ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 201 ರನ್ ಜಯ

By Mahesh

ಕ್ಯಾನ್ ಬೆರಾ, ಮಾ.3: ವಿಶ್ವಕಪ್ 2015 ಟೂರ್ನಿಯ ದೈತ್ಯ ಸಂಹಾರಿ ಐರ್ಲೆಂಡ್ ತಂಡದ ವಿರುದ್ಧ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೊಡಿ ಬಡಿ ಆಟ ಬಿಟ್ಟು ಎಚ್ಚರಿಕೆಯ ಆಟವಾಡಿda ಆಮ್ಲಾ ಹಾಗೂ ಡುಫ್ಲೆಸಿಸ್ ಭರ್ಜರಿ ಶತಕದ ನೆರವಿನಿಂದ ಬೃಹತ್ ಮೊತ್ತ 50 ಓವರ್ ಗಳಲ್ಲಿ 411/4 ದಾಖಲಿಸಿದ್ದಲ್ಲದೆ ಐರ್ಲೆಂಡ್ ತಂಡವನ್ನು ನಿಯಂತ್ರಿಸಿ 201ರನ್ ಗಳ ಬೃಹತ್ ರನ್ ಗಳ ಅಂತರದ ಗೆಲುವು ಸಾಧಿಸಿದೆ.

412ರನ್ ಬೆನ್ನತ್ತಿದ್ದ ಐರ್ಲೆಂಡ್ ತಂಡ 45 ಓವರ್ ಗಳಲ್ಲಿ 210 ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ. ಐರ್ಲೆಂಡ್ ಪರ ಬಾಲ್ಬಿರ್ನೆ 58ರನ್ ಹಾಗೂ ತ್ವರಿತ ಗತಿ ಶತಕ ವೀರ ಕೆವಿನ್ ಓ ಬ್ರಿಯಾನ್ 48ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಕೊನೆ ಹಂತದಲ್ಲಿ ಸೊರೆಸ್ಸೆನ್ 22 ಹಾಗೂ ಡಾಕ್ರೆಲ್ 25 ಕೊಂಚ ಪ್ರತಿರೋಧ ಒಡ್ಡಿ ದಕ್ಷಿಣ ಆಫ್ರಿಕಾ ಸಂಭ್ರಮವನ್ನು ಕೆಲಕಾಲ ತಡೆ ಹಿಡಿದರು. ದಕ್ಷಿಣ ಆಫ್ರಿಕಾ ಪರ ಅಬಾಟ್ 8 ಓವರ್ ಗಳಲ್ಲಿ 21ಕ್ಕೆ 4, ಮಾರ್ನೆ ಮಾರ್ಕೆಲ್ 9 ಓವರ್ ಗಳಲ್ಲಿ 34ಕ್ಕೆ 3 ಹಾಗೂ ಸ್ಟೇನ್ 2 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ನಾಯಕ ಎಬಿ ಡಿ ವಿಲೆಯರ್ಸ್ ಕೂಡಾ ಬೌಲಿಂಗ್ ಮಾಡಿ 2 ಓವರ್ ಗಳಲ್ಲಿ 7 ರನ್ನಿತ್ತು 1 ವಿಕೆಟ್ ಕಿತ್ತಿದ್ದು ಇಂದಿನ ವಿಶೇಷಗಳಲ್ಲಿ ಒಂದಾಗಿತ್ತು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಡಿ ಕಾಕ್ ಮತ್ತೊಮ್ಮೆ ವಿಫಲರಾಗಿ 1 ರನ್ ಗಳಿಸಿ ಔಟಾದರು. ನಂತರ ಹಶೀಂ ಅಮ್ಲಾ 107(109ಎ, 9 ಬೌಂಡರಿ, 2 ಸಿಕ್ಸರ್) ಹಾಗೂ ಫಾಫ್ ಡುಫ್ಲೆಸಿಸ್ 109 (109ಎ, 10X4, 1X6) ತಲಾ ಶತಕ ಗಳಿಸಿದರು. 208 ಎಸೆತಗಳಲ್ಲಿ 210 ಕಲೆ ಹಾಕಿ ದಕ್ಷಿಣ ಆಫ್ರಿಕಾ ಪರ ಎರಡನೇ ವಿಕೆಟ್ ಗೆ ದಾಖಲೆಯ ಜೊತೆಯಾಟ ಪ್ರದರ್ಶಿಸಿದ್ದಾರೆ.

South Africa vs Ireland Match

ಅಂತಿಮವಾಗಿ ಭಾರಿ ಹೊಡೆತಕ್ಕೆ ಯತ್ನಿಸಿ ಕ್ಯಾಚಿತ್ತು ಔಟಾದ ಹಶೀಂ ಅಮ್ಲಾ 159 ರನ್ (128 ಎಸೆತ, 16X4, 4X6) ಹಾಗೂ ನಾಯಕ ಎಬಿ ಡಿವಿಲೆಯರ್ಸ್ 9 ಎಸೆತಗಳಲ್ಲಿ 24 ರನ್ (1 ಬೌಂಡರಿ, 2 ಸಿಕ್ಸರ್) ಬಾರಿಸಿ ಔಟಾದರು.

ದಕ್ಷಿಣ ಆಫ್ರಿಕಾ 41 ಓವರ್ ಗಳಲ್ಲೇ 300 ರನ್ ಗಡಿ ದಾಟುವ ಮೂಲಕ ವಿಶ್ವಕಪ್ 2015 ಟೂರ್ನಿಯಲ್ಲಿ ಅತಿ ವೇಗವಾಗಿ 300ರನ್ ದಾಟಿದ ಮೊದಲ ತಂಡ ಎನಿಸಿತು.

10 ರನ್ ಗಳಿಸಿದ್ದಾಗ ಕೆವಿನ್ ಓಬ್ರಿಯಾನ್ ಬೌಲಿಂಗ್ ನಲ್ಲಿ ಜಾಯ್ಸ್ ಗೆ ಅಮ್ಲಾ ಕ್ಯಾಚಿತ್ತಿದ್ದರು. ಅದರೆ, ಸುಲಭ ಕ್ಯಾಚ್ ಕೈ ಚೆಲ್ಲಿದ ಜಾಯ್ಸ್ ಕೊನೆಗೆ ಆಮ್ಲಾ 159ರನ್ ಮಾಡಿದ ಮೇಲೆ ನೀಡಿದ ಕ್ಯಾಚ್ ಹಿಡಿಯುವಲ್ಲಿ ಸಫಲರಾದರು.

46 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ 350/4 ಸ್ಕೋರ್ ಮಾಡಿತು. 49.3 ಓವರ್ ಗಳಲ್ಲಿ 402/4 ಸ್ಕೋರ್ ಏರಿಕೆಯಾಯಿತು. ಅಂತಿಮವಾಗಿ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 411ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ. 51 ಎಸೆತಗಳಲ್ಲಿ 102ರನ್ ಜೊತೆಯಾಟ ಮಿಲ್ಲರ್ ಹಾಗೂ ರೊಸ್ಸೋರಿಂದ ಬಂದಿತು. ಇಬ್ಬರು ತಲಾ ತ್ವರಿತ ಗತಿ ಅರ್ಧಶತಕ ಸಿಡಿಸಿದರು.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X