ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಕಿ ಸಂಖ್ಯೆಗಳಲ್ಲಿ ಸೆಹ್ವಾಗ್ ಸೂಪರ್ ವೃತ್ತಿ ಬದುಕು

By Mahesh

ಬೆಂಗಳೂರು, ಅ.20: ಕ್ರಿಕೆಟ್ ಕ್ಷೇತ್ರದ ರೋಚಕ ಅಧ್ಯಾಯ ಅಕ್ಟೋಬರ್ 20ರಂದು ಕೊನೆಗೊಂಡಿದೆ. ಅಂಕಿ ಅಂಶ ಕಲೆ ಹಾಕುವವರಿಗೆ ಸವಾಲು ಹಾಕುವಂಥ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ನಜಾಫ್ ಗಢದ ನವಾಬ ಸೆಹ್ವಾಗ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ದಾರೆ. ಮುಲ್ತಾನಿನ ಸುಲ್ತಾನ ಸೆಹ್ವಾಗ್ ಅವರ ವೃತ್ತಿ ಬದುಕಿನ ಸೂಪರ್ ಅಂಕಿ ಅಂಶಗಳತ್ತ ಒಂದು ನೋಟ ಇಲ್ಲಿದೆ.

ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ ನಿಂದಲೂ ನಿವೃತ್ತಿ ಹೊಂದುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ನಂತರ ಮತ್ತೊಂದು ಟ್ವೀಟ್ ನಲ್ಲಿ ನಿವೃತ್ತಿ ಘೋಷಣೆ ಬಗ್ಗೆ ಎರಡು ಪುಟಗಳ ಪತ್ರ ಪ್ರಕಟಿಸಿದ್ದಾರೆ. [ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್]

ಟೆಸ್ಟ್ ಕ್ರಿಕೆಟ್ ನಲ್ಲಿ 2 ತ್ರಿಶತಕ, ಏಕದಿನ ಕ್ರಿಕೆಟ್ ನಲ್ಲಿ ಒಂದು ದ್ವಿಶತಕ, ಏಕದಿನ ಕ್ರಿಕೆಟ್ ನಲ್ಲಿ 100ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ಸೆಹ್ವಾಗ್ ತಮ್ಮ 37ನೇ ಹುಟ್ಟುಹಬ್ಬದ ದಿನದಂದೇ ತಮ್ಮ ಬ್ಯಾಟ್ ಗೋಡೆಗೆ ಒರಗಿಸಿದ್ದಾರೆ. [ಸೆಹ್ವಾಗ್ ರನ್ನು ದಿಗ್ಗಜ ರಿಚರ್ಡ್ಸ್ ಗೆ ಹೋಲಿಸಿ ಧೋನಿ ಟ್ವೀಟ್]

Virender Sehwag's international career in numbers

ಅಂಕಿ ಅಂಶಗಳಲ್ಲಿ ಸೆಹ್ವಾಗ್ ವೃತ್ತಿ ಬದುಕು :
* ಟೆಸ್ಟ್ ಎಂಟ್ರಿ: vs ದಕ್ಷಿಣ ಆಫ್ರಿಕಾ, ಬ್ಲೊಮೆಫೊಂಟೆನ್, ನವೆಂಬರ್ 2001.
* ಏಕದಿನ ಕ್ರಿಕೆಟ್: vs ಪಾಕಿಸ್ತಾನ, ಮೊಹಾಲಿ, ಏಪ್ರಿಲ್, 1999.
* ಟಿ20: vs ದಕ್ಷಿಣ ಆಫ್ರಿಕಾ, ಜೋಹಾನ್ಸ್ ಬರ್ಗ್, ಡಿಸೆಂಬರ್ 2005.
* 0: ಟಿ20 ವಿಕೆಟ್. []
* 1: ಏಕದಿನ ಕ್ರಿಕೆಟ್ ನಲ್ಲಿ ಡಬ್ಬಲ್ ಸೆಂಚುರಿ, ಟೆಸ್ಟ್ ನಲ್ಲಿ 5 ವಿಕೆಟ್
* 2 : ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ.
* 3: ಪಂದ್ಯದ ಮೊದಲ ಮೂರು ಎಸೆತಗಳಲ್ಲಿ ಮೂರು ಬಾರಿ ಸಿಕ್ಸರ್ ಬಾರಿಸಿದ ವಿಶ್ವದ ಏಕೈಕ ಆಟಗಾರ
* 14: ಟೆಸ್ಟ್ ಕ್ರಿಕೆಟ್ ನಲ್ಲಿ 14 ಬಾರಿ 150 ಪ್ಲಸ್ ರನ್ ಗಳಿಕೆ.
* 19: ಆಡಿರುವ ಒಟ್ಟು ಪಂದ್ಯಗಳು.
* 23: ಟೆಸ್ಟ್ ನಲ್ಲಿ ಗಳಿಸಿದ ಶತಕಗಳು.
* 32: ಟೆಸ್ಟ್ ನಲ್ಲಿ ಗಳಿಸಿದ ಅರ್ಧಶತಕಗಳು.
* 35.05: ಏಕದಿನ ಕ್ರಿಕೆಟ್ ನಲ್ಲಿ ರನ್ ಸರಾಸರಿ.
* 37: ನಿವೃತ್ತಿ ಹೊಂದಿದ ವಯಸ್ಸು.
Virender Sehwag's international career in numbers

