ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದು ಮಹಿಳಾ ವಿಶ್ವಕಪ್ ಫೈನಲ್: ಭಾರತಕ್ಕೆ 2005ರ ಕಹಿ ಮರುಕಳಿಸದಿರಲಿ

ಲಂಡನ್ ನಲ್ಲಿ ಭಾನುವಾರ (ಜುಲೈ 23) ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಅದು ಹೊಸ ಇತಿಹಾಸ ನಿರ್ಮಾಣ ಮಾಡಿದಂತಾಗುತ್ತದೆ.

ಲಂಡನ್, ಜುಲೈ 23: ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಈ ಬಾರಿಯ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಕ್ರಿಕೆಟ್ ಕಾಶಿ ಎನಿಸಿರುವ ಲಾರ್ಡ್ಸ್ ಮೈದಾನದಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾಗುವ ಪಂದ್ಯದಲ್ಲಿ ಇತ್ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಮುಖಾಮುಖಿಯಾಗಲಿವೆ.

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ತಲಾ 50 ಲಕ್ಷ ರು. ಬಹುಮಾನಭಾರತೀಯ ಮಹಿಳಾ ಕ್ರಿಕೆಟಿಗರಿಗೆ ತಲಾ 50 ಲಕ್ಷ ರು. ಬಹುಮಾನ

Women's World Cup 2017: Indian Women's Cricket team decides to rewrite the verdict of previous final

ಇಲ್ಲಿ ಭಾರತ ಗೆದ್ದರೆ ಇತಿಹಾಸ, ಸೋತರೆ ಮತ್ತೊಂದು ಕಹಿ ನೆನಪು! ಹೌದು. ವಿಶ್ವಕಪ್ ಗೆಲ್ಲುವ ಎರಡನೇ ಅವಕಾಶ ಈಗ ಭಾರತದ ಕೈಗೆ ದಕ್ಕಿದೆ. 2005ರಲ್ಲಿ ಸೆಂಚೂರಿಯನ್ ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಹೀಗೇ ಕಪ್ ಗೆಲ್ಲುವ ಅವಕಾಶಕ್ಕೆ ಕೈ ಚಾಚಿತ್ತು.

ಆದರೆ, ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ ವರ್ಷ ನಡೆದಿದ್ದ ಆ ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 98 ರನ್ ಗಳ ಸೋಲು ಕಂಡಿತ್ತು. ಈಗ, ಸರಿಯಾಗಿ 12 ವರ್ಷಗಳ ನಂತರ ಮತ್ತೆ ಅಂಥದ್ದೊಂದು ಅವಕಾಶ ಭಾರತದ ಪಾಲಿಗೆ ಬಂದಿದೆ. ಇದನ್ನು ಸಾರ್ಥಕಗೊಳಿಸುವ ಜವಾಬ್ದಾರಿ ಈಗ ಮಿಥಾಲಿ ಪಡೆಯ ಮೇಲಿದೆ.

ಭಾರತ ವನಿತೆಯರ ಕ್ರಿಕೆಟ್ ತಂಡ ಕೊಂಡಾಡಿದ ಕೊಹ್ಲಿ, ಸೆಹ್ವಾಗ್, ಸಚಿನ್ಭಾರತ ವನಿತೆಯರ ಕ್ರಿಕೆಟ್ ತಂಡ ಕೊಂಡಾಡಿದ ಕೊಹ್ಲಿ, ಸೆಹ್ವಾಗ್, ಸಚಿನ್

ಅಂದಹಾಗೆ, ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಹಾಗೂ ಜುಲಾನಾ ಗೋಸ್ವಾಮಿಗೆ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆಗಳಿವೆ. ಏಕೆಂದರೆ, ಇಬ್ಬರಿಗೂ ಈಗ 34 ವರ್ಷ ವಯಸ್ಸು.

Women's World Cup 2017: Indian Women's Cricket team decides to rewrite the verdict of previous final

2005ರ ವಿಶ್ವಕಪ್ ಫೈನಲ್ ನಲ್ಲಿ ಪಾಲ್ಗೊಂಡಿದ್ದ ತಂಡದಲ್ಲಿನ ಆಟಗಾರ್ತಿಯಲ್ಲಿ ಇನ್ನೂ ತಂಡದಲ್ಲಿ ಉಳಿದಿರುವುದು ಈ ಇಬ್ಬರೇ. ಭಾರತ ಈ ಬಾರಿ ವಿಶ್ವಕಪ್ ಗೆದ್ದರೆ, ಮಿಥಾಲಿ ಹಾಗೂ ಜುಲಾನ್ ಗೆ ಈ ಗೆಲುವುದು ಜೀವನ ಪೂರ್ತಿ ಅತ್ಯಂತ ಸ್ಮರಣೀಯವಾಗಿರಲಿದೆ.

