ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊಸ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ ತಂಡ

By Mahesh

ಕ್ಯಾನ್ ಬೆರಾ, ಮಾ.3: ದಕ್ಷಿಣ ಆಫ್ರಿಕಾ ತಂಡ 11ನೇ ಆವೃತ್ತಿಯ ವಿಶ್ವಕಪ್ ನಲ್ಲಿ ದಾಖಲೆಗಳನ್ನು ಧೂಳಿಪಟ ಮಾಡುವುದರಲ್ಲಿ ಅಗ್ರಸ್ಥಾನ ಗಳಿಸುತ್ತಿದೆ. ಎಬಿ ಡಿ ವಿಲೆಯರ್ಸ್ ಬ್ಯಾಟಿಂಗ್ ಪರಾಕ್ರಮದ ಜೊತೆಗೆ ತಂಡದ ಇತರೆ ಆಟಗಾರರು ಸೇರಿಕೊಂಡು ಮಂಗಳವಾರ ಐರ್ಲೆಂಡ್ ವಿರುದ್ಧ ಬಿ ಗುಂಪಿನ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿ ವಿಶ್ವದಾಖಲೆ ಬರೆದಿದ್ದಾರೆ.

ಮನುಕಾ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 50 ಓವರ್ ಗಳಲ್ಲಿ 411/4 ಸ್ಕೋರ್ ಮಾಡಿ ಸತತ 400 ಪ್ಲಸ್ ರನ್ ಸ್ಕೋರ್ ಮಾಡಿದ ತಂಡ ಎನಿಸಿತು. ಫೆ.27ರಂದು ಸಿಡ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 408/5 ಸ್ಕೋರ್ ಮಾಡಿತ್ತು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

* ಸತತವಾಗಿ 400 ಪ್ಲಸ್ ರನ್ ಸ್ಕೋರ್ ಮಾಡಿದ ಮೊಟ್ಟ ಮೊದಲ ತಂಡ ಎಂಬ ದಾಖಲೆ ದಕ್ಷಿಣ ಆಫ್ರಿಕಾ ಬರೆದಿದೆ.
* ಒಟ್ಟಾರೆ 5 ಬಾರಿ 400 ಪ್ಲಸ್ ರನ್ ಹೊಡೆದಿರುವ ಭಾರತದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಮಂಗಳವಾರ ಸಮಗಟ್ಟಿದೆ.
* ಕಳೆದ 44 ದಿನಗಳಲ್ಲಿ ದಕ್ಷಿಣ ಆಫ್ರಿಕಾ 400 ಪ್ಲಸ್ ರನ್ ಮೂರು ಬಾರಿ ದಾಟಿದ್ದಾರೆ. (ವಿಶ್ವಕಪ್ ನಲ್ಲಿ ಎರಡು ಬಾರಿ ಹಾಗೂ ಜನವರಿಯಲ್ಲಿ ಜೋಹಾನ್ಸ್ ಬರ್ಗ್ 439/2 vs ವೆಸ್ಟ್ ಇಂಡೀಸ್, ಎಬಿ ಡಿ ವಿಲೆಯರ್ಸ್ 31 ಎಸೆತಗಳಲ್ಲಿ ಶತಕ).

World Cup 2015: South Africa set world record in Canberra

* 40 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ 400 ಪ್ಲಸ್ ರನ್ ಒಂದೇ ಆವೃತ್ತಿಯಲ್ಲಿ ಬಾರಿಸಿಲ್ಲ. ಇದಕ್ಕೂ ಮುನ್ನ 2007ರಲ್ಲಿ ಭಾರತ 400ರನ್ ಗಡಿ ದಾಟಿತ್ತು. ಹಾಗೂ ದಕ್ಷಿಣ ಆಫ್ರಿಕಾ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಗುರಿ ದಾಟಿತ್ತು.
* ದಕ್ಷಿಣ ಆಫ್ರಿಕಾದ 414/4 ವಿಶ್ವಕಪ್ ನಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನ ಹಾಗೂ ಒಟ್ಟಾರೆ ಏಕದಿನ ಪಂದ್ಯದಲ್ಲಿ 9ನೇ ಶ್ರೇಷ್ಠ ಪ್ರದರ್ಶನವಾಗಿದೆ.
* ಹಶೀಂ ಆಮ್ಲಾ 159 ಹಾಗೂ ಫಾಫ್ ಡು ಫ್ಲೆಸಿಸ್109. ಇಬ್ಬರ 200 ರನ್ ಜೊತೆಯಾಟ ದಕ್ಷಿಣ ಆಫ್ರಿಕಾ ಪರ ಎರಡನೇ ವಿಕೆಟ್ ಗೆ ಅತಿ ಹೆಚ್ಚು ಜೊತೆಯಾಟ ದಾಖಲೆಯಾಗಿದೆ.

ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಟೀಂ ಸ್ಕೋರ್(ಟಾಪ್ 3)
413/5, 50 ಓವರ್ಸ್ , ಭಾರತ vs ಬರ್ಮುಡಾ, 2007
411/4, 50 ಓವರ್ಸ್, ದಕ್ಷಿಣ ಆಫ್ರಿಕಾ vs ಐರ್ಲೆಂಡ್, 2015
408/5, 50 ಓವರ್ಸ್, ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, 2015

ಅತಿ ಹೆಚ್ಚು ಬಾರಿ 400 ಪ್ಲಸ್ ಸ್ಕೋರ್ ಸಾಧಿಸಿದ ತಂಡಗಳು(14)
5 ಬಾರಿ -ದಕ್ಷಿಣ ಆಫ್ರಿಕಾ ಹಾಗೂ ಭಾರತ
2 ಬಾರಿ ಶ್ರೀಲಂಕಾ
1 ಬಾರಿ- ಆಸ್ಟ್ರೇಲಿಯಾ, ನ್ಯೂಜಿಲೆಂಡ್

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X