* 40: ಟೆಸ್ಟ್ ವಿಕೆಟ್ ಗಳು. []
* 49.34: ಟ್ರೆಸ್ಟ್ ಕ್ರಿಕೆಟ್ ನಲ್ಲಿ ರನ್ ಸರಾಸರಿ.
* 82.23: ಟ್ರೆಸ್ಟ್ ಕ್ರಿಕೆಟ್ ನಲ್ಲಿ ಸ್ಟ್ರೈಕ್ ರೇಟ್.
* 91 : ಟೆಸ್ಟ್ ನಲ್ಲಿ ಸಿಡಿಸಿದ ಸಿಕ್ಸರ್ಸ್.
* 96: ಏಕದಿನ ಕ್ರಿಕೆಟ್ ನಲ್ಲಿ ವಿಕೆಟ್ಸ್.
* 104: ಆಡಿರುವ ಒಟ್ಟು ಟೆಸ್ಟ್
* 104.33: ಏಕದಿನ ಕ್ರಿಕೆಟ್ ನಲ್ಲಿ ಸ್ಟ್ರೈಕ್ ರೇಟ್.
* 136 : ಏಕದಿನ ಕ್ರಿಕೆಟ್ ನಲ್ಲಿ ಸಿಕ್ಸರ್ಸ್.
* 219: ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ.
* 251: ಒಟ್ಟು ಆಡಿದ ಏಕದಿನ ಪಂದ್ಯಗಳು.
* 300 : ವಿಶ್ವದಲ್ಲಿ ವೇಗದ ತ್ರಿಶತಕ ಸಿಡಿಸಿದ ದಾಂಡಿಗ (ದಕ್ಷಿಣ ಆಫ್ರಿಕಾ ವಿರುದ್ಧ 270 ಎಸೆತಗಳಲ್ಲಿ 300 ರನ್)
* 319: 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಮೊತ್ತ. ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ.
* 1,233:ಒಟ್ಟು ಬೌಂಡರಿಗಳು, ಟೆಸ್ಟ್ ಪಂದ್ಯಗಳಲ್ಲಿ
* 1,132: ಒಟ್ಟು ಬೌಂಡರಿಗಳು, ಏಕದಿನ ಪಂದ್ಯಗಳಲ್ಲಿ
*8,273: ಏಕದಿನ ಕ್ರಿಕೆಟ್ ನಲ್ಲಿ ಗಳಿಸಿದ ಒಟ್ಟು ರನ್ ಗಳು
* 8,586: ಟೆಸ್ಟ್ ಕ್ರಿಕೆಟ್ ನಲ್ಲಿ ಗಳಿಸಿದ ಒಟ್ಟು ರನ್ ಗಳು
Virender Sehwag

ಇನ್ನಿತರ ದಾಖಲೆಗಳು: [ಆಸ್ಟ್ರೇಲಿಯಾದ ಟಾಪ್ 15 ಶತಕ ಪಟ್ಟಿಯಲ್ಲಿ ಸಚಿನ್, ಲಕ್ಷ್ಮಣ್, ಸೆಹ್ವಾಗ್]
* ಟೆಸ್ಟ್ ನಲ್ಲಿ 2 ಬಾರಿ ತ್ರಿಶತಕದ ಸಾಧನೆ ಮಾಡಿದ ವಿಶ್ವದ ನಾಲ್ಕು ಮಂದಿ ಆಟಗಾರರಲ್ಲಿ ಸೆಹ್ವಾಗ್ ಕೂಡಾ ಒಬ್ಬರು.
* ಟೆಸ್ಟ್ ನ 2 ಬಾರಿ 300ಕ್ಕೂ ಅಧಿಕ ರನ್ ಮತ್ತು 5 ವಿಕೆಟ್ ಗಳಿಸಿದ ವಿಶ್ವದ ಏಕೈಕ ಕ್ರಿಕೆಟರ್
* ತ್ವರಿತ ಗತಿಯಲ್ಲಿ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ. 2009ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 60 ಎಸೆತಗಳಲ್ಲಿ ಶತಕ.
* ಒಟ್ಟು 6 ದ್ವಿಶತಕವನ್ನು ಸೆಹ್ವಾಗ್ ಹೊಡೆದಿದ್ದು ಇದರಲ್ಲಿ 3 ದ್ವಿಶತಕ ಪಾಕ್ ವಿರುದ್ಧ ದಾಖಲಾಗಿದೆ.
* ವಿಶ್ವಕಪ್ ಕ್ರಿಕೆಟ್‍ನ ಪಂದ್ಯಗಳಲ್ಲಿ ಮೊದಲ ಎಸೆತವನ್ನು 5 ಬಾರಿ ಬೌಂಡರಿಗೆ ಅಟ್ಟಿದ ಮೊದಲ ಆಟಗಾರ. ಸೆಹ್ವಾಗ್ 2011ರಲ್ಲಿ ಈ ಸಾಧನೆ ಮಾಡಿದ್ದರು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X