ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜರುದ್ದೀನ್ ದಾಖಲೆ ಮುರಿದ 'ಕ್ಯಾಪ್ಟನ್' ವಿರಾಟ್ ಕೊಹ್ಲಿ

By Mahesh

ಗಾಲೆ, ಜುಲೈ 30: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವೃತ್ತಿ ಬದುಕಿನ 17ನೇ ಟೆಸ್ಟ್ ಶತಕ ಸಿಡಿಸಿ, ಹಲವು ದಾಖಲೆ ಮುರಿದಿದ್ದಾರೆ. ನಾಯಕನಾಗಿ 10ನೇ ಶತಕ ಬಾರಿಸಿರುವ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಭಾರತದಿಂದ ಶ್ರೀಲಂಕಾ ಪ್ರವಾಸ ಪರಿಷ್ಕೃತ ವೇಳಾಪಟ್ಟಿ
ಭಾರತದ ನಾಯಕರಾಗಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಇನ್ನೂ ಸುನಿಲ್ ಗವಾಸ್ಕರ್ (11) ಹೆಸರಿನಲ್ಲಿದೆ. ಆದರೆ, ಈ ದಾಖಲೆಯನ್ನು ಸದ್ಯದಲ್ಲೇ ಕೊಹ್ಲಿ ಮುರಿಯುವುದರಲ್ಲಿ ಸಂಶಯವಿಲ್ಲ.

17ನೇ ಶತಕದ ಬಳಿಕ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ ಶತಕ ಬಾರಿಸಿದ ಕೊಹ್ಲಿ ಅವರು ತಮ್ಮ ಲಯಕ್ಕೆ ಮರಳಿದರು. 550 ರನ್ ಟಾರ್ಗೆಟ್ ಪಡೆದ ಶ್ರೀಲಂಕಾ ಕೊನೆಗೆ 304ರನ್ ಅಂತರದ ಭಾರಿ ಸೋಲು ಕಂಡಿದೆ.

Virat Kohli surpasses Mohammad Azharuddin's tally of centuries as Indian captain


ಕೊಹ್ಲಿ ಅವರು 44 ಇನ್ನಿಂಗ್ಸ್ ಗಳಲ್ಲಿ ಮೊಹಮ್ಮದ್ ಅಜರುದ್ದೀನ್ ಅವರ 9 ಶತಕಗಳ ದಾಖಲೆಯನ್ನು ಮುರಿದರು. ಅಜರುದ್ದೀನ್ ಅವರು 68 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

ಇದರ ಜತೆಗೆ ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ ನಾಯಕನಾಗಿ 10 ಶತಕ ಗಳಿಸಿದ ಸಾಧನೆ ಮಾಡಿದ ವಿಶ್ವದ ಅಗ್ರಗಣ್ಯ ಬ್ಯಾಟ್ಸ್ ಮನ್ ಗಳ ಪಟ್ಟಿಗೆ ಕೊಹ್ಲಿ ಸೇರಿದರು. ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಅವರು ಕೇವಲ 26 ಇನ್ನಿಂಗ್ಸ್ ಗಳಲ್ಲಿ 10 ಶತಕ ಗಳಿಸಿದ್ದರೆ,ಶ್ರೀಲಂಕಾದ ಮಹೇಲ ಜಯವರ್ಧನೆ 36, ಆಸ್ಟ್ರೇಲಿಯಾದ ಸ್ಟೀವ್ ವಾ(37) ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X