ಒಂದೇ ನೆಲದಲ್ಲಿ ಭಾರತ- ಪಾಕಿಸ್ತಾನ ನಡುವೆ ಎರಡು ಪಂದ್ಯ

Posted By:
Subscribe to Oneindia Kannada

ಲಂಡನ್, ಜೂನ್ 17: ಭಾರತೀಯ ಕ್ರೀಡಾಭಿಮಾನಿಗಳಿಗೆ ಇದೊಂದು ರೋಮಾಂಚಕ ಕ್ಷಣ. ಲಂಡನ್ ನಲ್ಲಿ ನಡೆಯಲಿರುವ ಎರಡು ಮಹತ್ವದ ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಅಪರೂವೆಂಬಂಥ ಕ್ಷಣವಿದು. ಲಂಡನ್ ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಇದೇ ಭಾನುವಾರ ಭಾರತ , ಪಾಕಿಸ್ತಾನ ನಡುವೆ ನಡೆಯಲಿದೆ.

Final, semi-final: Two India-Pakistan contests in London on Super Sunday

ಕಾಕತಾಳೀಯವೆಂಬಂತೆ, ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ನ ಸೆಮಿಫೈನಲ್ ಪಂದ್ಯದಲ್ಲಿ ಭಾನುವಾರ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಕ್ರಿಕೆಟ್ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 3 ಗಂಟೆಗೆ ಶುರುವಾದರೆ, ಹಾಕಿ ಪಂದ್ಯ ಸಂಜೆ 6:30ಗೆ ಆರಂಭವಾಗಲಿದೆ.

Final, semi-final: Two India-Pakistan contests in London on Super Sunday

ಅತ್ತ, ಕ್ರಿಕೆಟ್, ಇತ್ತ ಹಾಕಿ... ಇಷ್ಟೇ ವ್ಯತ್ಯಾಸ. ಎರಡೂ ಪ್ರಾಕಾರದ ಕ್ರೀಡೆಗಳಲ್ಲಿ ಮುಖಾಮುಖಿಯಾಗುತ್ತಿರುವುದು ಸಾಂಪ್ರದಾಯಿಕ ಎದುರಾಳಿಗಳು. ಹಾಗಾಗಿ, ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಎರಡು 'ಹೈ ವೋಲ್ಟೇಜ್' ಪಂದ್ಯಗಳನ್ನು ನೋಡುವ ಅವಕಾಶ.

ಈ ಎರಡೂ ಪಂದ್ಯಗಳಲ್ಲಿ ಭಾರತವೇ ಗೆದ್ದರೆ ಮುಗೀತು, ಭಾರತೀಯರ ಸಂಭ್ರಮವಂತೂ ಮುಗಿಲು ದಾಟಿ ಅಂತರಿಕ್ಷ ಮುಟ್ಟುತ್ತದೆ. ಆದರೆ, ಎರಡೂ ಪಂದ್ಯಗಳನ್ನು ಸೋತರೆ ಪಾಕಿಸ್ತಾನದಲ್ಲಿ ಗುಜರಿ ಅಂಗಡಿಗಳಿಗೆ ಬರುವ ಟಿವಿಗಳ ಸಂಖ್ಯೆ ದುಪ್ಪಟ್ಟಾಗಬಹುದು!

English summary
India and Pakistan will face off in the Men Hockey World League (HWL) Semi-finals in London on Sunday from 6.30 PM IST. India started their campaign with a win over Scotland on Friday.
Please Wait while comments are loading...