ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶಕ್ಕೆ ಅಮೋಘ ಜಯ, ಇಂಗ್ಲೆಂಡ್ ಮನೆಗೆ

By Mahesh

ಅಡಿಲೇಡ್, ಮಾ.9: ವಿಶ್ವಕಪ್ ಟೂರ್ನಿಯ ಎ ಗುಂಪಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲು ಕಂಡಿದ್ದಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧ 15ರನ್ ಗಳ ಜಯ ದಾಖಲಿಸಿದ ಬಾಂಗ್ಲದೇಶ ಎ ಗುಂಪಿನಿಂದ ಕ್ವಾರ್ಟರ್ ಫೈನಲಿಗೆ ಜಿಗಿದಿದೆ.

ಬಾಂಗ್ಲಾದೇಶ ನೀಡಿದ್ದ 276ರನ್ ಗಳ ಗುರಿ ಬೆನ್ನು ಹತ್ತಿದ್ದ ಅಂಗ್ಲಪಡೆ 48.6 ಓವರ್ ಗಳಲ್ಲಿ 260 ರನ್ನಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಿಂದ ಪ್ಯಾಕ್ ಅಪ್ ಮಾಡಿಕೊಳ್ಳುತ್ತಿದೆ. ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ತಲುಪಿದ ಖುಷಿಯಲ್ಲಿ ವಿಜಯೋತ್ಸವ ಆಚರಿಸುತ್ತಿದೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಇಂಗ್ಲೆಂಡಿನ ಚೇಸ್ ಉತ್ತಮವಾಗೇ ಇತ್ತು. ಇಯಾನ್ ಬೆಲ್ 63 ರನ್ ಗಳಿಸಿ ರನ್ ಚೇಸ್ ಜಾರಿಯಲ್ಲಿಟ್ಟರು. ಮೊದಲ ಪಂದ್ಯವಾಡಿದ ಅಲೆಕ್ಸ್ ಹೇಲ್ಸ್ 27 ರನ್, ಜೋ ರೂಟ್ 29ರನ್ ಹಾಗೂ ಕೊನೆ ಹಂತದಲ್ಲಿ ಬಟ್ಲರ್ 52 ಎಸೆತಗಳಲ್ಲಿ 65 ರನ್(6X4,1X6) ಸಿಡಿಸಿ ಗೆಲುವಿನ ಸಮೀಪಕ್ಕೆ ತಂಡವನ್ನು ಒಯ್ದರು.

World Cup Match 33: England opt to bowl against Bangladesh

ಆದರೆ, ರೋಚಕ ಘಟ್ಟದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ರುಬೆನ್ ಹುಸೇನ್ 9.3 ಓವ ರ್ ಗಳಲ್ಲಿ 53ಕ್ಕೆ 4 ವಿಕೆಟ್ ಕಿತ್ತು ಬಾಂಗ್ಲಾ ಜಯಕ್ಕೆ ತಮ್ಮ ಕೊಡುಗೆ ನೀಡಿದರು. 40 ಎಸೆತಗಳಲ್ಲಿ 42 ರನ್ ಗಳಿಸಿದ ವೋಕ್ಸ್ ಅಜೇಯರಾಗಿ ಉಳಿದು ಸೋಲಿನ ಕಹಿ ಉಂಡು ಪೆವಿಲಿಯನ್ ಹಾದಿ ಹಿಡಿದರು. 48.3 ಓವರ್ ಗಳಲ್ಲಿ ಇಂಗ್ಲೆಂಡ್ 260ಕ್ಕೆ ಆಲೌಟ್ ಆಗಿ ಮನೆ ಹಾದಿ ಹಿಡಿದಿದೆ.

ಬಾಂಗ್ಲಾ ಇನ್ನಿಂಗ್ಸ್: ಮಹಮುದಲ್ಲಾ ಆಕರ್ಷಕ ಶತಕ 103 ಹಾಗೂ ಮುಷ್ಫಿಕರ್ ರಹೀಂ 89 ರನ್ ಗಳಿಸಿ ಬಾಂಗ್ಲಾ ಮೊತ್ತ ಹೆಚ್ಚಿಸಿದರು. ಇಂಗ್ಲೆಂಡ್ ಪರ ಆಂಡರ್ಸನ್ 45ಕ್ಕೆ 2, ಜೋರ್ಡಾನ್ 59ಕ್ಕೆ 2, ಬ್ರಾಡ್ ಹಾಗೂ ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.

ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ ಮನ್ ತಮೀಮ್ ಇಕ್ಬಾಲ್ ಹಾಗೂ ಇಮ್ರುಲ್ ಕಯೆಸ್ ಇಬ್ಬರು ತಲಾ 2 ರನ್ ಗಳಿಸಿ ಆಂಡರ್ಸನ್ ಬೌಲಿಂಗಿಗೆ ಶರಣಾದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ಸೌಮ್ಯ ಸರ್ಕಾರ್ 40ರನ್ ಹಾಗೂ ಮಮುದ್ದೀನ್ 55 ರನ್ ಗಳಿಸಿ ಇನ್ನಿಂಗ್ಸ್ ಕಟ್ಟಿದರು. ಶಕೀಬ್ ಅಲ್ ಹಸನ್ 2 ರನ್ ಗಳಿಸಿ ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು.

ಟೀಂನಲ್ಲಿ ಬದಲಾವಣೆ: ಇಂಗ್ಲೆಂಡ್ ತಂಡದಿಂದ ಸ್ಟೀವ್ ಫಿನ್ ಹಾಗೂ ಗ್ಯಾರಿ ಬ್ಯಾಲನ್ಸ್ ಬದಲಿಗೆ ಅಲೆಕ್ಸ್ ಹೇಲ್ಸ್ ಹಾಗೂ ಕ್ರಿಸ್ ಜೋರ್ಡನ್ ತಂಡ ಸೇರಿದ್ದಾರೆ. ಬಾಂಗ್ಲಾದೇಶದ ತಂಡದಲ್ಲಿ ಇಮ್ರುಲ್ ಕೇಯೆಸ್ ಹಾಗೂ ಅರಾಫತ್ ಸನ್ನಿ ತಂಡದಲ್ಲಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X