ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್ ವಿಶ್ವದಾಖಲೆ, ಜಿಂಬಾಬ್ವೆ ವಿರುದ್ಧ ವಿಂಡೀಸ್ ಗೆ ಜಯ

By Mahesh

ಕ್ಯಾನ್ ಬೆರಾ, ಫೆ.24: ವೆಸ್ಟ್ ವಿಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ ವಿಶ್ವದಾಖಲೆ ದ್ವಿಶತಕದ ನೆರವಿನಿಂದ ವಿಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ಭರ್ಜರಿ ಮೊತ್ತ ದಾಖಲಿಸಿದೆ. ಕ್ರಿಸ್ ಗೇಲ್ ಸಿಕ್ಸರ್, ಬೌಂಡರಿ ಸುರಿಮಳೆಗೈದು ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ಹಲವು ದಾಖಲೆಗಳನ್ನು ಮುರಿದರು. ಜಿಂಬಾಬ್ವೆ ತಂಡಕ್ಕೆ ಗೆಲ್ಲಲು 373ರನ್ ಟಾರ್ಗೆಟ್ ನೀಡಲಾಗಿತ್ತು. ಜಿಂಬಾಬ್ವೆ ತಂಡದ ಉತ್ತಮ ರನ್ ಚೇಸ್ ಮಾಡಿದರೂ 289 ರನ್ನಿಗೆ ಆಲೌಟ್ ಆಗಿದೆ. ಈ ಮೂಲಕ ವೆಸ್ಟ್ ಇಂಡೀಸ್ 73 ರನ್‌ಗಳ ಜಯ ಸಿಕ್ಕಿದೆ.

ವಿಶ್ವಕಪ್ ವಿಶೇಷ ಪುಟವಿಶ್ವಕಪ್ ವಿಶೇಷ ಪುಟ

ಜಿಂಬಾಬ್ವೆ ಪರ ಸಿಕಂದರ್ ರಾಜಾ 26, ಬ್ರೆಂಡನ್ ಟೇಲರ್ 37 ನಂತರ ವಿಲಿಯಮ್ಸ್ 76, ಇರ್ವಿನ್ 52 ರನ್ ಹೊಡೆದು ಪ್ರತಿರೋಧ ಒಡ್ಡಿದರು. ಟೇಲರ್ 38ಕ್ಕೆ3, ಹೋಲ್ಡರ್ 48ಕ್ಕೆ 3, ಗೇಲ್ 35ಕ್ಕೆ2 ವಿಕೆಟ್ ಕಿತ್ತು ವಿಂಡೀಸ್ ಜಯದಲ್ಲಿ ಭಾಗಿಯಾದರು.

ಜಿಂಬಾಬ್ವೆ ವಿರುದ್ಧ ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಸ್ಮಿತ್ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದರು. ನಂತರ ಕ್ರಿಸ್ ಗೇಲ್ ಹಾಗೂ ಸ್ಯಾಮುಯಲ್ ಜೋಡಿ ಭರ್ಜರಿ ಜೊತೆಯಾಟ ಪ್ರದರ್ಶಿಸಿತು. ಆದರೆ, ಸ್ಯಾಮುಯಲ್ ಹಾಗೂ ಗೇಲ್ ದಾಖಲೆ ಜೊತೆಯಾಟದ ಮೂಲಕ 50 ಓವರ್ ಗಳಲ್ಲಿ 372/2 ಸ್ಕೋರ್ ಮಾಡಿತು. [ಗೇಲ್, ವಿಂಡೀಸ್ ವಿಶ್ವ ದಾಖಲೆಗಳ ಪಟ್ಟಿ]

