ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪ್ ಗೆದ್ದ ಆಸೀಸ್ ಗೆ 25 ಕೋಟಿ ರು, ಭಾರತಕ್ಕೆಷ್ಟು?

By Mahesh

ಮೆಲ್ಬೋರ್ನ್, ಮಾ.29: ತವರು ನೆಲದಲ್ಲಿ ವಿಶ್ವಕಪ್ ಎತ್ತಿ ಹಿಡಿದ ಆಸ್ಟ್ರೇಲಿಯಾದ ಆಟಗಾರರು ಕಾಂಗೂರುಗಳಂತೆ ನೆಗೆಯುತ್ತಾ ಕೇಕೇ ಹಾಕಿ ಮೈದಾನದ ತುಂಬಾ ಓಡಾಡಿ ವಿಜಯೋತ್ಸವ ಆಚರಿಸಿದ್ದಾರೆ. ಕಿವೀಸ್ ತಂಡವನ್ನು ಸುಲಭವಾಗಿ 7 ವಿಕೆಟ್ ಗಳಿಂದ ಬಗ್ಗುಬಡಿದ ಆಸೀಸ್ ಐದನೇ ಬಾರಿಗೆ ವಿಶ್ವ ಚಾಂಪಿಯನ್ ತಂಡವಾಗಿದೆ. ಕಳೆದ 10 ವಿಶ್ವಕಪ್ ಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಜೋಳಿಗೆಗೆ ಭರಪೂರ ಪ್ರಶಸ್ತಿ, ಪುರಸ್ಕಾರಗಳು ಬಂದು ಬದ್ದಿವೆ.

ಐಸಿಸಿ ವಿಶ್ವಕಪ್ 2015ರ ರಾಯಭಾರಿಯಾಗಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಅಂತಿಮ ಹಣಾಹಣಿಯ ಪಂದ್ಯ ಶ್ರೇಷ್ಠ ಹಾಗೂ ಟೂರ್ನಿಯ ಶ್ರೇಷ್ಠ ಆಟಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ಐಸಿಸಿ ಚೇರ್ಮನ್ ಎನ್ ಶ್ರೀನಿವಾಸನ್ ಅವರು ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಅವರಿಗೆ ಐಸಿಸಿ ವಿಶ್ವಕಪ್ 2015 ಟ್ರೋಫಿ ನೀಡಿದರು.

ಅಂದ ಹಾಗೆ, ಆಸ್ಟ್ರೇಲಿಯಾ ಸರಿ ಸುಮಾರು 25 ಕೋಟಿ ರು ನಗದು ಬಹುಮಾನ ಗಳಿಸಿಕೊಂಡಿದೆ. ಸೆಮಿಫೈನಲ್ ಸೋತ ಭಾರತಕ್ಕೆ ಎಷ್ಟು ಲಭಿಸಲಿದೆ ಎಂಬ ವಿವರ ಮುಂದೆ ಓದಿ...

World Cup 2015: Full list of awards, prize money and statistics

* ಚಾಂಪಿಯನ್ ಆಸ್ಟ್ರೇಲಿಯಾ-ಪ್ರಶಸ್ತಿ ಮೊತ್ತ USD $3,975,000
* ರನ್ನರ್ ಅಪ್ -ನ್ಯೂಜಿಲೆಂಡ್- ಮೊತ್ತ: USD $1,750,000

* ಟೂರ್ನಿ ಶ್ರೇಷ್ಠ ಆಟಗಾರ -ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ) (8 ಪಂದ್ಯಗಳಲ್ಲಿ 22 ವಿಕೆಟ್, 10.08 ಸರಾಸರಿಯಂತೆ ವಿಕೆಟ್ 6/28 ಶ್ರೇಷ್ಠ ಪ್ರದರ್ಶನ)

* ಪಂದ್ಯ ಶ್ರೇಷ್ಠ- ಜೇಮ್ಸ್ ಫಾಲ್ಕ್ನರ್ (3/36, 9ಓವರ್ಸ್)

