ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಸುದ್ದಿಯಲ್ಲಿ ಸೆಹ್ವಾಗ್, ಬ್ಯಾಟ್ ಬೀಸಿದ್ದು ಯಾರಿಗೆ?

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪುತ್ರಿಯ ಹೇಳಿಕೆಗೆ ಮಾಜಿ ಕ್ರಿಕೆಟರ್ ವೀರೇಂದರ್ ಸೆಹ್ವಾಗ್ ಅವರು ನೀಡಿದ ಪ್ರತಿಕ್ರಿಯೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸೆಹ್ವಾಗ್ ಬ್ಯಾಟ್ ಮತ್ತೆ ಬೀಸಲಾರಂಭಿಸಿದೆ.

By Mahesh

ನವದೆಹಲಿ, ಫೆಬ್ರವರಿ 27: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪುತ್ರಿಯ ಹೇಳಿಕೆಗೆ ಮಾಜಿ ಕ್ರಿಕೆಟರ್ ವೀರೇಂದರ್ ಸೆಹ್ವಾಗ್ ಅವರು ನೀಡಿದ ಪ್ರತಿಕ್ರಿಯೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸೆಹ್ವಾಗ್ ಬ್ಯಾಟ್ ಮತ್ತೆ ಬೀಸಲಾರಂಭಿಸಿದೆ.

'ಎಬಿವಿಪಿಗೆ ತಾನು ಹೆದರುವುದಿಲ್ಲ' ಎಂದು ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದ ಕಾರ್ಗಿಲ್ ಯುದ್ಧದ ಹುತಾತ್ಮ ಕ್ಯಾ.ಮನದೀಪ್ ಸಿಂಗ್ ಅವರ ಪುತ್ರಿ ಗುರ್ಮೆಹರ್ ಕೌರ್ ಅವರು ಸಂಕಷ್ಟಕ್ಕೆ ಸಿಲುಕಿದ ಸುದ್ದಿ ಓದಿರಬಹುದು.[ಟ್ವೀಟ್ ಮಾಡಿ 6ತಿಂಗಳಲ್ಲಿ 30ಲಕ್ಷ ರು ಸಂಪಾದಿಸಿದರೆ ಸೆಹ್ವಾಗ್]

ಇದಕ್ಕೂ ಮೊದಲು ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅವರು ಯುದ್ಧದ ಬಗ್ಗೆ ಫಲಕ ಹಿಡಿದುಕೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. 'ಯುದ್ಧದಿಂದ ನನ್ನ ತಂದೆ ಹುತಾತ್ಮರಾದರು ಅವರನ್ನು ಪಾಕಿಸ್ತಾನ ಕೊಂದಿಲ್ಲ' ಎಂದಿದ್ದರು.[ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿಗೆ ಅತ್ಯಾಚಾರದ ಬೆದರಿಕೆ!]

ಎಬಿವಿಪಿ ವಿರುದ್ಧ ನಿಂತಿದ್ದಕ್ಕೆ ಅತ್ಯಾಚಾರ ಬೆದರಿಕೆ ಸೇರಿದಂತೆ ಸರಣಿ ಬೆದರಿಕೆಗಳು ಬರತೊಡಗಿವೆ ಎಂದು ಕೌರ್ ಅವರು ಎನ್ ಡಿಟಿವಿಗೆ ಹೇಳಿಕೊಂಡಿದ್ದರು. ಇದೆಲ್ಲದ್ದಕ್ಕೂ ಉತ್ತರವಾಗಿ ಸೆಹ್ವಾಗ್ ಅವರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸೆಹ್ವಾಗ್ ಪ್ರತಿಕ್ರಿಯೆ ನಂತರ ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.. ಏನೆಂದು ಪ್ರತಿಕ್ರಿಯೆ ನೀಡಿದ್ದಾರೆ ಮುಂದೆ ಓದಿ....

ಸೆಹ್ವಾಗ್ ಉತ್ತರ ಈ ರೀತಿ ಇದೆ

ಸೆಹ್ವಾಗ್ ಉತ್ತರ ಈ ರೀತಿ ಇದೆ

ಗುರ್ಮೆಹರ್ ಅವರು ಬರೆದಿರುವ ಧಾಟಿಯಲ್ಲೇ ಉತ್ತರಿಸಿದ ಸೆಹ್ವಾಗ್, ನಾನು ಎರಡು ತ್ರಿಶತಕ ಬಾರಿಸಲಿಲ್ಲ. ನನ್ನ ಬ್ಯಾಟ್ ಮಾತ್ರ 300 ರನ್ ಗಡಿ ದಾಟಿತು ಎಂದಿದ್ದಾರೆ.

