ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ಸೋಲಿಸಿ ಕ್ವಾರ್ಟರ್ ಫೈನಲಿಗೆ ಜಿಗಿದ ಪಾಕಿಸ್ತಾನ

By Mahesh

ಅಡಿಲೇಡ್,ಮಾ.15: ವಿಶ್ವಕಪ್ ನ ಮಹತ್ವದ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 7 ವಿಕೆಟ್ ಗಳ ಜಯ ಸಾಧಿಸಿದ ಪಾಕಿಸ್ತಾನ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಐರ್ಲೆಂಡ್ ನಾಯಕ ವಿಲಿಯಂ ಪೋರ್ಟರ್ಫೀಲ್ಡ್ ಅಮೋಘ ಶತಕ ಹಾಗೂ ಪಾಕಿಸ್ತಾನದ ಸರ್ಫ್ರಾಜ್ ಅಹ್ಮದ್ ಮೊಟ್ಟ ಮೊದಲ ಶತಕ ಪಂದ್ಯದ ಮುಖ್ಯಾಂಶವಾಗಿತ್ತು. ಈ ಗೆಲುವಿನ ಮೂಲಕ ಪಾಕಿಸ್ತಾನ ಕ್ವಾರ್ಟರ್ ಫೈನಲಿಗೆ ಅರ್ಹತೆ ಪಡೆದುಕೊಂಡಿತು.

ಪಾಕಿಸ್ತಾನಕ್ಕೆ ಭಾರಿ ಮೊತ್ತದ ಗುರಿ ನೀಡುವಲ್ಲಿ ಐರ್ಲೆಂಡ್ ವಿಫಲವಾಗಿದ್ದಲ್ಲದೆ ಪಾಕಿಸ್ತಾನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. 238ರನ್ ಗುರಿ ಬೆನ್ನು ಹತ್ತಿದ ಪಾಕಿಸ್ತಾನ ಅಹ್ಮದ್ ಶೆಹ್ಜಾದ್ ಅರ್ಧ ಶತಕ ಹಾಗೂ ಸರ್ಫ್ರಾಜ್ ಚೊಚ್ಚಲ ಶತಕದ ನೆರವಿನಿಂದ 46.1 ಓವರ್ ಗಳಲ್ಲಿ 241/3 ಸ್ಕೋರ್ ಮಾಡಿ ಜಯ ದಾಖಲಿಸಿತು

Pakistan beat Ireland by 7 wickets

ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಪಂದ್ಯ ಗೆಲ್ಲುವ ಮೂಲಕ ಭರ್ಜರಿ ಆರಂಭ ಪಡೆದ ಐರ್ಲೆಂಡ್ ತಂಡ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಲಾಗದೆ ಕ್ವಾರ್ಟರ್ ಫೈನಲ್ ತಲುಪುವ ಅವಕಾಶಕ್ಕೆ ತಾನೇ ಕಲ್ಲು ಹಾಕಿಕೊಂಡಿದೆ.

238ರನ್ ಮೊತ್ತ ಚೇಸ್ ಮಾಡಲು ಆರಂಭಿಸಿದ ಪಾಕಿಸ್ತಾನಕ್ಕೆ ಅಹ್ಮದ್ ಶೆಹ್ಜಾದ್ 63ರನ್(71ಎ, 7x4) ಹಾಗೂ ಸರ್ಫ್ರಾಜ್ ಅಹ್ಮದ್ ಅಜೇಯ ಶತಕ 101(124ಎ, 6x4) ಸಿಡಿಸಿದರು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಹಾರಿಸ್ ಸೊಹೈಲ್ 3 ರನ್ ಗಳಿಸಿ ವಿಫಲರಾದರೆ, ನಾಯಕ ಮಿಸ್ಬಾ ಉಲ್ ಹಕ್ 39 ಗಳಿಸಿ ಕಸಕ್ ಬೌಲಿಂಗ್ ನಲ್ಲಿ ಹಿಟ್ ವಿಕೆಟ್ ಮಾಡಿಕೊಂಡರು. ಉಮರ್ ಅಕ್ಮಲ್ ತಾಳ್ಮೆಯ ಆಟವಾಡಿ 20ರನ್ ಗಳಿಸಿದ್ದಲ್ಲದೆ, ಸರ್ಫ್ರಾಜ್ ಮೊದಲ ಶತಕ ಗಳಿಸಲು ನೆರವಾದರು.

238ರನ್ ಮೊತ್ತ ಚೇಸ್ ಮಾಡಲು ಆರಂಭಿಸಿದ ಪಾಕಿಸ್ತಾನಕ್ಕೆ ಅಹ್ಮದ್ ಶೆಹ್ಜಾದ್ 63 ರನ್ (71ಎ, 7x4) ಹಾಗೂ ಸರ್ಫ್ರಾಜ್ ಅಹ್ಮದ್ 56 ರನ್ ತಲಾ ಅರ್ಧಶತಕ ಸಿಡಿಸಿ ಉತ್ತಮ ರೀತಿಯಲ್ಲಿ 100ರನ್ ಜೊತೆಯಾಟ ಸಾಧಿಸಿ ಮುಂದುವರೆದಿದ್ದಾರೆ. 24 ಓವರ್ ಗಳಲ್ಲಿ 124ರನ್ ಗಳಿಸಿದೆ.

Match Report: Ireland all out for 237 runs after Porterfield's ton

ಐರ್ಲೆಂಡ್ ಇನ್ನಿಂಗ್ಸ್ : 30 ವರ್ಷದ ನಾಯಕ ಪೋರ್ಟರ್ಫೀಲ್ಡ್ ಅವರು 107ರನ್(131ಎ, 11x4,1x6) ಸಿಡಿಸಿ ಐರ್ಲೆಂಡ್ ಪರ ವಿಶ್ವಕಪ್ ನಲ್ಲಿ ಶತಕ ದಾಖಲಿಸಿದ ಸಾಧನೆ ಮಾಡಿದರು. ಉಳಿದವರಲ್ಲಿ ಯಾರೂ 30ರನ್ ಮಾಡಲು ಆಗದೆ ಔಟಾದರು.

ಕೊನೆ 10 ಓವರ್ ಗಳಲ್ಲಿ ಕೇವಲ 49ರನ್ ನೀಡಿದ ಪಾಕಿಸ್ತಾನ, ಐರ್ಲೆಂಡ್ ತಂಡವನ್ನು 50 ಓವರ್ ಗಳಲ್ಲಿ 237ಸ್ಕೋರಿಗೆ ನಿಯಂತ್ರಿಸಿದರು. ವಹಾಬ್ ರಿಯಾಜ್ 54ಕ್ಕೆ3, ಸೊಹೈಲ್ ಖಾನ್ ಹಾಗೂ ರಹತ್ ಅಲಿ ತಲಾ 2 ವಿಕೆಟ್ ಪಡೆದುಕೊಂಡರು.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X