ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ವಾಕ್ಬಾಣಕ್ಕೆ ಬ್ಯಾಟ್ ಮೂಲಕ ಉತ್ತರಿಸಿದ ಕೊಹ್ಲಿ

By Mahesh

ಮೆಲ್ಬೋರ್ನ್, ಜ. 17: ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಕೊನೆಗೂ ಆಸ್ಟ್ರೇಲಿಯಾ ಆಟಗಾರರು ತಮ್ಮ ನಾಲಗೆ ಉದ್ದ ಚಾಚಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಸ್ಲೇಡ್ಜಿಂಗ್ ಬಲೆಗೆ ಬೀಳಿಸಲು ಆಸೀಸ್ ವೇಗಿ ಜೇಮ್ಸ್ ಫಾಲ್ಕನರ್ ಯತ್ನಿಸಿದ ಘಟನೆ ಮೂರನೇ ಏಕದಿನ ಪಂದ್ಯದಲ್ಲಿ ನಡೆದಿದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಪಂದ್ಯಗಳನ್ನು ಸೋತು ಸುಣ್ಣವಾಗಿರುವ ಟೀಂ ಇಂಡಿಯಾ ಮೆಲ್ಬೋರ್ನ್ ನಲ್ಲಿ ಭಾನುವಾರ (ಜನವರಿ 17) ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದುಕೊಂಡಿತು.
| ವೇಳಾಪಟ್ಟಿ | ಫೋಟೊ ಗ್ಯಾಲರಿ
ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ 24ನೇ ಶತಕದ ಮೂಲಕ ತಂಡದ ಮೊತ್ತವನ್ನು 295/6ಕ್ಕೇರಿಸಿದರು. ಈ ನಡುವೆ ಪಂದ್ಯದ 10ನೇ ಓವರ್ ನಲ್ಲಿ ಆಲ್ ರೌಂಡರ್ ಜೇಮ್ಸ್ ಫಾಲ್ಕನರ್ ಎಸೆತವನ್ನು ಬೌಂಡರಿಗೆ ಅಟ್ಟಿ 7,000ರನ್ ಗಳಿಕೆ ಗುರಿ ದಾಟಿದರು.

 Watch Virat Kohli say 'have smashed you enough' to James Faulkner

ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಅವರ ದಾಖಲೆಯನ್ನು ಮುರಿದ ಬಳಿಕ ಕೊಹ್ಲಿ ಅರ್ಧಶತಕ ಬಾರಿಸಿ ಶತಕದತ್ತ ಮುಖ ಮಾಡಿದ್ದರು. 72ರನ್ ಗಳಿಸಿದ್ದಾಗ ನಾಲ್ಕು ಡಾಟ್ ಬಾಲ್ ಆಡಬೇಕಾಯಿತು. ಪಂದ್ಯದ 35ನೇ ಓವರ್ ನಲ್ಲಿ ಫಾಲ್ಕ್ನರ್ ಅವರ 5ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಕ್ರೀಸ್ ಬಳಿ ಹೋದಾಗ ಫಾಲ್ಕ್ನರ್ ಅವರ ಜೊತೆ ಕೊಹ್ಲಿ ಮಾತಿನ ಚಕಮಕಿ ನಡೆಸಿದರು.

27ವರ್ಷ ವಯಸ್ಸಿನ ಕೊಹ್ಲಿ ಅವರು ಫಾಲ್ಕ್ನರ್ ಅವರು ರೇಗಿಸಿದ್ದಕ್ಕೆ ತಕ್ಕ ಉತ್ತರ ನೀಡಿದರು. ವಿಕೆಟ್ ಅಂಪೈರ್ ಇಂಗ್ಲೆಂಡಿನ ರಿಚರ್ಡ್ ಕೆಟಲ್ ಬರೋ ಅವರು ಮೂಕ ಪ್ರೇಕ್ಷಕರಾಗಿದ್ದರು. ಆದರೆ, ಸ್ಟಂಪ್ ಮೈಕ್ರೋ ಫೋನ್ ನಲ್ಲಿ ಕೊಹ್ಲಿ ಹೇಳಿದ್ದರು ಕೇಳಿ ಬಂತು.

"I have smashed you enough in my life. You are wasting your energy." ಎಂದು ಕೊಹ್ಲಿ ಫಾಲ್ಕ್ನರ್ ಗೆ ಉತ್ತರಿಸಿದ್ದಾರೆ. ಮತ್ತೇ ಏನು ಹೇಳಿದರು ಎಂಬುದು ಸ್ಪಷ್ಟವಾಗಿ ದಾಖಲಾಗಿಲ್ಲ. ಏನೋ ಆಗುತ್ತಿದೆ ಎಂದು ಆಗ ಕಾಮೆಂಟರಿ ಮಾಡುತ್ತಿದ ವಿವಿಎಸ್ ಲಕ್ಷ್ಮಣ್ ಹಾಗೂ ಡೀನ್ ಜೋನ್ಸ್ ಕೂಡಾ ಅಭಿಪ್ರಾಯಪಟ್ಟರು.

ಈ ಘಟನೆ ಬಳಿಕ ಕೊಹ್ಲಿ ಅವರು ಮುಂದಿನ ಓವರ್ ನಲ್ಲಿ ಸ್ಕಾಟ್ ಬೋಲ್ಯಾಂಡ್ ಎಸೆತವನ್ನು ಸಿಕ್ಸರ್ ಗೆ ಕಳಿಸಿ ಸಿಟ್ಟು ತಗ್ಗಿಸಿಕೊಂಡರು ನಂತರ 24ನೇ ಶತಕ ದಾಖಲಿಸಿದರು. ಫಾಲ್ಕ್ನರ್ ಹಾಗೂ ಕೊಹ್ಲಿ ಮಾತಿನ ಚಕಮಕಿ ವಿಡಿಯೋ:

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X