ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಕಂಡರೆ ಯುಎಇ ನಾಯಕ ತಕ್ವೀರ್ ಗೆ ಭಯವಿಲ್ಲ

ಪರ್ತ್, ಫೆ. 27 : ಭಾರತ ತಂಡದಲ್ಲಿ ಸ್ಟಾರ್ ಆಟಗಾರರಿರಬಹುದು. ಆದರೆ ಅವರ ಜನಪ್ರಿಯತೆ ನಮ್ಮ ಆಟಕ್ಕೆ ಮಂಕು ಕವಿಯುವಂತೆ ಮಾಡಲ್ಲ ಎಂದು ಯುಎಇ ತಂಡದ ನಾಯಕ ಮೊಹಮದ್ ತಕ್ವೀರ್ ಹೇಳಿದ್ದಾರೆ.

ಫೆಬ್ರವರಿ 28 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ವಿಶ್ವ ಚಾಂಪಿಯನ್ ಭಾರತವನ್ನು ಎದುರಿಸಲಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಎರಡು ತಂಡಗಳು ಮುಖಾಮುಖಿಯಾಗುತ್ತಿರುವಿದು ವಿಶೇಷ.[ಪರ್ತ್: ಭಾರತಕ್ಕೆ ಆಘಾತ! ವೇಗಿ ಶಮಿ ಅಲಭ್ಯ]

cricket

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

ಈ ಪಂದ್ಯದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯುಎಇ ನಾಯಕ ತಕ್ವೀರ್, "ಇದು ಉಳಿದ ಪಂದ್ಯಗಳಂತೆ ಎಂದು ನಾವು ಭಾವಿಸಿಲ್ಲ. ಭಾರತ ತಂಡದಲ್ಲಿರುವವರು ಸ್ಟಾರ್ ಆಟಗಾರರು ಎಂಬುದು ಗೊತ್ತು. ಆದರೆ ಹಿಂದಿನ ಪಂದ್ಯಗಳಂತೆ ನಮ್ಮ ಹೋರಾಟ ಮುಂದುವರಿಯಲಿದೆ" ಎಂದು ಹೇಳಿದರು.

2004ರ ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧವೇ ಏಕದಿನಕ್ಕೆ ಪಾದಾಪರ್ಣೆ ಮಾಡಿದ ತಕ್ವೀರ್ ಅರ್ಧಶತಕ ಗಳಿಸಿದ್ದರು. ಜಹೀರ್ ಖಾನ್ ಮತ್ತು ಅನಿಲ್ ಕುಂಬ್ಳೆಯಂಥ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ್ದರು.[ಪಂದ್ಯಕ್ಕೂ ಮುನ್ನವೇ ಭಾರತೀಯ ಅಭಿಮಾನಿಗಳು ಗರಂ]

ಭಾರತದ ವಿರುದ್ಧದ ಪಂದ್ಯ ಯುಎಇಗೆ ವಿಶ್ವಕಪ್ ಅಭಿಯಾನದ ಮೂರನೇ ಪಂದ್ಯವಾಗಿದೆ. ಜಿಂಬಾಬ್ವೆ ಮತ್ತು ಐರ್ ಲೆಂಡ್ ವಿರುದ್ಧ ಸೋಲು ಕಂಡಿರುವ ತಂಡ ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದುಕೊಂಡು ಚೆನ್ನಾಗಿ ಆಡಲಿದೆ ಎಂಬ ವಿಶ್ವಾಸವನ್ನು ತಕ್ವೀರ್ ವ್ಯಕ್ತಪಡಿಸಿದರು.

ಸುಧಾರಣೆ ಹಾದಿಯಲ್ಲಿ
ಐರ್ ಲೆಂಡ್ ವಿರುದ್ಧ ತಂಡ ದಿಟ್ಟ ಹೋರಾಟ ತೋರಿಸಿದೆ. ಪಂದ್ಯದವನ್ನು ಅಂತಿಮ ಓವರ್ ತನಕ ಎಳೆದು ತಂದಿದ್ದು ಕೂದಲೆಳೆ ಅಂತರದಲ್ಲಿ ಜಯ ಕೈ ತಪ್ಪಿತು. ಇಂಥ ತಪ್ಪುಗಳಿಂದ ಪಾಠ ಕಲಿಯುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಎಇ ತಂಡದಲ್ಲಿರುವ ಬಹುತೇಕ ಆಟಗಾರರು ಶಿಪ್ಪಿಂಗ್ ಮತ್ತು ವಿಮಾನಯಾನ ಸಂಸ್ಥೆಯ ನೌಕರರು. ಯಾರೊಬ್ಬರೂ ವೃತ್ತಿಪರ ಕ್ರಿಕೆಟಿಗರಲ್ಲ. ಭಾರತೀಯ ಮೂಲದ ಕೃಷ್ಣ ಚಂದನ್ ಮತ್ತು ಸ್ವಪ್ ನೀಲ್ ಪಾಟೀಲ್ ಸಹ ಗಲ್ಫ್ ರಾಷ್ಟ್ರದ ಪರವಾಗಿ ಆಡುತ್ತಿದ್ದಾರೆ. 1996ರ ವಿಶ್ವಕಪ್ ನಂತರ ಯುಎಇ ಈ ಬಾರಿ ಅವಕಾಶ ಪಡೆದಿದ್ದು ಬಿ ಗುಂಪಿನಲ್ಲಿ ವಿವಿಧ ರಾಷ್ಟ್ರಗಳನ್ನು ಎದುರಿಸುತ್ತಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X