ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ತ್ : ಭಾರತ- ವೆಸ್ಟ್ ಇಂಡೀಸ್ ಕದನ ಇಣುಕು ನೋಟ

By Mahesh

ಪರ್ತ್, ಮಾ.2: ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಲು ಸಜ್ಜಾಗಿದ್ದು, ಪರ್ತ್ ಪಿಚ್ ನಲ್ಲಿ ವೆಸ್ಟ್ ಇಂಡೀಸ್ ವನ್ನು ಶುಕ್ರವಾರ(ಮಾ.6, 12PM) ಎದುರಿಸಲಿದೆ.

ವಿಶ್ವಕಪ್ 2015 ಟೂರ್ನಿಯಲ್ಲಿ ಆಡಿರುವ ಎಲ್ಲಾ ಮೂರು ಪಂದ್ಯಗಳು(ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್ ) ಭಾರತದ ಕೈವಶವಾಗಿವೆ. ಐರ್ಲೆಂಡ್ ಹಾಗೂ ನ್ಯೂಜಿಲೆಂಡ್ ಬಿಟ್ಟರೆ ಭಾರತ ಅಜೇಯವಾಗಿ ಉಳಿದಿದೆ.

ಟೀಂ ಇಂಡಿಯಾದ ಸದ್ಯ ಹೊಂದಿರುವ ಲಯವನ್ನು ಗಮನಿಸಿದರೆ ಯಾವುದೇ ತಂಡವನ್ನು ಮಣಿಸಬಹುದು ಎಂದು ಕ್ರಿಕೆಟ್ ತಜ್ಞರು ಹೇಳಿದ್ದಾರೆ. ಅದರೆ, ಕಳೆದ ವಾರ ಜಿಂಬಾಬ್ವೆ ವಿರುದ್ಧ ವಿಶ್ವಕಪ್ ಟೂರ್ನಿಯ ಮೊದಲ ದ್ವಿಶತಕ ದಾಖಲಿಸಿರುವ ಕ್ರಿಸ್ ಗೇಲ್ ನಿಯಂತ್ರಿಸುವುದು ಮುಖ್ಯವಾಗಿದೆ.

ವಾಕಾ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ. ಇಲ್ಲಿ ತನಕದ ಕದನ ಸ್ವಾರಸ್ಯಗಳತ್ತ ಒಂದು ಇಣುಕು ನೋಟ ಇಲ್ಲಿದೆ:

World Cup 2015,10 facts about India-West Indies match in Perth


1. ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ಇದುವರೆವಿಗೂ ಒಟ್ಟು 8 ಬಾರಿ ಪರಸ್ಪರ ಎದುರಾಗಿವೆ. ಭಾರತ 4-3 ಅಂತರದಿಂದ ಮುಂದಿದೆ.

2. ಕಪಿಲ್ ದೇವ್ (ಭಾರತ) ಹಾಗೂ ಡೆಸ್ಮಂಡ್ ಹೇಯ್ಸ್ (ವೆಸ್ಟ್ ಇಂಡೀಸ್) ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಇಬ್ಬರು 1979ರಿಂದ 1992 ರ ತನಕ 7 ರಲ್ಲಿ 5 ಪಂದ್ಯಗಳನ್ನಾಡಿದ್ದಾರೆ.

3.1979ರಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿದ ಭಾರತ ತಂಡ 9 ವಿಕೆಟ್ ಗಳ ಸೋಲಿನ ಕಹಿ ಅನುಭವಿಸಿತು.

4. ಭಾರತ-ವೆಸ್ಟ್ ಇಂಡೀಸ್ ಕದನದಲ್ಲಿ ವಿವಿಯನ್ ರಿಚರ್ಡ್ಸ್ ಹೆಚ್ಚು ರನ್ ಗಳಿಕೆ ಹೊಂದಿದ್ದಾರೆ 197(4 ಇನ್ನಿಂಗ್ಸ್, 1 ಶತಕ), ಮೈಕಲ್ ಹೋಲ್ಡಿಂಗ್ ಹೆಚ್ಚು ವಿಕೆಟ್ ಕಿತ್ತಿದ್ದಾರೆ -11(4 ಇನ್ನಿಂಗ್ಸ್)

5. ವೆಸ್ಟ್ ಇಂಡೀಸ್ ಪರ 2 ಶತಕಗಳು ಬಂದಿವೆ. (ಗಾರ್ಡನ್ ಗ್ರೀನಿಡ್ಜ್ -106*, 1979, ವಿವಿಯನ್ ರಿಚರ್ಡ್ಸ್ 119, 1983), ಭಾರತದ ಪರ ಯುವರಾಜ್ ಸಿಂಗ್ ಮಾತ್ರ ಶತಕ ಗಳಿಸಿದ್ದಾರೆ -113, 2011.

6. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪರ ಮೋಹಿಂದರ್ ಅಮರನಾಥ್ 135(4 ಇನ್ನಿಂಗ್ಸ್ 80 ಗರಿಷ್ಠ ರನ್), ಟಾಪ್ ವಿಕೆಟ್ ಗಳಿಕೆ-ರೋಜರ್ ಬಿನ್ನಿ 7 ವಿಕೆಟ್ (3 ಇನ್ನಿಂಗ್ಸ್, 3/48).

7. ಗಾರ್ಡನ್ ಗ್ರೀನಿಡ್ಜ್ ಹಾಗೂ ಡೇಸ್ಮಂಡ್ ಹೇಯ್ಸ್ ಅವರು ಮೊದಲ ವಿಕೆಟ್ ಗೆ ದಾಖಲೆಯ 138 ರನ್, 1979 ಜೊತೆಯಾಟ. ಆಂಡಿ ರಾಬರ್ಟ್ಸ್-ಜೋಲ್ ಗಾರ್ನರ್ 10ನೇ ವಿಕೆಟ್ ಗೆ 71ರನ್ ಜೊತೆಯಾಟ ದಾಖಲೆಯಾಗಿದೆ. ಜೊತೆಗೆ ಕೀತ್ ಅಥರ್ಟನ್-ಕಾರ್ಲ್ ಹೂಪರ್ 6ನೇ ವಿಕೆಟ್ 83*, 1992 ಕೂಡಾ ಹೆಚ್ಚಿನ ಜೊತೆಯಾಟಯಾಗಿದೆ.

8. ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿವಿಯನ್ ರಿಚರ್ಡ್ಸ್ ಹೆಸರಿನಲ್ಲಿದೆ. 1983ರಲ್ಲಿ 3 ಇನ್ನಿಂಗ್ಸ್ ನಲ್ಲಿ 169 ರನ್ ಗಳಿಸಿದ್ದರು.

9. ಭಾರತ ತನ್ನ ಮೊಟ್ಟ ಮೊದಲ ವಿಶ್ವಕಪ್ 1983ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಗೆಲುವು ಸಾಧಿಸಿತು.

10. ಭಾರತ- ವೆಸ್ಟ್ ಇಂಡೀಸ್ ವಿರುದ್ಧದ 7 ಕದನದಲ್ಲಿ 7 ಪ್ರತ್ಯೇಕ ಪಂದ್ಯ ಶ್ರೇಷ್ಠ ಪ್ರಶಸ್ತಿ ವಿಜೇತರನ್ನು ಕಂಡಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X