ಟಿ20 : 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ವೈಟ್ಲಿ

Posted By:
Subscribe to Oneindia Kannada

ಲಂಡನ್, ಜುಲೈ 24: ವಿಶ್ವ ಟಿ20ಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಆರು ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದು ನೆನಪಿರಬಹುದು. ಈಗ ನ್ಯಾಟ್ ವೆಸ್ಟ್ ಟಿ20 ಬ್ಲಾಸ್ಟ್ ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಒಬ್ಬರು ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿ ಸುದ್ದಿಯಾಗಿದ್ದಾರೆ.

ವೆರ್ಸೆಸ್ಟ್ ರ್ಶೈರ್ ಬ್ಯಾಟ್ಸ್ ಮನ್ ರಾಸ್ ವೈಟ್ಲಿ ಅವರು ಈ ಸಾಧನೆ ಮಾಡಿದ್ದಾರೆ. ರಾಸ್ ಅವರ ಆರ್ಭಟದ ನಡುವೆಯೂ ವೆರ್ಸೆಸ್ಟ್ ರ್ಶೈರ್ ತಂಡವು ಯಾರ್ಕ್ ಶೈರ್ ವಿರುದ್ಧ ಸೋಲು ಕಂಡಿದೆ.

Worcestershire’s Ross Whiteley smashes six sixes in an over during Natwest T20 Blast match

ಮೊದಲು ಬ್ಯಾಟಿಂಗ್ ಮಾಡಿದ್ದ ಯಾರ್ಕ್ ಶೈರ್ 6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತ್ತು. ವೈಟ್ಲಿ 26 ಎಸೆತಗಳಲ್ಲಿ 56 ರನ್ ಸಿಡಿಸಿದರೂ ವೆರ್ಸೆಸ್ಟ್ ರ್ಶೈರ್ 7 ವಿಕೆಟ್ ನಷ್ಟಕ್ಕೆ 196 ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಎಡಗೈ ಸ್ಪಿನ್ನರ್ ಕಾರ್ಲ್ ಕಾವರ್ ಅವರ ಎಲ್ಲ ಎಸೆತವನ್ನು ವೈಟ್ಲಿ ಅವರು ಸಿಕ್ಸ್ ಬಾರಿಸಿದ್ದು ಮಾತ್ರ ದಾಖಲೆಯಾಗಿ ಉಳಿಯಿತು.

1968ರಲ್ಲಿ ನಾಟಿಂಗ್ ಹ್ಯಾಮ್ ಶೈರ್ ಪರ ವೆಸ್ಟ್ ಇಂಡೀಸ್‍ ನ ಗ್ಯಾರಿ ಸೋಬರ್ಸ್ ಅವರು 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಮುನ್ನುಡಿ ಬರೆದರು. 1985ರಲ್ಲಿ ರಣಜಿ ಪಂದ್ಯದಲ್ಲಿ ತಿಲಕ್ಕ್ ರಾಜ್ ಎಸೆತಗಳನ್ನು ಪೆವಿಲಿಯನ್ ಆಚೆಗಟ್ಟಿ ರವಿಶಾಸ್ತ್ರಿ ಸಾಧನೆ ಮಾಡಿದರು. ಟಿ-20 ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದ್ದರು.

Shah Rukh Khan now owns Three T20 teams | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Worcestershire batsman Ross Whiteley did a Yuvraj Singh as he smashed six sixes in an over during an English Twenty20 match at Headingly on Sunday (July 23).
Please Wait while comments are loading...