ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಗೂ ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

By Mahesh

ಮೆಲ್ಬೋರ್ನ್, ಮಾ.29 : ಐಸಿಸಿ ವಿಶ್ವಕಪ್ 2015 ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಆಸ್ಟ್ರೇಲಿಯಾ ತಂಡ ಸುಲಭವಾಗಿ ಸೋಲಿಸಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಐದನೇ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡ ಆಸ್ಟ್ರೇಲಿಯಾ ಹೊಸ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ತವರು ನೆಲದಲ್ಲಿ ವಿಶ್ವಕಪ್ ಗೆ ಮುತ್ತಿಟ್ಟು ಸಂಭ್ರಮಿಸಿದೆ.

ಆಸ್ಟ್ರೇಲಿಯಾ ಮಾತ್ರ ನಾಲ್ಕು ಬಾರಿ ವಿಶ್ವಕಪ್ ಗೆದ್ದರೂ ಒಂದು ಬಾರಿ ಕೂಡಾ ತವರು ನೆಲದಲ್ಲಿ ವಿಶ್ವಕಪ್ ಎತ್ತಿರಲಿಲ್ಲ. ಭಾರತ ತವರು ನೆಲ ಹಾಗೂ ಭಾರತದಿಂದ ಹೊರಗೆ ಎರಡೂ ಕಡೆ ವಿಶ್ವಕಪ್ ಗೆದ್ದುಕೊಂಡಿದೆ.[ಕಪ್ ಗೆದ್ದ ಆಸೀಸ್ ಗೆ 25 ಕೋಟಿ ರು, ಭಾರತಕ್ಕೆಷ್ಟು?]

ವಿಶ್ವಕಪ್ ವಿಶೇಷ ಪುಟ</a> | <a class=ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ" title="ವಿಶ್ವಕಪ್ ವಿಶೇಷ ಪುಟ | ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ" />ವಿಶ್ವಕಪ್ ವಿಶೇಷ ಪುಟ | ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ

1992ರಲ್ಲಿ ವಿಶ್ವಕಪ್ ಗೆಲ್ಲುವ ಅವಕಾಶ ಸಿಕ್ಕಿದ್ದರೂ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಈಗ ಎರಡನೇ ಬಾರಿ ನ್ಯೂಜಿಲೆಂಡ್ ಜೊತೆ ಜಂಟಿಯಾಗಿ ವಿಶ್ವಕಪ್ ಆತಿಥ್ಯ ವಹಿಸಿಕೊಂಡ ಆಸ್ಟ್ರೇಲಿಯಾ ಕೊನೆಗೂ ತನ್ನ ಮೈದಾನದಲ್ಲಿ ವಿಶ್ವಕಪ್ ಎತ್ತಿದೆ. [1975-2011: ವಿಶ್ವಕಪ್ ಫೈನಲ್ ಪಂದ್ಯಗಳ ಮೆಲುಕು]

WC 2015: Finally, Australia win WC title at home

1987ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ನಲ್ಲಿ ಆಲಾನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ತಂಡ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡಿತು. ನಂತರ 1999ರಲ್ಲಿ ಇಂಗ್ಲೆಂಡ್ ನಲ್ಲಿ, 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ, 2007ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಗೆಲುವು ಸಾಧಿಸಿತ್ತು. ಎರಡು ಫೈನಲ್ ನಲ್ಲಿ ಸೋಲು ಇಂಗ್ಲೆಂಡ್ (1975) ಹಾಗೂ ಪಾಕಿಸ್ತಾನ (1996) ದಲ್ಲಿ ಕಂಡಿತ್ತು. [ಗ್ಯಾಲರಿ: ವಿಶ್ವಕಪ್ ಅಂತಿಮ ಸಮರದ ರಸ ನಿಮಿಷ]

ಭಾರತ 1983ರಲ್ಲಿ ಇಂಗ್ಲೆಂಡ್ ನಲ್ಲಿ ಹಾಗೂ 2011ರಲ್ಲಿ ಮುಂಬೈ, ತವರು ನೆಲದಲ್ಲಿ ವಿಶ್ವಕಪ್ ಎತ್ತಿದೆ.ಇತರೆ ಚಾಂಪಿಯನ್ಸ್ ಪೈಕಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ನಲ್ಲಿ ಎರಡು ಬಾರಿ(1975 ಹಾಗೂ 1979, ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ(1992) ಹಾಗೂ ಶ್ರೀಲಂಕಾ ತಂಡ ಪಾಕಿಸ್ತಾನದಲ್ಲಿ (1996).

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X