West Indies win toss, elect to bat against Zimbabwe


ಕ್ರಿಸ್ ಗೇಲ್ ದಾಖಲೆ: 135 ಎಸೆತಗಳಲ್ಲಿ 190 ರನ್ ಸ್ಕೋರ್ ಮಾಡಿದ್ದಾಗ ಕ್ರಿಸ್ ಗೇಲ್ ಅವರು ವಿಶ್ವಕಪ್ ನಲ್ಲಿ ಅತಿಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ ಆಟಗಾರ ಎನಿಸಿಕೊಂಡರು. ಈ ಮೂಲಕ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್(188*) ದಾಖಲೆ ಮುರಿದರು. [ಗೇಲ್ ಡಬ್ಬಲ್ ಸೆಂಚುರಿ, ಗ್ಯಾರಿ, ರಿಚರ್ಡ್ಸ್ ದಾಖಲೆ ಢಮಾರ್]

138 ಎಸೆತಗಳಲ್ಲಿ 200 ರನ್ ಗಡಿ ದಾಟುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ದ್ವಿಶತಕ ಚೆಚ್ಚಿದರು. ಇದು ಕ್ರಿಸ್ ಗೇಲ್ ಅವರ ಮೊದಲ ಡಬ್ಬಲ್ ಸೆಂಚುರಿಯಾಗಿದೆ. ಇನ್ನಿಂಗ್ಸ್ ನ ಅಂತಿಮ ಎಸೆತದಲ್ಲಿ ಚಿಗುಂಬರಕ್ಕೆ ಕ್ಯಾಚಿತ್ತು ಗೇಲ್ ಔಟಾದಾಗ 215 ರನ್ (147 ಎಸೆತ, 10X4, 16X6) ಸ್ಟ್ರೈಕ್ ರೇಟ್ 146.3 ಆಗಿತ್ತು.

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಮರ್ಲಾನ್ ಸ್ಯಾಮುಯಲ್ಸ್ ನಿಧಾನಗತಿಯಲ್ಲಿ ಆಡಿ 143 ಎಸೆತಗಳಲ್ಲಿ 100ರನ್ ಗಡಿ ದಾಟಿ ಗೇಲ್ ಆರ್ಭಟಕ್ಕೆ ಸಾಥ್ ನೀಡಿದರು. ಸ್ಯಾಮುಯಲ್ ತಮ್ಮ 170 ಏಕದಿನ ಪಂದ್ಯಗಳಲ್ಲಿ 8ನೇ ಶತಕ ಬಾರಿಸಿದರು, ಕೊನೆಯಲ್ಲಿ ಸ್ಯಾಮುಯಲ್ಸ್ 156 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಇದ್ದ 133 ರನ್ ಗಳಿಸಿ ಅಜೇಯರಾಗಿ ಉಳಿದರು.

ವೆಸ್ಟ್ ಇಂಡೀಸ್:
ಜಾಸನ್ ಹೋಲ್ಡರ್(ನಾಯಕ), ಕ್ರಿಸ್ ಗೇಲ್, ಸ್ಮಿತ್, ಮರ್ಲನ್ ಸ್ಯಾಮುಯಲ್ಸ್, ಕಾರ್ಟರ್, ರಾಮದೀನ್, ಲೆಂಡ್ಲ್ ಸಿಮನ್ಸ್, ಡರೇನ್ ಸ್ಯಾಮಿ, ಆಂಡ್ರೆ ರಸೆಲ್, ಟೇಲರ್, ಮಿಲ್ಲರ್

ಜಿಂಬಾಬ್ವೆ: ಎಲ್ಟಾನ್ ಚಿಗುಂಬರ(ನಾಯಕ), ಸಿಕಂದರ್ ರಾಜ, ಛಕಾಬಾ, ಮಸಕಡ್ಜ, ಬ್ರೆಂಡನ್ ಟೇಲರ್, ವಿಲಿಯಮ್ಸ್, ಕ್ರಿಸ್ ಇರ್ವಿನ್, ಮತ್ಸಿಕೇನೆರಿ, ಪನ್ಯಾಂಗರ, ಛತಾರಾ, ಕಮುಂಗೋಜಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X