ಬೆಂಗಳೂರು ತಂಡದಿಂದ ಹೊಸ ಇತಿಹಾಸ, ಎಎಫ್ ಸಿ ಫೈನಲಿಗೆ ಲಗ್ಗೆ

By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ನಾಯಕ ಸುನಿಲ್ ಛೇಟ್ರಿ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್ ಸಿ) ತಂಡ ಏಷ್ಯನ್ ಫುಟ್​ಬಾಲ್ (ಎಎಫ್​ಸಿ) ಕಪ್ ​ನ ಫೈನಲಿಗೆ ಲಗ್ಗೆ ಇಟ್ಟಿದೆ. ಈ ಪ್ರತಿಷ್ಠಿತ ಟೂರ್ನಿಯ ಅಂತಿಮ ಹಂತ ತಲುಪಿದ ಭಾರತದ ಮೊಟ್ಟಮೊದಲ ಕ್ಲಬ್ ಎನ್ನುವ ಸಾಧನೆ ಬಿಎಫ್ ಸಿ ತಂಡದ್ದಾಗಿದೆ.

ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಎಫ್​ಸಿ ಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕ ಸುನೀಲ್ ಛೇಟ್ರಿ ಬಾರಿಸಿದ ಅವಳಿ ಗೋಲುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಸೆಮಿಫೈನಲ್ ಹಂತದ ಎರಡನೇ ಪಂದ್ಯ ಇದಾಗಿತ್ತು.

Bengaluru FC beat Johor; become first Indian team to enter AFC Cup final

ಹಾಲಿ ಚಾಂಪಿಯನ್ ಮಲೇಷ್ಯಾದ ಜೋಹರ್ ದಾರುಲ್ ತಜೀಮ್ (ಜೆಡಿಟಿ) ತಂಡವನ್ನು ಬಿಎಫ್ ಸಿ 1-3 ಅಂತರದಿಂದ ಸೋಲಿಸಿತು.

ಇದಕ್ಕೂ ಮುನ್ನ ಸೆಪ್ಟೆಂಬರ್ 28 ರಂದು ಮಲೇಷ್ಯಾದಲ್ಲಿ ನಡೆದಿದ್ದ ಸೆಮಿಫೈನಲ್ ಚರಣದ ಮೊದಲ ಪಂದ್ಯದಲ್ಲಿ ಬಿಎಫ್​ಸಿ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಈ ಮೂಲಕ ಜೆಡಿಟಿ ತಂಡವನ್ನು ಸೆಮಿಫೈನಲ್ ಲೆಗ್​ ನಲ್ಲಿ 4-2 ಗೋಲು ಸರಾಸರಿಯಲ್ಲಿ ಮಣಿಸಿದ ಬಿಎಫ್​ಸಿ ಫೈನಲ್​ ತಲುಪಿದೆ.

ಬಿಎಫ್​ಸಿ ತಂಡದ ಪರ ನಾಯಕ ಛೇಟ್ರಿ (41, 67ನೇ ನಿಮಿಷ) ಜೋಡಿ ಗೋಲು ಬಾರಿಸಿದರು. ಗೊಂಜಾಲೆಜ್ 75ನೇ ನಿಮಿಷದಲ್ಲಿ ಗೋಲು ಬಾರಿಸಿ ಗೆಲುವಿನ ಅಂತರ ಹಿಗ್ಗಿಸಿದರು.

ಎಎಫ್​ಸಿ ಕಪ್ ಫೈನಲ್ ಪಂದ್ಯ ನವೆಂಬರ್ 5ರಂದು ಕತಾರ್ ನ ದೋಹಾದಲ್ಲಿ ನಡೆಯಲಿದೆ. ಬಿಎಫ್​ಸಿ ತಂಡ ಇರಾಕ್​ನ ಅಲ್ ಕ್ಯುವಾ ಅಲ್ ಜಾವಿಯಾ ತಂಡವನ್ನು ಪ್ರಶಸ್ತಿಗಾಗಿ ಎದುರಿಸಲಿದೆ. (ಒನ್ ಇಂಡಿಯಾ ಸುದ್ದಿ)

English summary
Bengaluru FC became the first Indian club to reach the Asian Football Confederation (AFC) Cup final by trouncing holders Malaysia's Johor Darul Ta'zim 3-1 in the semi-final second leg here on Wednesday (Oct 19).
Please Wait while comments are loading...