ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಪ್ಪರೆ ಯುವಿ, ಭಲೇ ರೋಹಿತ್, ಸ್ಪಿನ್ ಕರಾಮತ್ತು

By Staff

ಕೋಲ್ಕತಾ, ಮಾರ್ಚ್, 11: ಅದ್ಭುತ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಮತ್ತೆ ಅಬ್ಬರಿಸಿದ್ದಾರೆ. ಈಡನ್ ಗಾರ್ಡನ್ಸ್ ಮೈದಾನದಲ್ಲೇ ರೋಹಿತ್ ಶರ್ಮ (98 ರನ್, 57 ಎಸೆತ, 9 ಬೌಂಡರಿ, 7 ಸಿಕ್ಸರ್) ಆಟದ ನೆರವಿನಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 45 ರನ್ ಗೆಲುವು ಸಾಧಿಸಿ ಬೀಗಿದೆ.

ಟಾಸ್ ಇಲ್ಲದೆ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಗೆ ಇಳಿಯಿತು. ಕೇವಲ 2 ರನ್‌ನಿಂದ ಶತಕ ವಂಚಿತರಾದ ಮುಂಬೈ ಬ್ಯಾಟ್ಸ್‌ಮನ್ ರೋಹಿತ್ ಕೊನೆಯವರೆಗೂ ಅಜೇಯರಾಗಿ ಉಳಿದರು.[ಪಾಕಿಸ್ತಾನ ಕೋಲ್ಕತಾಗೆ ಬಂದ್ರೆ ಈಡನ್‌ಗೆ 'ಗುದ್ದಲಿ' ಪೂಜೆ!]

ರೋಹಿತ್ ಆಟದ ನೆರವಿನಿಂದ ಭಾರತ 6 ವಿಕೆಟ್‌ಗೆ 185 ರನ್ ಪೇರಿಸಿತು. ಚೇಸಿಂಗ್ ಗೆ ಇಳಿದ ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ 19.2 ಓವರ್‌ಗಳಲ್ಲಿ 140 ರನ್‌ಗೆ ಆಲೌಟ್ ಆಯಿತು.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಯುವಿ ಜುಗಲ್ ಬಂದಿ

ಯುವಿ ಜುಗಲ್ ಬಂದಿ

9ನೇ ಓವರ್‌ನಲ್ಲಿ 56 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ರೋಹಿತ್‌ಗೆ ಜತೆಯಾದ ಯುವರಾಜ್ ಸಿಂಗ್ (31 ರನ್, 20 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ 7.4 ಓವರ್‌ಗಳಲ್ಲಿ 89 ರನ್ ಸಿಡಿಸಿತು.

ಧವನ್-ರಹಾನೆ

ಧವನ್-ರಹಾನೆ

ಆರಂಭಿಕರಾಗಿ ರೋಹಿತ್ ಹಾಗೂ ಶಿಖರ್ ಧವನ್ (31) ಕಣಕ್ಕಿಳಿದರು. ವಿರಾಟ್ ಕೊಹ್ಲಿ ಬದಲು ಕ್ರೀಸ್‌ಗಿಳಿದ ಅಜಿಂಕ್ಯ ರಹಾನೆ ಕೇವಲ 7 ರನ್ ಗಳಿಸಿ ನಿರ್ಗಮಿಸಿದರು.

ಗೇಲ್ ವಿಫಲ

ಗೇಲ್ ವಿಫಲ

ಟಿ-20ಯ ಕ್ರಿಕೆಟ್ ಗಾಡ್ ಕ್ರಿಸ್ ಗೇಲ್ 11 ಎಸೆತ ಗಳಲ್ಲಿ 20 ರನ್ ಗಳಿಸಲಷ್ಟೆ ಶಕ್ಯರಾದರು. ಭಾರತ ಪರ ಶಮಿ, ನೇಗಿ, ರವೀಂದ್ರ ಜಡೇಜಾ ಹಾಗೂ ಹರ್ಭಜನ್ ಸಿಂಗ್ ತಲಾ 2 ವಿಕೆಟ್ ಉರುಳಿಸಿದರು.

ಪಾಕ್ ವಿರುದ್ಧ ಪಂದ್ಯ

ಪಾಕ್ ವಿರುದ್ಧ ಪಂದ್ಯ

ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯ ಕೋಲ್ಕತಾದಲ್ಲಿಯೇ ಮಾರ್ಚ್ 19 ರಂದು ನಡೆಯಲಿದೆ.

Story first published: Friday, March 9, 2018, 16:12 [IST]
Other articles published on Mar 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X