ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಸಾಜ್ ಹುಡುಗಿ ಜೊತೆ ಭಾರತದ 'ಫಿಸಿಯೋ' ಚಕ್ಕಂದ!

By Mahesh

ಬೆಲ್ಫಾಸ್ಟ್(ಐರ್ಲೆಂಡ್), ಜುಲೈ 17: ಅತ್ತ ವಿಶ್ವ ಟಿ20 ಟೂರ್ನಿಯ ಅರ್ಹತೆ ಪಡೆಯಲು ತಂಡಗಳು ಸೆಣೆಸುತ್ತಿದ್ದರೆ, ನೇಪಾಳ ಕ್ರಿಕೆಟ್ ತಂಡದಲ್ಲಿ ದೈಹಿಕ ತರಬೇತುದಾರರಾಗಿರುವ ಭಾರತೀಯ ಮೂಲಕ ವೈದ್ಯರೊಬ್ಬರು 'ಮಸಾಜ್' ಮಾಡುವ ಹುಡುಗಿ ಜೊತೆ ಚಕ್ಕಂದವಾಡಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.

ಲಾ ಮೊನ್ ಹೋಟೆಲ್ ನಲ್ಲಿ ಮಸಾಜ್ ಮಾಡುವ ಯುವತಿಯ ಮೇಲೆ ಲೈಂಗಿಕ ಕಿರುಕುಳ ನೀಡುವ ಆರೋಪದ ಮೇಲೆ ಡಾ. ಏಜಾಜ್ ಬಷೀರ್ ಅಶಾಯ್ ಅವರನ್ನು ಐರ್ಲೆಂಡ್ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಮೂಲದವರಾದ ಡಾ. ಏಜಾಜ್ ಅವರು ಇತ್ತೀಚೆಗೆ ನೇಪಾಳ ಕ್ರಿಕೆಟ್ ತಂಡದ ಫಿಸಿಯೋ ಆಗಿ ನೇಮಕಗೊಂಡಿದ್ದರು. ಈ ಘಟನೆ ಬಳಿಕ ಬಷೀರ್ ಅವರನ್ನು ಫಿಸಿಯೋ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು 'ಬೆಲ್ಫಾಸ್ಟ್ ಟೆಲಿಗ್ರಾಫ್' ವರದಿ ಮಾಡಿದೆ.

Indian physio accused of sexually assaulting masseuse


ವಿಶ್ವ ಟಿ20 ಅರ್ಹತಾ ಸುತ್ತಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ನೇಪಾಳ ತಂಡದ ಫಿಸಿಯೋ ಆಗಿ 42 ವರ್ಷ ವಯಸ್ಸಿನ ಡಾ.ಏಜಾಜ್ ಕಾರ್ಯನಿರ್ವಹಿಸುತ್ತಿದ್ದರು. ಉತ್ತರ ಐರ್ಲೆಂಡ್ ನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ಹಾಗೂ ನೇಪಾಳ ತಂಡಗಳ ಪಂದ್ಯಗಳು ನಿಗದಿಯಾಗಿತ್ತು.

ಹೋಟೆಲಿನಲ್ಲಿ ಫುಲ್ ಬಾಡಿ ಮಸಾಜ್ ಇದ್ಯಾ ಎಂದು ಕೇಳಿದ ಡಾ. ಏಜಾಜ್, ಅಲ್ಲಿನ ನಿಯಮಗಳನ್ನು ಮೀರಿ ಒಳ ಉಡುಪುಗಳನ್ನು ಕಳಚಿ ಬೆತ್ತಲಾದರು. ತೊಡೆಸಂದಿ, ನಿತಂಬದಲ್ಲಿ ನೋವಿದೆ, ತುರಿಸುತ್ತಿದೆ ಎಂದು ಹೇಳಿ ಪ್ರತಿರೋಧ ಒಡ್ಡಿದರೂ ಲೆಕ್ಕಿಸದೆ ನನ್ನ ಕೈ ಎಳೆದುಕೊಂಡು ಆ ಜಾಗಗಳಲ್ಲಿ ಇಟ್ಟುಕೊಂಡು ಕೆಟ್ಟದಾಗಿ ಸೌಂಡ್ ಮಾಡತೊಡಗಿದ ಎಂದು ಯುವತಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ. ಹೆದರಬೇಡ ನಿನಗೆ ಬೇಕಾದರೆ 10 ಪೌಂಡ್ ಜಾಸ್ತಿ ಕೊಡುತ್ತೇನೆ ಎಂದು ಆಫರ್ ಕೂಡಾ ನೀಡಿದರು ಅದರೆ, ನಾನು ಅದಕ್ಕೆ ಒಪ್ಪದೆ ದೂರು ನೀದಿದೆ ಎಂದಿದ್ದಾರೆ.

ಈ ಪ್ರಕರಣ ವಿಚಾರಣೆ ನಡೆದು ಬಷೀರ್ ಅವರಿಗೆ 2,500 ಪೌಂಡ್ ದಂಡ ವಿಧಿಸಲಾಗಿದೆ. ಜಾಮೀನಿನ ಮೇಲೆ ಹೊರಬಂದಿರುವ ಬಷೀರ್ ಅವರು ಆಗಸ್ಟ್ 12ರಂದು ವಿಚಾರಣೆಗೆ ಹಾಜರಾಗಬೇಕಿದೆ.

ಭಾರತೀಯ ರಗ್ಬಿ ತಂಡ, ಮುಂಬೈ ಹೀರೋಸ್ ತಂಡದ ಫಿಸಿಯೋ ಕೂಡಾ ಆಗಿರುವ ಡಾ. ಏಜಾಜ್ ಅವರ ಪ್ರಕರಣದಿಂದ ಕ್ರೀಡಾಲೋಕ ಆಘಾತಕ್ಕೆ ಒಳಗಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X