ಬೆಂಗಳೂರು ಫುಟ್ಬಾಲ್ ಕ್ಲಬ್ ಸೇರಿದ ಸ್ಪೇನಿನ ರೋಡ್ರಿಗೇಜ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 08: ಫೆಡೆರೇಷನ್ ಕಪ್ ವಿಜೇತರಾದ ಬೆಂಗಳೂರು ಫುಟ್ಬಾಲ್ ಕಪ್ ತಂಡಕ್ಕೆ ಸ್ಪೇನಿನ ಆಟಗಾರ ರೋಡ್ರಿಗೇಜ್ ಸೇರ್ಪಡೆಯಾಗುತ್ತಿದ್ದಾರೆ.

ಬ್ರಾಲಿಯೋ ನೊಬ್ರೆಗಾ ರೋಡ್ರಿಗೇಜ್ ಅವರು ಮುಂದಿನ ಒಂದು ವರ್ಷಗಳ ಕಾಲ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಯುವಾನ್ ಗೊನ್ಜಾಲೆಜ್, ದಿಮಾಸ್ ಡೆಲ್ಗಾಡೋ ಹಾಗೂ ಅಂಟಾನಿಯೋ ಡೊವಾಲೆ ನಂತರ ಕ್ಲಬ್ ಸೇರಿದ ನಾಲ್ಕನೇ ಸ್ಪೇನ್ ಮೂಲದವರಾಗಿದ್ದಾರೆ.

Rodriguez inks one-year deal with Bengaluru FC

31 ವರ್ಷ ವಯಸ್ಸಿನ ರೋಡ್ರಿಗೇಜ್ ಅವ್ರು ಕ್ರಿಪಿಯಾ ಮೊದಲ ಡಿವಿಷನ್ ಕ್ಲಬ್ ಡೊಕ್ಸಾ ಕಟೊಕೊಪಿಯಾಸ್ ಎಫ್ ಸಿ ಪರ ಸದ್ಯ ಆಡುತ್ತಿದ್ದಾರೆ. 2004ರಲ್ಲಿ ಅಟ್ಲೆಟಿಕೋ ಮ್ಯಾಡ್ರಿಡ್ ಪರ ಕ್ಲಬ್ ಫುಟ್ಬಾಲ್ ವೃತ್ತಿ ಆರಂಭಿಸಿದ ಲಾ ಲೀಗಾ ಆಟಗಾರ ರೋಡ್ರಿಗೇಜ್ ಅವರು ಗೆಟಾಫೆ, ಝರಾಗೊಜಾ, ರೆಕ್ರಾಟಿವೋ ಹುಲ್ವಾ, ಮಲೇಷಿಯಾದ ಜೊಹೊರ್ ದಾರೂಲ್ ತಾಜಿಮ್ ಪರ ಅಡಿದ ಅನುಭವ ಹೊಂದಿದ್ದಾರೆ.

ಈಗ ಬೆಂಗಳೂರು ಎಫ್ ಸಿ ಕೋಚ್ ಆಲ್ಬರ್ಟ್ ರೋಕಾ ಹಾಗೂ ನಾಯಕ ಸುನಿಲ್ ಛೆಟ್ರಿ ನೇತೃತ್ವದ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸದ್ಯ ಬ್ಲೂ ತಂಡ ಸ್ಪೇನಿನಲ್ಲೇ ತರಬೇತಿ ಪಡೆಯುತ್ತಿದೆ. ಆಗಸ್ಟ್ 23ರಂದು ಶ್ರೀಕಂಠೀವರ ಸ್ಟೇಡಿಯಂನಲ್ಲಿ ಉತ್ತರ ಕೊರಿಯಾದ ಕ್ಲಬ್ ಏಪ್ರಿಲ್ 25 ವಿರುದ್ಧ ಆಡಲಿದ್ದಾರೆ.

Indian football team ranked 96th

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Federation Cup champions Bengaluru FC have roped in Braulio Nobrega Rodriguez on a one-year deal.
Please Wait while comments are loading...