ಕನ್ನಡದ ಕ್ರಿಕೆಟ್ ಪ್ರತಿಭೆ ರಾಜೇಶ್ವರಿ ತಂದೆಗೆ ಸಚಿನ್ ಮೆಚ್ಚುಗೆಕನ್ನಡದ ಕ್ರಿಕೆಟ್ ಪ್ರತಿಭೆ ರಾಜೇಶ್ವರಿ ತಂದೆಗೆ ಸಚಿನ್ ಮೆಚ್ಚುಗೆ

ಹಿಂದಿನ ಫೈನಲ್ ನಲ್ಲಿ ಏನಾಗಿತ್ತು, ಈ ಬಾರಿಯ ಫೈನಲ್ ನಲ್ಲಿ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ಬಲಾಬಲಗಳೇನು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಆಸೀಸ್ ವಿರುದ್ಧ ಭಾರತಕ್ಕೆ 98 ರನ್ ಸೋಲು

ಆಸೀಸ್ ವಿರುದ್ಧ ಭಾರತಕ್ಕೆ 98 ರನ್ ಸೋಲು

2005ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ, ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತ್ತು. ಆ ಮೊತ್ತವನ್ನು ಬೆನ್ನಟ್ಟಿದ ಭಾರತ, 46 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 117 ರನ್ ಮಾತ್ರ ಗಳಿಸಿತ್ತು. ಹಾಗೆ ಸೋತು, ರನ್ನರ್ ಅಪ್ ಪ್ರಶಸ್ತಿಗಷ್ಟೇ ತೃಪ್ತಿಪಟ್ಟುಕೊಂಡಿತ್ತು ಭಾರತ.

ಆಂಗ್ಲರ ಬ್ಯಾಟಿಂಗ್ ಬಲ ಮಿಕ್ಕವರಿಗೆ ಉತ್ತಮ

ಆಂಗ್ಲರ ಬ್ಯಾಟಿಂಗ್ ಬಲ ಮಿಕ್ಕವರಿಗೆ ಉತ್ತಮ

ಸದ್ಯದ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್ ಮತ್ತು ಭಾರತದ ಪಂದ್ಯವೆಂದರೆ ಅದು ಆಂಗ್ಲರ ಬ್ಯಾಟಿಂಗ್ V/s ಭಾರತದ ಸ್ಪಿನ್ ಬೌಲಿಂಗ್ ಎಂದೇ ಅರ್ಥ. ಈ ಬಾರಿಯ ಮಹಿಳಾ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ರನ್ ರೇಟ್ (5.79) ಮಿಕ್ಕೆಲ್ಲಾ ತಂಡಗಳಿಗಿಂತ ಉತ್ತಮವಾಗಿದೆ. ಆಂಗ್ಲರ ಪಡೆಗೆ ಹೋಲಿಸಿದರೆ, ಭಾರತದ ರನ್ ರೇಟ್ (4.72) ಸುಮಾರಾಗಿದೆ. ಇಂಗ್ಲೆಂಡ್ ಈ ಟೂರ್ನಿಯಲ್ಲಿ ಈವರೆಗಿನ ಪಂದ್ಯಗಳಿಂದ 1103 ರನ್ ಕಲೆಹಾಕಿದ್ದರೆ, ಭಾರತ 904 ರನ್ ಕಲೆಹಾಕಿದೆ.

ಇಂಗ್ಲೆಂಡ್ ಗಿಂತ ಭಾರತದ ಬೌಲಿಂಗ್ ಉತ್ತಮ

ಇಂಗ್ಲೆಂಡ್ ಗಿಂತ ಭಾರತದ ಬೌಲಿಂಗ್ ಉತ್ತಮ

ಇನ್ನು, ಭಾರತದ ಬೌಲಿಂಗ್ ಶಕ್ತಿ ಮಜಬೂತಾಗಿದೆ. ಅಸಲಿಗೆ, ಆಸ್ಟ್ರೇಲಿಯಾ ತಂಡ ಲೀಗ್ ಹಾಗೂ ಸೆಮಿಫೈನಲ್ ಗಳಿಂದ ಒಟ್ಟು 67 ವಿಕೆಟ್ ಸಂಪಾದಿಸಿದ್ದರೆ, ಭಾರತ 66 ವಿಕೆಟ್ ಗಳಿಸಿದೆ. ರನ್ ನೀಡಿರುವ ವಿಚಾರದಲ್ಲೂ ಹಾಗೇ. ಪ್ರತಿ ವಿಕೆಟ್ ಗೆ 23.37 ರನ್ ರೇಟ್ ನೀಡಿದೆ ಭಾರತ. ಇದು ಆಸೀಸ್ ನಂತರದ 2ನೇ ಶ್ರೇಷ್ಠ ಪ್ರದರ್ಶನ. ಇನ್ನು, ಬೌಲಿಂಗ್ ಎಕಾನಮಿಯಲ್ಲೂ ಭಾರತ, 4.45ರ ಮಟ್ಟವನ್ನು ಹೊಂದಿದೆ. ಇದು ಇಂಗ್ಲೆಂಡ್ ಗಿಂತ (4.54) ಉತ್ತಮ. ಒಟ್ಟಾರೆಯಾಗಿ ಹೇಳಬೇಕೆಂದರೆ, ಭಾರತದ ಬೌಲಿಂಗ್ ಇಂಗ್ಲೆಂಡ್ ಗಿಂತ ಉತ್ತಮವಾಗಿದೆ.

