ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಕ್ವಾರ್ಟರ್ ಫೈನಲ್ ಆಸೆ ಜೀವಂತ

By Mahesh

ನೇಪಿಯರ್, ಮಾ.15: ನಾಯಕ ಜಾಸನ್ ಹೋಲ್ಡರ್ ಅವರ ಉತ್ತಮ ಬೌಲಿಂಗ್ ನೆರವಿನಿಂದ ಯುಎಇ ತಂಡವನ್ನು ಸುಲಭವಾಗಿ ವೆಸ್ಟ್ ಇಂಡೀಸ್ ಬಗ್ಗು ಬಡಿದಿದೆ.ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 176 ರನ್ ಗುರಿಯನ್ನು ಯುಎಇ ತಂಡ ನೀಡಿತ್ತು. ವಿಂಡೀಸ್ ತಂಡ 30.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಜಯ ದಾಖಲಿಸಿದೆ.ಈ ಮೂಲಕ ಕ್ವಾರ್ಟರ್ ಫೈನಲ್ ಆಸೆ ಜೀವಂತ ಇರಿಸಿಕೊಂಡಿದೆ.

ಕ್ವಾರ್ಟರ್ ಫೈನಲಿಗೆ ವಿಂಡೀಸ್ : ಬಿ ಗುಂಪಿನಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸುಲಭವಾಗಿ ಮೊದಲೆರಡು ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ತಲುಪಿವೆ. ವೆಸ್ಟ್ ಇಂಡೀಸ್ ತಂಡ ಇಂದಿನ ಗೆಲುವಿನ ಮೂಲಕ 6 ಪಂದ್ಯದಿಂದ 6 ಅಂಕ (-0.053) ಸರಾಸರಿ ಹೊಂದಿದೆ. ಪಾಕಿಸ್ತಾನ ಹಾಗೂ ಐರ್ಲೆಂಡ್ ನಡುವಿನ ಪಂದ್ಯ ಜಾರಿಯಲ್ಲಿದ್ದು, ಆ ಪಂದ್ಯ ಗೆದ್ದವರು ಕೂಡಾ ಕ್ವಾರ್ಟರ್ ಫೈನಲ್ ತಲುಪಲಿದ್ದಾರೆ. ಒಂದು ವೇಳೆ ಪಾಕಿಸ್ತಾನ-ಐರ್ಲೆಂಡ್ ಪಂದ್ಯ ಟೈ ಆದರೆ, ಅಥವಾ ಮಳೆಯಿಂದ ರದ್ದಾದರೆ, ವಿಂಡೀಸ್ ಆಸೆ ಭಗ್ನವಾಗಲಿದೆ.

Match Report: West Indies beat UAE by 6 wickets

ಕ್ರಿಸ್ ಗೇಲ್ ಇಲ್ಲದೆ ವಿಂಡೀಸ್ ಗೆ ಉತ್ತಮ ಆರಂಭ ಒದಗಿಸುವ ಜವಾಬ್ದಾರಿ ಹೊತ್ತ ಚಾರ್ಲ್ಸ್ 40 ಎಸೆತಗಳಲ್ಲಿ 55 ರನ್(9x4,2x6) ಚೆಚ್ಚಿದರು. ಡ್ವಾಯ್ನೆ ಸ್ಮಿತ್ ಕೂಡಾ 9 ಎಸೆತಗಳಲ್ಲಿ 15ರನ್ ಗಳಿಸಿದರೂ ಗುರುಗೆಗೆ ವಿಕೆಟ್ ಒಪ್ಪಿಸಿದರು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ನಂತರ ಬಂದ ಸ್ಯಾಮುಯಲ್ ಕೂಡಾ 9 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿದರು. ರಸೆಲ್ ಕೂಡಾ 7 ರನ್ನಿಗೆ ಔಟಾದಾಗ ಕೆಲ ಕಾಲ ವಿಂಡೀಸ್ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಅದರೆ, ರಾಮದೀನ್ 33 ಹಾಗೂ ಕಾರ್ಟರ್ ಅಮೋಘ ಅರ್ಧಶತಕ ಸಿಡಿಸಿ ಜಯದ ಗುರಿ ಮುಟ್ಟಿದರು.

ತಂಡಗಳು-Mat-Won-Lost-Tied-NR-PTS-NRR-For-Against

Match Report: West Indies beat UAE by 6 wickets

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಇನ್ನಿಂಗ್ಸ್ ನ ಕೊನೆ ಹಂತದಲ್ಲಿ ಅಮ್ಜದ್ ಜಾವೇದ್ 56 ಹಾಗೂ ನಾಸೀಸ್ ಅಜೀಜ್ 60 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೆ ಪೆವಿಲಿಯನ್ ಗೆ ಹೋದರು. ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳು ಮಾರಕ ದಾಳಿ ನಡೆಸಿದರು. ಹೋಲ್ಡರ್ 27ಕ್ಕೆ4, ಟೇಲರ್ 36ಕ್ಕೆ3, ರಸೆಲ್ 20ಕ್ಕೆ2 ವಿಕೆಟ್ ಪಡೆದರು.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X