್ದರು.



ಆದರೆ, ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಸಾಧನೆ ಹಾಗೂ ನಾಯಕನಾಗಿ ರೂನಿ ಸಾಧನೆ ಟೀಕೆಗೊಳಗಾಯಿತು. 2006, 2010, 2014 ವಿಶ್ವಕಪ್, 2012 ಹಾಗೂ 2016 ಯುರೋ ಕಪ್ ನಲ್ಲಿ ಆಡಿದ್ದರು.

2018ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಇಂಗ್ಲೆಂಡ್ ಸಜ್ಜಾಗುತ್ತಿದ್ದು, ಮುಂದಿನ ತಿಂಗಳು ಮಾಲ್ಟಾ ಹಾಗೂ ಸ್ಲೋವಾಕಿಯ ವಿರುದ್ಧ ಪಂದ್ಯಗಳನ್ನಾಡಲಿದೆ.

Story first published: Wednesday, January 3, 2018, 10:06 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X