ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ನಿಂದ ಫೀಫಾ, ಯುಇಎಫ್ಎ ಅಧ್ಯಕ್ಷರಿಗೆ ನಿಷೇಧ

By Mahesh

ಜ್ಯೂರಿಚ್, ಡಿ. 21: ಫೀಫಾ ಚುನಾವಣೆ ಗೆದ್ದ ನಂತರ ಅಚ್ಚರಿ ಎಂಬಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸೆಪ್ ಬ್ಲಾಟರ್ ಹಾಗೂ ಯುಇಎಫ್ಎ ಅಧ್ಯಕ್ಷ ಮೈಕಲ್ ಪ್ಲಾಟಿನಿ ಅವರಿಗೆ 8 ವರ್ಷಗಳ ಕಾಲ ಫುಟ್ಬಾಲ್ ನಿಂದ ನಿಷೇಧ ಹೇರಲಾಗಿದೆ.

17 ವರ್ಷಗಳ ಕಾಲ ಫುಟ್ಬಾಲ್ ಜಗತ್ತಿನ ಉನ್ನತ ಹುದ್ದೆ ಪಡೆದುಕೊಂಡ 79 ವರ್ಷ ವಯಸ್ಸಿನ ಬ್ಲಾಟರ್ ನಂತರ ಚುನಾವಣೆ ಗೆದ್ದು ರಾಜೀನಾಮೆ ನೀಡಿದ್ದರು. ಯುರೋಪ್ ಫುಟ್​ಬಾಲ್ ಸಂಸ್ಥೆಗಳ ಒಕ್ಕೂಟ (ಯುಇಎಫ್​ಎ) ಅಧ್ಯಕ್ಷ ಫ್ರಾನ್ಸ್​ನ ಮೈಕೆಲ್ ಪ್ಲಾಟಿನಿ ಅವರು ಫೀಫಾದ ನೂತನ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. [ಫೀಫಾ ಅಧ್ಯಕ್ಷ ಚುನಾವಣೆ ಗೆದ್ದಿದ್ದೇಕೆ? ರಿಸೈನ್ ಮಾಡಿದ್ದೇಕೆ?]

Sepp Blatter and Michel Platini banned for eight years by Fifa

ಆದರೆ, ಇಬ್ಬರ ವಿರುದ್ಧ 2 ಮಿಲಿಯನ್ ಡಾಲರ್ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಫೀಫಾ ಭ್ರಷ್ಟಾಚಾರ ನಿಗ್ರಹ ಸಮಿತಿ ನೀಡಿದ ವರದಿ ಆಧಾರಿಸಿ ಇಬ್ಬರಿಗೂ ನಿಷೇಧ ಹೇರಲಾಗಿದೆ. ಬ್ಲಾಟರ್ ಅವರಿಗೆ 40,000 ಡಾಲರ್ ಹಾಗೂ ಪ್ಲಾಟಿನಿಗೆ 80,000 ಡಾಲರ್ ದಂಡ ವಿಧಿಸಲಾಗಿದೆ. [ಚಿತ್ರಗಳು : ಫೀಫಾ ವಿಶ್ವಕಪ್ ಪ್ರಶಸ್ತಿಗಳ ವಿಜೇತರು]

60 ವರ್ಷ ವಯಸ್ಸಿನ ಪ್ಲಾಟಿನಿ ಅವರು ಮೂರು ಬಾರಿ ಯುರೋಪಿನ ಶ್ರೇಷ್ಠ ಆಟಗಾರ ಎನಿಸಿಕೊಂಡ ಫ್ರಾನ್ಸ್ ತಂಡದ ನಾಯಕರಾಗಿದ್ದರು. 2007ರಿಂದ ಯುಇಎಫ್ಎ ಅಧಿಕಾರ ವಹಿಸಿಕೊಂಡಿದ್ದರು.

ಫೀಫಾ ಅಧ್ಯಕ್ಷೀಯ ಚುನಾವಣೆ ಫೆಬ್ರವತರಿ 26ರಂದು ನಡೆಯಲು ನಿಗದಿಯಾಗಿದೆ. ಏಷ್ಯನ್ ಫುಟ್ಬಾಲ್ ನ ಮುಖ್ಯಸ್ಥ ಬಹರೇನ್ ನ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂ ಅಲ್ ಖಲೀಫಾ, ದಕ್ಷಿಣ ಆಫ್ರಿಕಾ ಉದ್ಯಮಿ ಟೊಕ್ಯೋ ಸೆಕ್ಸ್ ವಾಲೆ, ಜೋರ್ಡನ್ ದೊರೆ ಅಲಿ ಬಿನ್ ಅಲ್ ಹಸನ್, ಸ್ವಿಜರ್ಲೆಂಡ್ ನ ಜಿಯಾನಿ ಇನ್ಫಾಟಿನೋ, ಫ್ರಾನ್ಸಿನಿ ಜೆರೊಮಿ ಶಾಂಪೇನ್ ಅವರು ಅಧ್ಯಕ್ಷ ಪದವಿ ಮೇಲೆ ಕಣ್ಣು ಹಾಕಿದ್ದಾರೆ. 209 ಸದಸ್ಯ ರಾಷ್ಟ್ರಗಳು ಗುಪ್ತ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿವೆ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X