ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟಿ20 : ವೆಸ್ಟ್ ಇಂಡೀಸ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ವಿಜಯ

By Mahesh

ನಾಗ್ಪುರ, ಮಾರ್ಚ್ 27: ವಿಶ್ವ ಟ್ವೆಂಟಿ20 ಟೂರ್ನಮೆಂಟ್ ನ ಸೂಪರ್ 10 ಹಂತದ ಕೊನೆ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಫ್ಘಾನಿಸ್ತಾನ ತಂಡ ಭಾನುವಾರ ಐತಿಹಾಸಿಕ ವಿಜಯ ದಾಖಲಿಸಿದೆ.ವೆಸ್ಟ್ ಇಂಡೀಸ್ ವಿರುದ್ಧ 6ರನ್ ಗಳ ಗೆಲುವು ಸಾಧಿಸಿದ ಅಫ್ಘನ್ ಪಡೆ ವಿಜಯೋತ್ಸವ ಆಚರಿಸಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್

ಗೆಲ್ಲಲು ಬೇಕಿದ್ದ 124ರನ್ ಗುರಿಯನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡ ಸುಲಭವಾಗಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಕೊನೆ ಹಂತದಲ್ಲಿ ಒತ್ತಡಕ್ಕೆ ಒಳಗಾಗಿ ನಿರಂತವಾಗಿ ವಿಕೆಟ್ ಕಳೆದುಕೊಂಡು 20 ಓವರ್ ಗಳಲ್ಲಿ 117/8 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿದೆ.[ಕಿವೀಸ್ ಗೆಲುವಿನ ನಾಗಾಲೋಟ!]

World T20: Afghanistan stun West Indies by six runs

ವಿಂಡೀಸ್ ಪರ ಕ್ರಿಸ್ ಗೇಲ್ ಈ ಪಂದ್ಯ ಆಡಿರಲಿಲ್ಲ. ಚಾರ್ಲ್ಸ್ 15 ಎಸೆತಗಳಲ್ಲಿ 22 ರನ್ ಹಾಗೂ ಗಾಯಗೊಂಡ ಫ್ಲೆಚರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಬ್ರಾವೋ 28, ರಾಮ್ ದೀನ್ 18ರನ್, ಬ್ರೆಥ್ ವೈಟ್ 13ರನ್ ಗಳಿಸಿ ಪ್ರತಿರೋಧ ಒಡ್ಡಿದ್ದರು.[ಇಂಗ್ಲೆಂಡ್ ತಂಡ ಸೆಮೀಸ್ ಗೆ ಲಗ್ಗೆ]

ಆದರೆ, ಅಫ್ಘನ್ ಪರ ನಬಿ, ಖಾನ್ ತಲಾ 2 ವಿಕೆಟ್ ಹಾಗೂ ಹಮ್ಜಾ, ನೈಬ್ ತಲಾ 1ವಿಕೆಟ್ ಪಡೆದು ವಿಂಡೀಸ್ ತಂಡವನ್ನು ನಿಯಂತ್ರಿಸಿದರು. ಕೊನೆ ಹಂತದಲ್ಲಿ ರಸೆಲ್ ಅವರನ್ನು ವಿಕೆಟ್ ಕೀಪರ್ ಶಹ್ಜಾದ್ ರನೌಟ್ ಮಾಡಿದ್ದು ಪಂದ್ಯಕ್ಕೆ ತಿರುವು ನೀಡಿತು.

ಅಫ್ಘಾನಿಸ್ತಾನ ಇನ್ನಿಂಗ್ಸ್: [ವೆಸ್ಟ್ ಇಂಡೀಸ್‌ ಸೆಮಿ ಫೈನಲ್‌ಗೆ]
* ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೊಹಮ್ಮದ್ ಶಹ್ಜಾದ್ 22 ಎಸೆತಗಳಲ್ಲಿ 24(2x4,1x6) ರನ್ ಗಳಿಸಿ ಉತ್ತಮ ಆರಂಭ.
* ಘನಿ (4), ನೈಬ್(8), ಶೆನ್ವಾರಿ(1) ಬ್ಯಾಟಿಂಗ್ ವೈಫಲ್ಯ. ನಾಯಕ ಸ್ಟನಿಕ್ಜಾಯಿ 16 ರನ್ ಗಳಿಕೆ.
* ಜದ್ರಾನ್ 40 ಎಸೆತಗಳಲ್ಲಿ 48 ರನ್ (4x4, 1x6) ರನ್ ಗಳಿಸಿ ಮೊತ್ತ ಹೆಚ್ಚಿಸಿದರು.
* ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 123/7 ಸ್ಕೋರ್ ಗಳಿಕೆ.
* ವೆಸ್ಟ್ ಇಂಡೀಸ್ ಪರ ಸ್ಪಿನರ್ ಬದ್ರಿ 14/3, ರಸೆಲ್ 23/2 ಉತ್ತಮ ಬೌಲಿಂಗ್.
* ಬೆನ್ ಹಾಗೂ ಡರೇನ್ ಸಾಮಿ ತಲಾ 1 ವಿಕೆಟ್ ಪಡೆದರು. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X