ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಯೆಟ್ ಕ್ರಿಕೆಟ್ ಪ್ರಶಸ್ತಿ : ಕೊಹ್ಲಿ, ಅಶ್ವಿನ್ ಶ್ರೇಷ್ಠ ಆಟಗಾರರು

By Mahesh

ಮುಂಬೈ, ಮೇ 31: ಸಿಯಟ್ ಕ್ರಿಕೆಟ್ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಟಿ20 ವರ್ಷದ ಆಟಗಾರ ಪ್ರಶಸ್ತಿಗೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ದಿಲಿಪ್ ವೆಂಗಸರ್ಕಾರ್ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಮಾಜಿ ಮತ್ತು ಹಾಲಿ ಆಟಗಾರ ಸಂಗಮ ಕಂಡು ಬಂದಿತು. ಇಂಗ್ಲೆಂಡ್ ಬ್ಯಾಟ್ಸಮನ್ ಜೋ ರೂಟ್ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದರು. ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಬೌಲರ್ ಆಗಿ ಪ್ರಶಸ್ತಿ ಗಳಿಸಿದರು.

Virat Kohli named T20 Player of the year, Ashwin best bowler at Ceat Award event

ಐಪಿಎಲ್​ 9ರಲ್ಲಿ 16 ಪಂದ್ಯಗಳಿಂದ 973 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅವರು ಸಹಜವಾಗಿ ಟಿ20 ವರ್ಷದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ವಿಶ್ವಟಿ20 ಟೂರ್ನಿಯಲ್ಲೂ ಸರಣಿ ಶ್ರೇಷ್ಠ ಪ್ರಶಸ್ತಿ ಕೊಹ್ಲಿ ಪಾಲಾಗಿತ್ತು.

1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ವೆಂಗ್ ಸರ್ಕರ್ (60 ವರ್ಷ) ಅವರು ತಮ್ಮ ವೃತ್ತಿ ಬದುಕಿನಲ್ಲಿ 116 ಟೆಸ್ಟ್ ಪಂದ್ಯಗಳಿಂದ 6,868 ರನ್, 17 ಶತಕಗಳಿಸಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ಹ್ಯಾಟ್ರಿಕ್ ಶತಕ ಗಳಿಸಿದ್ದು ಅವರ ಸಾಧನೆ.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

* ಜೀವಮಾನದ ಸಾಧನೆ ಪ್ರಶಸ್ತಿ : ದಿಲಿಪ್ ವೆಂಗ್ ಸರ್ಕರ್ (ಭಾರತ)

* ಅಂತಾರಾಷ್ಟ್ರೀಯ ಕ್ರಿಕೆಟರ್: ಜೋ ರೂಟ್ (ಇಂಗ್ಲೆಂಡ್)

* ಅಂತಾರಾಷ್ಟ್ರೀಯ ಬ್ಯಾಟ್ಸ್ ