ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಶೂನ್ಯ ಸುತ್ತಿದರೂ ಅಪರೂಪದ ದಾಖಲೆ!

ಬಲಿಷ್ಠ ಬೌಲಿಂಗ್ ಪಡೆ ಎದುರು ಶೂನ್ಯಕ್ಕೆ ಔಟಾಗುವುದೇ? ಛೆ! ಎಂದು ಅಭಿಮಾನಿಗಳು ಲೊಚಗುಟ್ಟುವಾಗಲೇ ಕೊಹ್ಲಿ ದಾಖಲೆ ಬರೆದಿರುವ ಸುದ್ದಿ ಬಂದಿದೆ.

By Mahesh

ಪುಣೆ, ಫೆಬ್ರವರಿ 24: ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ಕ್ರಿಕೆಟ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿರಬಹುದು. ಸತತ ನಾಲ್ಕು ದ್ವಿಶತಕ ಸಿಡಿಸಿರಬಹುದು ಆದರೆ, ಬಲಿಷ್ಠ ಬೌಲಿಂಗ್ ಪಡೆ ಎದುರು ಶೂನ್ಯಕ್ಕೆ ಔಟಾಗುವುದೇ? ಛೆ! ಎಂದು ಅಭಿಮಾನಿಗಳು ಲೊಚಗುಟ್ಟುವಾಗಲೇ ಕೊಹ್ಲಿ ದಾಖಲೆ ಬರೆದಿರುವ ಸುದ್ದಿ ಬಂದಿದೆ.

ವಿರಾಟ್ ಕೊಹ್ಲಿ ಹಾಗಿರಲಿ ಟೀಂ ಇಂಡಿಯಾ, ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು (ಫೆಬ್ರವರಿ 24) ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 105 ಸ್ಕೋರಿಗೆ ಆಲೌಟ್ ಆಗಿದೆ. [ಕಪಿಲ್ ದೇವ್ ದಾಖಲೆ ಮುರಿದ ಆರ್ ಅಶ್ವಿನ್]

Virat Kohli's rarest of rare record: Out for a duck after 104 innings

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಓ ಕೀಫ್ ಅವರು 35 ರನ್ನಿತ್ತು 6 ವಿಕೆಟ್ ಕಿತ್ತು ಎಲ್ಲರನ್ನು ಅಚ್ಚರಿಗೆ ದೂಡಿದರು.

ಆದರೆ, ಕೀಫ್ ಆರ್ಭಟ ಆರಂಭಕ್ಕೂ ಮುನ್ನವೇ ಕೊಹ್ಲಿ ಅವರು ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಎಸೆತವನ್ನು ಕೆಣಕಲು ಹೋಗಿ ಮೊದಲ ಸ್ಲಿಪ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಸರಿ ಸುಮಾರು 104 ಅಂತಾರಾಷ್ಟ್ರೀಯ ಪಂದ್ಯಗಳ (ಟೆಸ್ಟ್ ಹಾಗೂ ಒಡಿಐ ಸೇರಿ) ನಂತರ ಸೊನ್ನೆಗೆ ಔಟಾಗಿದ್ದಾರೆ.

28 ವರ್ಷ ವಯಸ್ಸಿನ ಕೊಹ್ಲಿ ಅವರು 93 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಸೊನ್ನೆಗೆ ಔಟಾಗಿದ್ದಾರೆ. 2014ರಲ್ಲಿ ಕಾರ್ಡಿಫ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿಗೆ ಕೊಹ್ಲಿ ಅವರು ಶೂನ್ಯ ಸುತ್ತಿದ್ದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X