ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಕೆ ಮಾಡೋದು ಬಿಡಿ, ಧೋನಿ ಪಡೆಗೆ ಬೆನ್ನು ತಟ್ಟಿ

ಬೆಂಗಳೂರು, ಮಾ. 26: ಹೌದು... ನಾವು ವಿಶ್ವಕಪ್ ಪಂದ್ಯಾವಳಿಯಿಂದ ಹೊರಕ್ಕೆ ಬಿದ್ದಿದ್ದೇವೆ. ಹೊರಕ್ಕೆ ಬಿದ್ದ ಮಾತ್ರಕ್ಕೆ ಆಟಗಾರನ್ನು ತೆಗಳುತ್ತ ಅವರ ಮನೆ, ಆಸ್ತಿಯ ಮೇಲೆ ದಾಳಿ ಮಾಡಲು ಮುಂದಾಗುತ್ತಿದ್ದೇವಲ್ಲಾ! ನಮ್ಮಂಥ ಮೂರ್ಖರು ಮತ್ಯಾರಾದಾರೂ ಇದ್ದಾರೆಯೇ?

ಜನರು ಸುಮ್ಮನಿರುತ್ತಿದ್ದರೋ, ಏನೋ? ಮಾಧ್ಯಮಗಳು ಬಿಡಬೇಕಲ್ಲ. ಕೆಲ ಮಾಧ್ಯಮಗಳೆಂತೂ ಪಂದ್ಯ ಸೋತಲ್ಲಿಂದ ಆಟಗಾರರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ತಾವೇ ನಿರ್ಣಯವನ್ನು ಕೊಟ್ಟುಬಿಡುತ್ತಿವೆ. ಅಷ್ಟಕ್ಕೂ ಇಲ್ಲಿ ಕೇವಲ ಆಟಗಾರರೊಂದೇ ಅಲ್ಲ ಅವರ ಪ್ರೇಯಸಿಯರೂ ಟೀಕೆಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ಎಷ್ಟು ಹುರುಳಿದೆ? ಯಾವುದು ಅರ್ಥಗರ್ಭಿತ, ಮಾತಾಡುವವರಿಗೂ ಗೊತ್ತಿಲ್ಲ.[ಸೋಲಿನ ಶಾಕ್: ಪ್ರತಿಭಟನೆ ಬಿಸಿ, ಧೋನಿ ಮನೆಗೆ ರಕ್ಷಣೆ]

cricket


ಭಾರತ ಎನು ಲೀಗ್ ಹಂತದಲ್ಲಿ ಹೊರಬಿದ್ದು ಬಂದಿಲ್ಲ. ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ 7 ಗೆಲುವು ಸುಲಭದ ಮಾತಲ್ಲ. ನಾವು ನಮಗಿಂತ ಉತ್ತಮ ತಂಡವೊಂದರ ಜತೆ ಸೋತಿದ್ದೇವೆ. ಅದನ್ನು ಸಕಾರಾತ್ಮಕವಾಗಿ ಅರಗಿಸಿಕೊಳ್ಳಬೇಕಷ್ಟೆ.

ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಪುಂಖಾನುಪುಂಖವಾಗಿ ಬೊಬ್ಬಿಡುವ ಇವರು ಈಗೇಕೆ ಇಂಥ ಪದ ಬಳಕೆಗೆ ಇಳಿದಿದ್ದಾರೋ ಉತ್ತರ ಗೊತ್ತಿಲ್ಲ.[ನಿವೃತ್ತಿ ಬಗ್ಗೆ ಗುಟ್ಟು ರಟ್ಟು ಮಾಡಿದ ಧೋನಿ]

ಸೆಮಿ ಫೈನಲ್ ವರೆಗೆ ಸತತ ಏಳು ಮ್ಯಾಚು ಗೆದ್ದಾಗ ಇಲ್ಲದ್ದು, ಸೆಮಿ ಫೈನಲ್ ನಲ್ಲಿ ಸೋತಾಗ 'ಯುವರಾಜ್ ಸಿಂಗ್ ತಂಡದಲ್ಲಿ ಇರಬೇಕಿತ್ತು' ಎಂಬ ವಿಷಯದ ಬ...

Posted by Prasad Naik on 26 March 2015


ನಾವೇ ದೊಡ್ಡವರು ಎಂದು ಕೊಚ್ಚಿಕೊಳ್ಳುವ ಮಾಧ್ಯಮಗಳಿಗೆ ಒಂದೇ ದಿನಕ್ಕೆ ಹಿಂದಿನ ಎಲ್ಲ ಪ್ರದರ್ಶನಗಳು ಮರೆತು ಹೋಯಿತೆ? ಸುಮ್ಮನೆ ಸಲ್ಲದ ಚರ್ಚೆ ಮಾಡುತ್ತ ಕಾಲಹರಣ ಮಾಡುವುದು ಬಿಟ್ಟು ಸೋಲನ್ನು ಒಪ್ಪಿಕೊಂಡರೆ ಎಂಥ ತಪ್ಪು. ಕ್ರಿಕೆಟ್ ನ್ನು ಧರ್ಮವಾಗಿಸಿದ ಮಾಧ್ಯಮಗಳೇ ಕೋಮು ಗಲಭೆ ಹುಟ್ಟುಹಾಕಿದರೆ ಹೇಗೆ?

ಸೋತಿದ್ದೇವೆ ನಿಜ, ಆದರೆ ಸುಲಭವಾಗಿ ಸೋತಿಲ್ಲ. ಪಾಕಿಸ್ತಾನ, ದಕ್ಷಿಣ ಆಫ್ರಿಕ್ಕೆ ಮಣ್ಣು ಮುಕ್ಕಿಸಿದ ತಂಡವೇ ಆಸ್ಟ್ರೇಲಿಯಾ ವಿರುದ್ಧವೂ ಆಡಿದ್ದು ಎಂಬುದು ಮರೆತು ಹೋಯಿತೇ? ನಿಜ್ಜಕ್ಕೂ ಆಟಗಾರರ ಮನೆಗೆ ಭದ್ರತೆ ನೀಡುವ ಪರಿಸ್ಥಿತಿ ಎದುರಾಗಿರುವುದು ದುರ್ದೈವ. ಈ ಬಗೆಯ ವರ್ತನೆ ತೋರಿದರೆ ನಮಗೂ, 'ಇನ್ನೊಬ್ಬರಿಗೂ' ಯಾವ ವ್ಯತ್ಯಾಸವಿರುತ್ತೇ? ಅಂಥ ಸ್ನೇಹಿತನೊಬ್ಬ ಕೇಳಿದ ಮಾತು ಎಷ್ಟು ಸತ್ಯ ಅಲ್ಲವೇ? ನೀವು ಸೋಲನ್ನು ಹೇಗೆ ಸ್ವೀಕರಿಸುತ್ತೀರಿ? ಓಟ್ ಮಾಡಿ..

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X