ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ದಾಖಲೆಯ ಚಿನ್ನದ ಬೂಟು ಗೆದ್ದ ಅದ್ಭುತ ತಾರೆ ರೊನಾಲ್ಡೊ

By Mahesh

ಮ್ಯಾಡ್ರೀಡ್, ಅ.14: ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊ ಅವರು ಸತತ ನಾಲ್ಕನೇ ಬಾರಿ ಚಿನ್ನದ ಬೂಟು ಗೆದ್ದು ಹೊಸ ದಾಖಲೆ ಬರೆದಿದ್ದಾರೆ. ಯುರೋಪಿಯನ್ ಲೀಗ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

2014ನೇ ಸಾಲಿನ ಅತ್ಯುತ್ತಮ ಫುಟ್ಬಾಲ್ ಆಟಗಾರ ನಾಗಿ ಪ್ರತಿಸ್ಪರ್ಧಿ ಲಿಯೊನೆಲ್ ಮೆಸ್ಸಿ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಫೀಫಾ ಬ್ಯಾಲಾನ್ ಡಿ ಒರ್ ಪ್ರಶಸ್ತಿಯನ್ನು ರೊನೊಲ್ಡೋ ಗಳಿಸಿದ್ದರು. ಈಗ ಚಿನ್ನದ ಬೂಟು ಪಡೆದುಕೊಂಡಿದ್ದಾರೆ. ನಾಲ್ಕು ಬಾರಿ ಯಾವೊಬ್ಬ ಆಟಗಾರ ಕೂಡಾ ಚಿನ್ನದ ಬೂಟು ಗೆದ್ದಿಲ್ಲ. [ರೊನಾಲ್ಡೋಗೆ 2014ರ ಅತ್ಯುತ್ತಮ ಆಟಗಾರ ಪಟ್ಟ]

Cristiano Ronaldo receives record 4th Golden Boot

ಕಳೆದ ಸೀಸನ್ ನಲ್ಲಿ 35 ಲಾ ಲೀಗಾ ಮ್ಯಾಚ್ ಗಳಲ್ಲಿ 48 ಗೋಲುಗಳನ್ನು ಗಳಿಸಿದ್ದಾರೆ. ಸ್ಪಾನೀಷ್ ದೈತ್ಯ ತಂಡ ರಿಯಲ್ ಮ್ಯಾಡ್ರೀಡ್ ಪರ ಆಡಿ ಮೂರು ಬಾರಿ ಚಿನ್ನದ ಬೂಟು ಗೆದ್ದಿದ್ದಾರೆ.ಮತ್ತೊಂದು 2007-08ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಗಿ ಗೆದ್ದುಕೊಂಡಿದ್ದರು,

30 ವರ್ಷ ವಯಸ್ಸಿನ ರೊನೊಲ್ಡೊ ಅವರು ಪ್ರಶಸ್ತಿ ಸ್ವೀಕರಿಸಲು ತಾಯಿ ಹಾಗೂ ಮಗನೊಂದಿಗೆ ಬಂದಿದ್ದರು. ರಿಯಲ್ ಮ್ಯಾಡ್ರಿಡ್ ಕೋಚ್ ರಾಫೆಲ್ ಬೆನೆತೆಜ್, ಕ್ಲಬ್ ಅಧ್ಯಕ್ಷ ಫೊರೆಂಟಿನೋ ಪೆರೆಜ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. [ಗೇಲ್ ಈಗ ರೊನಾಲ್ಡೊ ಸ್ಟೈಲ್]

ಸ್ಪಾನೀಷ್ ಲೀಗ್ ನ ಸ್ಟಾರ್: ರೊನೊಲ್ಡೊ ಅವರು ಇತ್ತೀಚೆಗೆ ಮ್ಯಾಡ್ರಿಡ್ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದರು. ದಿಗ್ಗಜ ರಾಲ್ ಗೊನ್ಜಾಲೆಜ್ ಅವರ 324 ಗೋಲುಗಳ ದಾಖಲೆಯನ್ನು ರೊನೊಲ್ಡೊ ಮುರಿದಿದ್ದಾರೆ.

ನಾಲ್ಕನೇ ಬಾರಿಗೆ ಚಿನ್ನದ ಬೂಟು ಗಳಿಸುತ್ತಿರುವುದು ನಿಜಕ್ಕೂ ನನಗೆ ನನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ. ಈ ಟ್ರೋಫಿ ನನಗೆ ಅತ್ಯಂತ ಮಹತ್ವದ್ದಾಗಿದ್ದು, ನನ್ನ ವೃತ್ತಿ ಬದುಕಿನ ಅತ್ಯಂತ ಸಂತಸದ ಕ್ಷಣಗಳನ್ನು ನನಗೆ ನೀಡಿದೆ. ಇನ್ನೂ ಹೆಚ್ಚು ಪ್ರಶಸ್ತಿ ಗೆಲ್ಲಲು ಉತ್ಸಾಹ ನೀಡುತ್ತದೆ ಎಂದು ರೊನೊಲ್ಡೊ ಪ್ರತಿಕ್ರಿಯಿಸಿದ್ದಾರೆ.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X