ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿ ಅಬ್ಬರಕ್ಕೆ ಬೆಚ್ಚಿ ಮಂಡಿಯೂರಿದ ವಿಂಡೀಸ್

By Mahesh

ಸಿಡ್ನಿ, ಫೆ.27: ವೆಸ್ಟ್ ಇಂಡೀಸ್ ತಂಡದ ವಿರುದ್ಧ ಬಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತ ದಾಖಲಿಸಿದ್ದಲ್ಲದೆ, ಭತ್ ಗೆಲುವು ಸಾಧಿಸಿದೆ. ನಾಯಕ ಎಬಿ ಡಿವಿಲೆಯರ್ಸ್ 66 ಎಸೆತ 162 ರನ್ ಚೆಚ್ಚಿ ವಿಂಡೀಸ್ ತಂಡಕ್ಕೆ 408ರನ್ ಗಳ ಟಾರ್ಗೆಟ್ ನೀಡಿದರು. ಇದಕ್ಕೆ ಉತ್ತರವಾಗಿ ಕೆರೆಬಿಯನ್ನರು 151 ಸ್ಕೋರಿಗೆ ಆಲೌಟ್ ಆಗಿ ಮಂಡಿಯೂರಿದರು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅತ್ಯಧಿಕ ತಂಡ ಮೊತ್ತವಾದ 334/8 ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ದಾಟಿ ಹರಿಣಗಳು ದಾಖಲೆಯ 407 ಸ್ಕೋರ್ ಮಾಡಿದರು. ವಿಂಡೀಸ್ ಪರ ನಾಯಕ ಹೋಲ್ಡರ್ 56 ರನ್ ಹೊಡೆದಿದ್ದು ಬಿಟ್ಟರೆ ಮಿಕ್ಕವರು ರನ್ ಚೇಸ್ ಮಾಡುವ ಮೂಡಿನಲ್ಲಿದ್ದಂತೆ ಕಾಣಲಿಲ್ಲ.

LIVE: WC Match 19: South Africa thrash Windies by 257 Runs


ದೈತ್ಯ ಗೇಲ್ 3 ರನ್ ಮಾಡಿ ಪೆವಿಲಿಯನ್ ಸೇರಿದರು. ಉಳಿದಂತೆ ಡ್ವಾಯ್ನೆ ಸ್ಮಿತ್ 32ರನ್, ರಾಮದೀನ್ 22 ಗಳಿಸಿದ್ದು ಬಿಟ್ಟರೆ ಮಿಕ್ಕವರು ಹೆಚ್ಚು ಕಾಲ ಕ್ರೀಸ್ ನಲ್ಲಿರಲಿಲ್ಲ.

ದಕ್ಷಿಣ ಆಫ್ರಿಕಾ ಪರ ಇಮ್ರಾನ್ ತಾಹೀರ್ 45ಕ್ಕೆ 5 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರೆ, ಮೊದಲ ವಿಶ್ವಕಪ್ ಪಂದ್ಯವಾಡುತ್ತಿರುವ ಕೈಲಿ ಅಬಾಟ್ 8 ಓವರ್ ಗಳಲ್ಲಿ 37ರನ್ನಿತ್ತು 2 ವಿಕೆಟ್ ಕಿತ್ತರು. ಮಾರ್ಕೆಲ್ 2, ಸ್ಟೇನ್ 1 ವಿಕೆಟ್ ಪಡೆದು ವಿಂಡೀಸ್ ಪಡೆಯನ್ನು 33.1 ಓವರ್ ಗಳಲ್ಲಿ 151ರನ್ನಿಗೆ ನಿಯಂತ್ರಿಸಿದರು.

ಆರಂಭಿಕ ಆಟಗಾರ ಡಿ ಕಾಕ್ 12 ರನ್ನಿಗೆ ಔಟ್ ಆಗಿ ಆರಂಭಿಕ ಆಘಾತ ಅನುಭವಿಸಿದ ದಕ್ಷಿಣ ಆಫ್ರಿಕಾ ನಂತರ ಆಮ್ಲಾ ಹಾಗೂ ಡುಫ್ಲೆಸಿಸ್ ಅವರ ಅರ್ಧಶತಕದ ನೆರವಿನಿಂದ ಚೇತರಿಸಿಕೊಂಡಿತು.

South Africa skipper AB de Villiers

ನಂತರ ಮೊದಲ ಪಂದ್ಯವಾಡುತ್ತಿರುವ ರೊಸ್ಸೋ 62 ಜೊತೆ ಗೂಡಿದ ನಾಯಕ ಎಬಿ ಡಿವಿಲೆಯರ್ಸ್ 52 ಎಸೆತಗಳಲ್ಲಿ 102ರನ್ ಚೆಚ್ಚಿದರು. 64 ಎಸೆತಗಳಲ್ಲಿ 150 ರನ್ ಬಾರಿಸಿದರು. ಡೇವಿಡ್ ಮಿಲ್ಲರ್ 16 ಎಸೆತಗಳಲ್ಲಿ 20ರನ್ ಗಳಿಸಿ ಔಟಾದರು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ ದಾಖಲೆಯ 408/5 ಸ್ಕೋರ್ ಮಾಡಿದೆ. ಬೆಹರ್ದೀನ್ 5 ಎಸೆತಗಳಲ್ಲಿ 10ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಎಬಿ ಡಿವಿಲೆಯರ್ಸ್ ಅಜೇಯ 162 ರನ್ (66 ಎಸೆತ, 17 ಬೌಂಡರಿ, 8 ಸಿಕ್ಸರ್)

ವಿಂಡೀಸ್ ಪರ ನಾಯಕ ಹೋಲ್ಡರ್ 10 ಓವರ್ ಗಳಲ್ಲಿ 104ರನ್ನಿತ್ತು 1 ವಿಕೆಟ್ ಪಡೆದರು. ಮಿಕ್ಕಂತೆ ಗೇಲ್ ಹಾಗೂ ರಸೆಲ್ ತಲಾ 2 ವಿಕೆಟ್ ಪಡೆದುಕೊಂಡರು.

ದಕ್ಷಿಣ ಆಫ್ರಿಕಾ: ಹಶೀಂ ಆಮ್ಲಾ, ಡಿಕಾಕ್(ವಿಕೆಟ್ ಕೀಪರ್), ಫಾಫ್ ಡು ಫ್ಲೆಸಿ, ರಿಲೇ ರೋಸೋ, ಎಬಿ ಡಿ ವಿಲೆಯರ್ಸ್(ನಾಯಕ), ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ದೀನ್, ಡೇಲ್ ಸ್ಟೇನ್, ಕೈಲ್ ಅಬಾಟ್, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹೀರ್.

ವೆಸ್ಟ್ ಇಂಡೀಸ್: ಡ್ವಾಯ್ನೆ ಸ್ಮಿತ್, ಕ್ರಿಸ್ ಗೇಲ್, ಮರ್ಲಾನ್ ಸ್ಯಾಮುಯಲ್ಸ್, ದಿನೇಶ್ ರಾಮದೀನ್ (ವಿಕೆಟ್ ಕೀಪರ್), ಲೆಂಡ್ಲ್ ಸಿಮನ್ಸ್, ಜೋನಥನ್ ಕಾರ್ಟರ್, ಡರೇನ್ ಸಾಮಿ, ಆಂಡ್ರೆ ರಸೆಲ್, ಜಾಸನ್ ಹೋಲ್ಡರ್ (ನಾಯಕ) ಜೆರೋಮಿ ಟೇಲರ್, ಸುಲೇಮಾನ್ ಬೆನ್

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X