ಟ್ವೀಟ್ ಪರ -ವಿರೋಧ ಹೇಳಿಕೆ

ಸೆಹ್ವಾಗ್ ಅವರು ಯಾವ ಉದ್ದೇಶದಿಂದ ಯಾವ ರೀತಿ ಟ್ವೀಟ್ ಮಾಡಿದ್ದಾರೆ. ಎಲ್ಲಾ ಸಮಯದಲ್ಲಿ ಹಾಸ್ಯಮಯ ಟ್ವೀಟ್ ಅಗತ್ಯವಿದೆಯೇ? 20 ವರ್ಷದ ಯುವತಿ ವಿರುದ್ಧ ಸೆಹ್ವಾಗ್ ಟ್ವೀಟ್ ಏಕೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ.

ಸೆಹ್ವಾಗ್ ಗೆ ನಟ ರಣದೀಪ್ ಬೆಂಬಲ

ಸೆಹ್ವಾಗ್ ಗೆ ನಟ ರಣದೀಪ್ ಬೆಂಬಲ ವ್ಯಕ್ತಪಡಿಸಿ, ಅವರ ಪರವಾಗಿ ಹಲವಾರು ಮಂದಿ ಜತೆ ವಾದಿಸಿದ್ದಾರೆ. ದೆಹಲಿ ವಿವಿಯಲ್ಲಿ ದ್ವೇಷ ಭಾವ ತುಂಬುವ ಹೇಳಿಕೆಗಳಿಗೂ ಸೆಹ್ವಾಗ್ ಟ್ವೀಟ್ ಗೂ ವ್ಯತ್ಯಾಸ ತಿಳಿಯಿರಿ ಎಂದಿದ್ದಾರೆ.

ಪತ್ರಕರ್ತ ಶೇಖರ್ ಗುಪ್ತ್ತಾ

ಪತ್ರಕರ್ತ ಶೇಖರ್ ಗುಪ್ತಾ ಅವರ ಟ್ವೀಟ್ ಗೆ ಉತ್ತರಿಸಿದ ರಣದೀಪ್ ಹೂಡಾ

ಬರ್ಖಾದತ್ ಟ್ವೀಟ್

ಎನ್ ಡಿಟಿವಿಯ ತೊರೆದಿರುವ ಪತ್ರಕರ್ತೆ ಬರ್ಖಾದತ್ ಅವರು ಕೂಡಾ ಈ ಚರ್ಚೆಯಲಿ ಪಾಲ್ಗೊಂಡಿದ್ದಾರೆ

BharatJaisiJagahNahi

ಭಾರತ ನೀವು ತಿಳಿದಂತೆ ಇಲ್ಲ ಎಂದು ಯುವತಿಗೆ ತಿಳಿ ಹೇಳಲು ಹೊರಟ ಸೆಹ್ವಾಗ್

ಶ್ವೇತಾ ಸಿಂಗ್ ಟ್ವೀಟ್

ಪತ್ರಕರ್ತೆ ಶ್ವೇತಾ ಸಿಂಗ್ ಅವರಿಂದ ಈ ಚರ್ಚೆ ಬಗ್ಗೆ ಇನ್ನಷ್ಟು ಸ್ಪಷ್ಟನೆ. ತಮ್ಮ ಕುಟುಂಬದ ಬಗ್ಗೆ ಹೇಳಿಕೆ

ಹಾಸ್ಯ ಒಳ್ಳೆಯದಲ್ಲ

ಎಲ್ಲಾ ಕಾಲಕ್ಕೂ ಈ ರೀತಿ ಹಾಸ್ಯ ಒಳ್ಳೆಯದಲ್ಲ, ಒಂದು ಕಾಲದ ದಿಗ್ಗಜ ಈಗ ಟ್ರಾಲ್ ಕಿಂಗ್ ಎನಿಸಿಕೊಂಡು ಹಾಸ್ಯಾಸ್ಪದ ವಾಗುತ್ತಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X