ಪಾಕಿಸ್ತಾನ ವಿರುದ್ಧ ಭಾರತ 11-0 ಪರಾಕ್ರಮ ಸಾಧನೆ

By:
Subscribe to Oneindia Kannada

ಕೋಲ್ಕತ್ತಾ, ಮಾರ್ಚ್ 20: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಏಳನೇ ಬಾರಿಗೆ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ವಿಕ್ರಮ ಸಾಧಿಸಿದೆ. ಶನಿವಾರ(ಮಾರ್ಚ್ 17) ರಾತ್ರಿ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜಯ ದಾಖಲಿಸಿದ ಟೀಂ ಇಂಡಿಯಾ ಒಟ್ಟಾರೆ 11-0 ಮುನ್ನಡೆ ಕಾಯ್ದುಕೊಂಡಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್

ಮಳೆ ಕಾಟಕ್ಕೆ ಸಿಲುಕಿ 18 ಓವರ್ ಗಳಿಗೆ ಸೀಮಿತವಾಗಿದ್ದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಭಾರತಕ್ಕಿತ್ತು. ನಾಗ್ಪುರದಲ್ಲಿ ಮಾರ್ಚ್ 15ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು 47ರನ್ ಗಳಿಂದ ಭಾರತ ಸೋತ್ತಿತ್ತು. ಆದರೆ, ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್ ಗಳಿಂಡ ಸೋಲಿಸಿ ವಿಜಯೋತ್ಸವ ಆಚರಿಸಿದೆ.[ಪಂದ್ಯದ ಸ್ಕೋರ್ ಕಾರ್ಡ್]

Great win for India against Pakistan. Well played Virat and congratulations to all the fans. #wt20 #INDvPAK #playdilse

Posted by Virender Sehwag on 19 March 2016

ವಿರಾಟ್ ಕೊಹ್ಲಿ ಅವರು 37 ಎಸೆತಗಳಲ್ಲಿ 55ರನ್ ಗಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಪಂದ್ಯವನ್ನು ಗೆಲ್ಲುವ ಮೂಲಕ ಪಾಕಿಸ್ತಾನ ವಿರುದ್ಧದ ತನ್ನ ಸಾಧನೆಯನ್ನು ಟೀಂ ಇಂಡಿಯಾ ಉತ್ತಮ ಪಡಿಸಿಕೊಂಡಿದೆ. ಪ್ರಮುಖ ಸಾಧನೆಗಳ ವಿವರ ಮುಂದೆ ಓದಿ...

ಪಾಕಿಸ್ತಾನ ವಿರುದ್ಧ ಭಾರತದ ಸಾಧನೆಗಳು

* ಟಿ20ಐ ಹಾಗೂ 50 ಓವರ್ ಗಳ ವಿಶ್ವಕಪ್ ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ 7ನೇ ಜಯ ಇದಾಗಿದೆ.

ನಾಯಕನಾಗಿ ಧೋನಿ ಅವರ ಸಾಧನೆ

ಪಾಕಿಸ್ತಾನ ವಿರುದ್ಧದ ಎಲ್ಲಾ 7 ಟಿ20ಐ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಎಂಎಸ್ ಧೋನಿ ಅವರು ಮುನ್ನಡೆಸಿದ್ದಾರೆ. ಹಾಗೂ ಎಲ್ಲದರಲ್ಲೂ ಗೆಲುವು ದಾಖಲಿಸಿದ್ದಾರೆ.

ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಇನ್ನೂ ಅಜೇಯ

ಒಟ್ಟಾರೆ ಎಲ್ಲಾ ವಿಶ್ವಕಪ್ ಪಂದ್ಯಗಳನ್ನು (ಟಿ20ಐ ಹಾಗೂ 50 ಓವರ್ ಗಳ ಪಂದ್ಯ)ಲೆಕ್ಕ ಹಾಕಿದರೆ ಪಾಕಿಸ್ತಾನ ವಿರುದ್ಧ ಭಾರತ 11-0 ಮುನ್ನಡೆಯಲ್ಲಿದೆ

ಈ ಮೈದಾನದಲ್ಲಿ ಭಾರತ ಗೆಲುವಿನ ಖಾತೆ

ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಬಾರಿ ಎರಡು ತಂಡಗಳು ಸೆಣೆಸಾಟ ನಡೆಸಿದ್ದು, ಈ ಮೈದಾನದಲ್ಲಿ ಭಾರತ ಗೆಲುವಿನ ಖಾತೆ ಆರಂಭಿಸಿದೆ.

ವಿಶ್ವ ಟಿ20 ಮಾದರಿಯಲ್ಲಿ ಸತತ ಐದನೇ ಗೆಲುವು

ವಿಶ್ವ ಟಿ20 ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸತತ ಐದನೇ ಗೆಲುವು ಸಾಧಿಸಿದೆ.

ಪಾಕಿಸ್ತಾನ ತಂಡಕ್ಕೆ ಇದು ಮೊದಲ ಸೋಲು

ಟಿ20ಯಲ್ಲಿ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಪಾಕಿಸ್ತಾನ ತಂಡಕ್ಕೆ ಇದು ಮೊದಲ ಸೋಲಾಗಿದೆ.ವಿಶ್ವ ಟಿ20 2016 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 55ರನ್ ಗಳ ಗೆಲುವು ಸಾಧಿಸಿತ್ತು.

ಪಾಕಿಸ್ತಾನ ಮೂರು ನಾಯಕರನ್ನು ಕಂಡಿದೆ

ಮೊಹಮ್ಮದ್ ಹಫೀಜ್ (4 ಪಂದ್ಯಗಳು) ಹಾಗೂ ಶೋಯಿಬ್ ಮಲೀಕ್ (2), ಶಾಹೀದ್ ಅಫ್ರಿದಿ (2), ಚಿತ್ರದಲ್ಲಿ : ಅದ್ಭುತ ಕ್ಯಾಚ್ ಹಿಡಿದ ಭಾರತದ ಹಾರ್ದಿಕ್ ಪಾಂಡ್ಯ.

ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಕೊಹ್ಲಿ

ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಕೊಹ್ಲಿ ಅವರು ಅರ್ಧಶತಕ ಬಾರಿಸಿದ ಮೇಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ನಮಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಅವರ ಸಂಭ್ರಮಾಚರಣೆ

ವಿರಾಟ್ ಕೊಹ್ಲಿ ಅವರು ಸಂಭ್ರಮಾಚರಣೆಯಲ್ಲಿದ್ದಾಗ ಸೆರೆಸಿಕ್ಕ ಚಿತ್ರ. ಎಲ್ಲಾ ಚಿತ್ರಗಳು:ಪಿಟಿಐ

ಭಾರತದ ಮುಂದಿನ ಪಂದ್ಯ ಯಾವಾಗ?

ಭಾರತದ ಮುಂದಿನ ಪಂದ್ಯ vs ಬಾಂಗ್ಲಾದೇಶ, ಬೆಂಗಳೂರು, ಮಾರ್ಚ್ 23 (7.30 PM IST)

ಪಾಕಿಸ್ತಾನದ ಮುಂದಿನ ಪಂದ್ಯ vs ನ್ಯೂಜಿಲೆಂಡ್, ಮೊಹಾಲಿ, ಮಾರ್ಚ್ 22, (7.30 PM IST)

 

Read in English: India make it 11-0 vs Pak
English summary
Mahendra Singh Dhoni led India to their seventh win over Pakistan in a World Cup game (T20 and 50 overs) at the Eden Gardens here on Saturday (March 19). India now have a 11-0 lead over Pakistan in all World Cups.
Please Wait while comments are loading...