ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೆಲ್ಬೋರ್ನ್ ನಲ್ಲಿ 'ವಿಕೆಟ್ ಕೀಪರ್' ಧೋನಿ ಮಹತ್ಸಾಧನೆ

By Mahesh

ಮೆಲ್ಭೊರ್ನ್, ಜ.29: ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ಹಾಗೂ ಟ್ವೆಂಟಿ 20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಟಿ20 ಸರಣಿ ಗೆದ್ದ ಖುಷಿಯಲ್ಲೇ ಧೋನಿ ಮಹತ್ಸಾಧನೆ ಮಾಡಿದ್ದಾರೆ.

ಎರಡನೇ ಟಿ20ಐ ಪಂದ್ಯದ ಸಂದರ್ಭದಲ್ಲಿ ರವೀಂದ್ರ ಜಡೇಜ ಬೌಲಿಂಗ್ ನಲಿ ಆಸ್ಟ್ರೇಲಿಯಾದ ಜೇಮ್ಸ್ ಫಾಲ್ಕ್ನರ್ ಅವರನ್ನು ಧೋನಿ ಸ್ಟಂಪ್ ಮಾಡಿ ಔಟ್ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.[ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ]

Wicketkeeper MS Dhoni sets world record in Melbourne

ಧೋನಿ ಅವರು ಈಗ 140 ಸ್ಟಂಪ್ ಔಟ್ ಮಾಡಿ ವಿಶ್ವ ದಾಖಲೆ ಮುರಿದಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರು 139 ಸ್ಟಂಪ್ ಔಟ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. [ಟಿ20 ಮಾದರಿಯಲ್ಲಿ ಏಷ್ಯಾಕಪ್, ಸಂಪೂರ್ಣ ವೇಳಾಪಟ್ಟಿ]

ಜೇಮ್ಸ್ ಫಾಲ್ಕ್ನರ್ ಸ್ಟಂಪಿಂಗ್ ಸುಲಭವಾಗಿರಲಿಲ್ಲ. ಚೆಂಡು ಪ್ಯಾಡಿಗೆ ಬಡಿದು ಹಿಂದಕ್ಕೆ ಚಲಿಸಿತ್ತು. ಧೋನಿ ಇಂದು ಒಟ್ಟು ಎರಡು ಸ್ಟಂಪಿಂಗ್ ಮೂಲಕ ವಿಕೆಟ್ ಕೀಪಿಂಗ್ ಚಾಕಚಕ್ಯತೆ ತೋರಿಸಿದರು. ಯುವರಾಜ್ ಸಿಂಗ್ ಬೌಲಿಂಗ್ ನಲಿ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಔಟ್ ಮಾಡಿದರು.

34 ವರ್ಷ ವಯಸ್ಸಿನ ಧೋನಿ ಅವರು ಇಲ್ಲಿ ತನಕ 90 ಟೆಸ್ಟ್ ಪಂದ್ಯ, 275 ಏಕದಿನ ಕ್ರಿಕೆಟ್ ಹಾಗೂ 54 ಟಿ 20 ಪಂದ್ಯಗಳನ್ನಾಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ 89 ಸ್ಟಂಪಿಂಗ್, ಟೆಸ್ಟ್ ಪಂದ್ಯಗಳಿಂದ 38 ಹಾಗೂ ಟಿ20ಐಗಳಿಂದ 13 ಬಲಿ ಪಡೆದಿದ್ದಾರೆ.

ಡಿಸೆಂಬರ್ 2004ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಧೋನಿ ಅವರು ಡಿಸೆಂಬರ್ 2014ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದರು. ಆದರೆ, 50ಓವರ್ ಗಳ ಪಂದ್ಯ ಹಾಗೂ 20 ಓವರ್ ಗಳ ಟಿ20 ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಜನವರಿ 29,2016ಕ್ಕೆ ಅನ್ವಯವಾಗುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸ್ಟಂಪಿಂಗ್
* 140-ಎಂಎಸ್ ಧೋನಿ (ಭಾರತ)
* 139-ಕುಮಾರ್ ಸಂಗಕ್ಕಾರ (ಶ್ರೀಲಂಕಾ)
* 101-ರೊಮೇಶ್ ಕಲುವಿತರಣ (ಶ್ರೀಲಂಕಾ)
* 93- ಮೋಯಿನ್ ಖಾನ್ (ಪಾಕಿಸ್ತಾನ)
* 92-ಅಡಂ ಗಿಲ್ ಕ್ರಿಸ್ಟ್ (ಅಸ್ಟ್ರೇಲಿಯಾ)

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X