ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಡಕಾರ್ ರ‍್ಯಾಲಿ: ದಾಖಲೆಗೆ ಬೆಂಗಳೂರು ಹುಡುಗ ಸಿದ್ಧ

ಮುಂಬೈ, ಡಿ. 16: ಬೈಕ್ ರ‍್ಯಾಲಿ ಯಲ್ಲಿ ಸಾಧನೆ ಮಾಡಿರುವ ಸಿ ಎಸ್ ಸಂತೋಷ್ ಇದೀಗ ಮತ್ತೊಂದು ದಾಖಲೆ ಮಾಡಲು ಸಿದ್ಧರಾಗಿದ್ದಾರೆ. ದಕ್ಷಿಣ ಅಮೆರಿಕದಲ್ಲಿ ನಡೆಯಲಿರುವ 9 ಸಾವಿರ ಕಿಮೀ 'ಡಕಾರ್ ರ‍್ಯಾಲಿ' ನಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಸ್ಪರ್ಧೆ 2009 ರ ನಂತರ ದಕ್ಷಿಣ ಅಮೆರಿಕದಲ್ಲಿ ನಡೆಯುತ್ತಿದೆ. ರಾಜಸ್ಥಾನದಲ್ಲಿ ನಡೆದ 'ಮಾರುತಿ ಸುಝಕಿ ಡೆಸರ್ಟ್ ಸ್ಟರ್ಮ್' ವಿಜಯಿಯಾಗಿರುವ ಭಾರತದ ಸಂತೋಷ್ ಅದಕ್ಕು ಮೊದಲು ಹಿಮಾಲಯದಲ್ಲೂ ರೇಸ್ ಕೈಗೊಂಡಿದ್ದರು. ಜನವರಿ 4 ರಿಂದ 17 ರವರೆಗೆ ನಡೆಯಲಿರುವ 13 ಹಂತದ ಸ್ಪರ್ಧೆಯಲ್ಲಿ ದಕ್ಷಿಣ ಅಮೆರಿಕದ ಅರ್ಜೆಂಟೀನಾ, ಚಿಲಿ ಮತ್ತು ಬೊಲೊವಿಯಾದ ಆಟಗಾರರು ಪಾಲ್ಗೊಳ್ಳಲಿದ್ದಾರೆ.[ಚಿಕ್ಕಮಗಳೂರಿನಲ್ಲಿ ಕಾಫಿ ಡೇ ರೇಸ್]

bike

ಇದು ನನಗೆ ಬಹಳ ಸಂತಸ ತರುವ ವಿಷಯ. 'ಸುಪರ್ ಕ್ರಾಸ್' ನ್ನು ನಾನು 2005ರಲ್ಲಿ ಆರಂಭಿಸಿದ್ದೆ. ಅಲ್ಲಿಂದ ಡರ್ಟ್ ಟ್ರ್ಯಾಕ್ ನಲ್ಲಿ ಭಾಗವಹಿಸಲು ಆರಂಭಿಸಿದೆ. ದೇಶದ ಹೊರಗಡೆಯ ರೇಸ್ ನಲ್ಲಿ ಪಾಲ್ಗೊಂಡೆ. ಡಕಾರ್ ಸ್ಪರ್ಧೆ ನನ್ನ ಜೀವನದ ಅತಿದೊಡ್ಡ ಸವಾಲಾಗಿದೆ. ಇಲ್ಲಿಯೂ ಯಶಸ್ಸು ಸಾಧಿಸುತ್ತೇನೆ ಎಂದು ಆರು ಅಡಿ ಎತ್ತರವಿರುವ ನಾಲ್ಕು ಸಾರಿ ನ್ಯಾಶನಲ್ ಸೂಪರ್ ಪ್ರಶಸ್ತಿ ಜಯಿಸಿರುವ ಸಂತೋಷ್ ಹೇಳುತ್ತಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್, ರೆಡ್ ಬುಲ್ ಸಂಸ್ಥೆ ಈ ಸ್ಪರ್ಧೆ ನಡೆಸಲು ಮುಂದೆ ಬಂದಿದೆ. ಮೊದಲನೇ ವರ್ಷ ಡಕಾರ್ ರೇಸ್ ಕಂಪ್ಲಿಟ್ ಮಾಡಿ ಹೊಸ ಅನುಭವ ಪಡೆದುಕೊಳ್ಳಬೇಕು ಎಂದು ಕೊಂಡಿದ್ದೇನೆ. ಡಕಾರ್ ರೇಸ್ ನಲ್ಲಿ ಬೈಕ್ ಗಳು, ಕಾರು, ಲಾರಿಗಳು ಸಹ ಪಾಲ್ಗೊಳ್ಳಲಿವೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X