ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಸಿಟ್ಟಿಗೆದ್ದು ಪತ್ರಕರ್ತನಿಗೆ ಉಗಿದಿದ್ದೇಕೆ?

By Mahesh

ಪರ್ತ್, ಮಾ.3: ವೆಸ್ಟ್ ಇಂಡೀಸ್ ವಿರುದ್ಧದ ಕದನಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕೋಪಗೊಂಡು ಪತ್ರಕರ್ತರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ವಿರಾಟ್ ಕೊಹ್ಲಿ ವೀರಾವೇಶ ಕಂಡು ಟೀಂ ಇಂಡಿಯಾದ ಇತರೆ ಸದಸ್ಯರು ಬೆಚ್ಚಿದ್ದಾರೆ. ಕೊನೆಗೆ ಟೀಂ ಇಂಡಿಯಾದ ನಿರ್ದೇಶಕ ರವಿಶಾಸ್ತ್ರಿ ಮಧ್ಯ ಪ್ರವೇಶಿಸಿ ಕೊಹ್ಲಿ ತಣ್ಣಗಾಗುವಂತೆ ಮಾಡಿದ್ದಾರೆ.

ವಾಕಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಪಣ ತೊಟ್ಟಿರುವ ವಿರಾಟ್ ಕೊಹ್ಲಿ ಅವರು ಕಠಿಣ ತರಬೇತಿಯಲ್ಲಿ ತೊಡಗಿದ್ದಾರೆ. ಮಂಗಳವಾರ ತರಬೇತಿ ಮುಗಿಸಿಕೊಂಡು ಮೈದಾನದಿಂದ ಡ್ರೆಸಿಂಗ್ ರೂಮ್ ಗೆ ತೆರಳುವಾಗ ಕೊಹ್ಲಿ ಕಣ್ಣಿಗೆ ರಾಷ್ಟ್ರೀಯ ದಿನಪತ್ರಿಕೆಯೊಂದರ ಲೇಖನ ಕಣ್ಣಿಗೆ ಬಿದ್ದಿದೆ.

World Cup: Virat Kohli abuses Indian journalist, uses 'filthiest of language'

ದಿನಪತ್ರಿಕೆಯನ್ನು ಕೈಗೆತ್ತಿಕೊಂಡು ಮತ್ತೊಮ್ಮೆ ಹೆಡ್ ಲೈನ್ ನತ್ತ ಮತ್ತೊಮ್ಮೆ ಕಣ್ಣು ಹಾಯಿಸಿದ ಕೊಹ್ಲಿ ತಕ್ಷಣವೇ ತಾಳ್ಮೆ ಕಳೆದುಕೊಂಡು ಕೆಂಗಣ್ಣು ಮಾಡಿಕೊಂಡು ಪತ್ರಕರ್ತನಿಗೆ ಉಗಿದಿದ್ದಾರೆ. ಇದೇ ಸಮಯಕ್ಕೆ ಕೊಹ್ಲಿ ಅವರನ್ನು ಮಾತನಾಡಿಸಲು ಬಂದಿದ್ದ ಪತ್ರಕರ್ತ ಕೊಹ್ಲಿಯ ವೀರಾವೇಶ ಕಂಡು ಕಕ್ಕಾಬಿಕ್ಕಿಯಾಗಿದ್ದಾನೆ. ಟೀಂ ಇಂಡಿಯಾದ ಇತರೆ ಸದಸ್ಯರು ಕೊಹ್ಲಿ ಹತ್ತಿರಕ್ಕೂ ಹೋಗದೆ ನಿಂತಲ್ಲೇ ನಿಂತು ಕೊಹ್ಲಿಯ ಆರ್ಭಟ ನೋಡಿದ್ದಾರೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಕೊಹ್ಲಿ ಬಾಯಿಂದ ಅವಾಚ್ಯ ಶಬ್ದಗಳ ಸುರಿಮಳೆಯಾಗಿದೆ. ಕೆಲ ಸಮಯದ ನಂತರ ಕೊಹ್ಲಿ ಸಮಾಧಾನಗೊಂಡಿದ್ದಾರೆನಂತರ ಎದುರಿಗಿರುವ ಭಾರತೀಯ ಪತ್ರಕರ್ತನನ್ನು ನೋಡಿದ ಕೊಹ್ಲಿಗೆ ತನ್ನ ತಪ್ಪಿನ ಅರಿವಾಗಿದೆ. ನಾನು ಉಗಿದಿದ್ದು ಬೇರೆ ಯಾರೋ ಪತ್ರಕರ್ತನಿಗೆ ಉಗಿಸಿಕೊಳ್ಳಬೇಕಾದ ಪತ್ರಕರ್ತ ಇವರಲ್ಲ ಎಂದು ತಿಳಿದಿದೆ. ನಂತರ ಬಂದಿದ್ದ ಪತ್ರಕರ್ತನಿಗೆ ಸ್ಸಾರಿ ಕೇಳಿದ್ದಾರೆ.

ಅನುಷ್ಕಾ ಶರ್ಮ ಹಾಗೂ ವಿರಾಟ್ ಕೊಹ್ಲಿ ಸಂಬಂಧದ ಬಗ್ಗೆ ರಾಷ್ಟ್ರಮಟ್ಟದ ಪತ್ರಿಕೆಯೊಂದರಲ್ಲಿ ಬಂದಿದ್ದ ಲೇಖನ ವಿರಾಟ್ ಕೊಹ್ಲಿ ಕೆರಳಲು ಕಾರಣವಾಗಿತ್ತು. ಟೀಂ ಇಂಡಿಯಾದ ಇತರೆ ಸದಸ್ಯರು ಆದಷ್ಟು ಸುದ್ದಿ ಮಾಧ್ಯಮಗಳಲ್ಲಿ ಬರುವ ನೆಗಟಿವ್ ಸುದ್ದಿಯನ್ನು ಕೊಹ್ಲಿ ನೋಡದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು. ಅದರೆ, ಈ ಪತ್ರಿಕೆ ಹೇಗೋ ಕೊಹ್ಲಿ ಕಣ್ಣಿಗೆ ಬಿದ್ದಿದ್ದೆ ತಡಾ ಕೊಹ್ಲಿ ಪಿತ್ತ ನೆತ್ತಿಗೇರಿ ಅರಚಾಡಿದ್ದಾರೆ.

ಟೀಂ ಡೈರೆಕ್ಟರ್ ರವಿಶಾಸ್ತ್ರಿ ಅವರು ನಂತರ ಕೊಹ್ಲಿ ಬಳಿಗೆ ತೆರಳಿ ಅವರನ್ನು ಸಮಾಧಾನಪಡಿಸಿದ್ದಾರೆ. ಬಂದಿದ್ದ ಪತ್ರಕರ್ತನಿಗೂ ಸಮಾಧಾನ ಹೇಳಿ ಕಳಿಸಿದ ಘಟನೆ ನಡೆದಿದೆ. ಟೀಂ ಇಂಡಿಯಾದ ಭವಿಷ್ಯದ ನಾಯಕನ ರೌದ್ರಾವತಾರ ಕಂಡ ಯುವ ಪತ್ರಕರ್ತ ತಕ್ಷಣವೇ ಕಾಲಿಗೆ ಬುದ್ಧಿ ಹೇಳಿದ್ದಾರೆ.
ಪಿಟಿಐ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X