* ಟೂರ್ನಿಯ ಹೆಚ್ಚು ವಿಕೆಟ್ ಗಳಿಕೆ: ಸ್ಟಾರ್ಕ್ ಹಾಗೂ ಟ್ರೆಂಟ್ ಬೌಲ್ಟ್ (ತಲಾ 22)
* ಟೂರ್ನಿಯ ಹೆಚ್ಚು ರನ್ ಗಳಿಕೆ: ಮಾರ್ಟಿನ್ ಗಪ್ಟಿಲ್ (547ರನ್)
* ಒಟ್ಟು ಶತಕಗಳು -38
* ಒಟ್ಟು ದ್ವಿಶತಕಗಳು- 2
* ಮೂರು ಬಾರಿ 400 ಪ್ಲಸ್ ಸ್ಕೋರ್ ಕಂಡು ಬಂದಿದೆ.
* ಅತಿ ಹೆಚ್ಚು ವೈಯಕ್ತಿಕ ಸ್ಕೋರ್ : 237 ಅಜೇಯ ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)

Guptill

* ಅತಿ ಹೆಚ್ಚು ತಂಡದ ಮೊತ್ತ : ಆಸ್ಟ್ರೇಲಿಯಾ 417/6.
* ಅತಿ ಹೆಚ್ಚು ಸಿಕ್ಸರ್ : ಕ್ರಿಸ್ ಗೇಲ್ -26
* ಅತಿ ಹೆಚ್ಚು ಬೌಂಡರಿ- ಗಪ್ಟಿಲ್ -59
* ಶ್ರೇಷ್ಠ ಬೌಲಿಂಗ್: 7/33- ಟಿಮ್ ಸೌಥಿ vs ಇಂಗ್ಲೆಂಡ್.
* ಶ್ರೇಷ್ಠ ರನ್ ಸರಾಸರಿ: ಕುಮಾರ್ ಸಂಗಕ್ಕಾರ-108.20
* ಅತಿ ಹೆಚ್ಚು ಶತಕ: 4- (ಸತತ) ಕುಮಾರ್ ಸಂಗಕ್ಕಾರ.
* ಅತಿ ಹೆಚ್ಚು ಅರ್ಧಶತಕ- ಸ್ಟೀವ್ ಸ್ಮಿತ್-4.
* ಅತಿ ಹೆಚ್ಚು ಮೇಡನ್ ಓವರ್ - ಟ್ರೆಂಟ್ ಬೌಲ್ಟ್-14.
* ಶ್ರೇಷ್ಠ ಬೌಲಿಂಗ್ ಸರಾಸರಿ- ಸ್ಟಾರ್ಕ್ 10.18.

ವಿಶ್ವಚಾಂಪಿಯನ್ಸ್
1975: ವೆಸ್ಟ್ ಇಂಡೀಸ್; 1979:ವೆಸ್ಟ್ ಇಂಡೀಸ್ ; 1983:ಭಾರತ; 1987: ಆಸ್ಟ್ರೇಲಿಯಾ ; 1992: ಪಾಕಿಸ್ತಾನ; 1996:ಶ್ರೀಲಂಕಾ ; 1999: ಆಸ್ಟ್ರೇಲಿಯಾ; 2003: ಆಸ್ಟ್ರೇಲಿಯಾ ; 2007:ಆಸ್ಟ್ರೇಲಿಯಾ ; 2011: ಭಾರತ ; 2015: ಆಸ್ಟ್ರೇಲಿಯಾ. [ವಿಶ್ವಕಪ್ ಫೈನಲ್ ಪಂದ್ಯಗಳ ಮೆಲುಕು]


ಪ್ರಶಸ್ತಿ ಮೊತ್ತ ಹಂಚಿಕೆ:
ವಿಜೇತ ತಂಡ: USD$3,750,000
ರನ್ನರ್ ಅಪ್: USD$1,750,000
ಸೆಮಿಫೈನಲ್ ನಲ್ಲಿ ಸೋತ 2 ತಂಡಗಳು: USD$600,000
ಕ್ವಾರ್ಟರ್ ಫೈನಲ್ ಸೋತ 4 ತಂಡಗಳು: USD$300,000
ಗ್ರೂಪ್ ಪಂದ್ಯಗಳು : USD$45,000 x 42
ಲೀಗ್ ಹಂತದಲ್ಲಿ ಹೊರ ಬಿದ್ದ ತಂಡಗಳಿಗೆ: USD$35,000 x 6 ತಂಡಗಳು
ಒಟ್ಟಾರೆ ಮೊತ್ತ: USD$10,000,000.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X