ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳೆಯರ ವಿಶ್ವಕಪ್ ಅರ್ಹತೆ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ

ಮಹಿಳೆಯರ ವಿಶ್ವಕಪ್ ಅರ್ಹತೆಗಾಗಿ ನಡೆದ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫಿಕಾ ತಂಡವನ್ನು ರೋಚಕವಾಗಿ ಭಾರತದ ವನಿತೆಯರು ಸೋಲಿಸಿದ್ದಾರೆ.

By Mahesh

ಕೊಲಬೋ, ಫೆಬ್ರವರಿ 21: ಮಹಿಳೆಯರ ವಿಶ್ವಕಪ್ ಅರ್ಹತೆಗಾಗಿ ನಡೆದ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫಿಕಾ ತಂಡವನ್ನು ರೋಚಕವಾಗಿ ಭಾರತದ ವನಿತೆಯರು ಸೋಲಿಸಿದ್ದಾರೆ. ಹರ್ಮನ್ ಪ್ರೀತ್ ಕೌರ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಪಂದ್ಯದ ಕೊನೆ ಎಸೆತದಲ್ಲಿ ಒಂದು ವಿಕೆಟ್ ಗಳ ರೋಚಕ ಜಯವನ್ನು ಸಾಧಿಸಲಾಯಿತು.

245ರನ್ ಚೇಸ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಭಿಕ ಮೋನಾ ಮೆಶ್ರಾಮ್ (59) ಹಾಗೂ ದೀಪ್ತಿ ಶರ್ಮ(71) ಜೋಡಿ 124 ರನ್ ಜೊತೆಯಾಟ ಹಾಗೂ ಹರ್ಮನ್ ಪ್ರೀತ್ ಅವರ 41 ರನ್ ಅಜೇಯ ಹೋರಾಟದಿಂದ ಭಾರತದ ಮಹಿಳೆಯರು ಪಂದ್ಯವನ್ನು ತನ್ನದಾಗಿಸಿಕೊಂಡರು.

Women's World Cup Qualifier Final: India pip South Africa in last-ball thriller

ಮೆಶ್ರಾಮ್ ಅವರು 82 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಿಡಿಸಿ 59ರನ್ ಗಳಿಸಿದರೆ, ದೀಪ್ತಿ ಅವರು 89 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 71ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ : 244 (ಮಿಗ್ನೊನ್ ಡು ಪ್ರೀಜ್ 40, ಲಿಜೆಲೆ ಲೀ 37, ಡೇನ್ ವಾನ್ ನೈಕೆರ್ಕ್ 37, ರಾಜೇಶ್ವರಿ ಗಾಯಕ್ವಾಡ್ 3/51, ಶಿಖಾ ಪಾಂಡೆ 2/41)

ಭಾರತ : 245/9 (ದೀಪ್ತಿ ಶರ್ಮ 71, ಮೋನಾ ಮೇಶ್ರಾಮ್ 59, ಹರ್ಮಾನ್ ಪ್ರೀತ್ ಕೌರ್ 41 ಅಜೇಯ, ಮರಿಜಾನೆ ಕಾಪ್ 2/36) (ಐಎಎನ್ಎಸ್)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X