ವೇಗದ ಬೌಲಿಂಗ್ ನಲ್ಲಿ ಇಂಗ್ಲೆಂಡ್ ಗೆ ಹೆಚ್ಚು ಯಶಸ್ಸು

ವೇಗದ ಬೌಲಿಂಗ್ ನಲ್ಲಿ ಇಂಗ್ಲೆಂಡ್ ಗೆ ಹೆಚ್ಚು ಯಶಸ್ಸು

ಈಗ ಎರಡೂ ತಂಡಗಳ ಸ್ಪಿನ್ V/s ಸ್ಪೀಡ್ ಬೌಲಿಂಗ್ ಗಳನ್ನು ಪರಸ್ಪರ ಹೋಲಿಸಿ ನೋಡೋಣ. ಈ ಟೂರ್ನಿಯಲ್ಲಿ ಈವರೆಗೆ ಭಾರತ, ಸ್ಪಿನ್ ಮೂಲಕ 41 ವಿಕೆಟ್ ಗಳಿಸಿದ್ದರೆ, ಇಂಗ್ಲೆಂಡ್ 28 ವಿಕೆಟ್ ಉರುಳಿಸಿದೆ. ಇಲ್ಲಿ ಭಾರತದ್ದು, ಇಂಗ್ಲೆಂಡ್ ಗಿಂತ ಹೆಚ್ಚೂ ಕಡಿಮೆ ಡಬಲ್ ಸಾಧನೆ. ಇನ್ನು, ವೇಗದ ಬೌಲಿಂಗ್ ನಲ್ಲಿ ಭಾರತ 17 ವಿಕೆಟ್ ಗಳಿಸಿದರೆ, ಇಂಗ್ಲೆಂಡ್ 23 ವಿಕೆಟ್ ಗಳಿಸಿದೆ. ಇಲ್ಲಿ ಭಾರತದ ಸಾಧನೆಯೇನೂ ಕಳಪೆಯಾಗಿಲ್ಲ. ಇಂಗ್ಲೆಂಡ್ ಗಳಿಸಿರುವ ವಿಕೆಟ್ ಗಳಿಗಿಂತ ಕೇವಲ 6 ವಿಕೆಟ್ ಕಡಿಮೆಯಷ್ಟೆ.

ಭಾರತಕ್ಕೆ ಇತಿಹಾಸ ನಿರ್ಮಿಸುವ ಅವಕಾಶ

ಭಾರತಕ್ಕೆ ಇತಿಹಾಸ ನಿರ್ಮಿಸುವ ಅವಕಾಶ

ಇನ್ನು, ಎರಡೂ ತಂಡಗಳ ಈ ಹಿಂದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿನ ಸಾಧನೆಯನ್ನು ಗಮನಿಸಿದರೆ, ಸಿಗುವ ಮಾಹಿತಿ ಹೀಗಿದೆ. ಇಂಗ್ಲೆಂಡ್ ತಂಡ, ಈವರೆಗೆ ನಾಲ್ಕು ಬಾರಿ ಫೈನಲ್ ಗೆ ಬಂದಿದೆ. ಮೊದಲೆರಡು ಬಾರಿ (1982 ಹಾಗೂ 1986) ಅದು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಆದರೆ, 1993 ಹಾಗೂ 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಕಪ್ ಎತ್ತಿ ಹಿಡಿದಿದೆ. ಇನ್ನು, ಭಾರತದ ವಿಚಾರಕ್ಕೆ ಬಂದರೆ, ಇದು ಎರಡನೇ ಫೈನಲ್. ಮೊದಲ ಫೈನಲ್ ನಲ್ಲಿ ಸೋಲು, ಈಗ ಎರಡನೇ ಫೈನಲ್ ನಲ್ಲಿ ಏನಾಗುತ್ತದೆಯೋ ಕಾದು ನೋಡಬೇಕಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X