ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐಗೆ ಎರಡೇ ಲೈನ್ ರೆಸ್ಯೂಮೆ ಕಳಿಸಿದ ಸೆಹ್ವಾಗ್!

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕರೆದಿರುವ ಟೀಂ ಇಂಡಿಯಾ ಕೋಚ್ ಹುದ್ದೆಗೆ ಸೆಹ್ವಾಗ್ ಅರ್ಜಿ. ಅರ್ಜಿಯ ಜತೆಗೆ ಸಲ್ಲಿಸಿರುವ ರೆಸ್ಯೂಮೆಯಲ್ಲಿ ಕೇವಲ 2 ಸಾಲುಗಳ ಪರಿಚಯ ಮಾಡಿಕೊಂಡ ಸೆಹ್ವಾಗ್.

ಮುಂಬೈ, ಜೂನ್ 6: ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ) ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿರುವ ಹಿನ್ನಲೆಯಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಅರ್ಜಿ ಸಲ್ಲಿಸಿರುವುದು ಹಳೇ ವಿಚಾರ. ಆದರೆ, ಆ ಅರ್ಜಿಯ ಜತೆಗೆ ಅವರು ಕಳುಹಿಸಿರುವ ಪರಿಚಯ ಪತ್ರ (ರೆಸ್ಯೂಮೆ) ಮಾತ್ರ ಕೇವಲ ಎರಡೇ ಸಾಲುಗಳಲ್ಲಿದೆ!

ಇದನ್ನು ಖುದ್ದು ಬಿಸಿಸಿಐನಲ್ಲಿನ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಕೋಚ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ ಸೆಹ್ವಾಗ್, ತಮ್ಮ ಅರ್ಜಿಯೊಂದಿಗೆ ಕೇವಲ ಎರಡು ಸಾಲುಗಳುಳ್ಳ ರೆಸ್ಯೂಮೆ ಸಲ್ಲಿಸಿದ್ದರು.[ಧೋನಿಗಿಂತ ಮುಂಚಿತವಾಗಿ ಪಾಂಡ್ಯ ಕಣಕ್ಕಿಳಿದ ರಹಸ್ಯ ಬಹಿರಂಗ!]

Virender Sehwag sends 'two-line resume' to BCCI for India coach job

ಇದರಲ್ಲಿ ತಮ್ಮನ್ನು ತಾವು 'ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದು, ಈಗ ಹಾಲಿ ಟೀಂ ಇಂಡಿಯಾದ ಎಲ್ಲಾ ಹುಡುಗರೊಂದಿಗೆ ಆಡಿದ್ದೇನೆ' ಎಂದಷ್ಟೇ ಬರೆದಿದ್ದರು.[ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು]

ಇದು ಗಮನಕ್ಕೆ ಬಂದ ಕೂಡಲೇ, ವಿಸ್ತೃತ ಮಾಹಿತಿಯುಳ್ಳ ರೆಸ್ಯೂಮೆ ಒಂದನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಸೆಹ್ವಾಗ್ ಅವರಿಗೆ ಸೂಚನೆ ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X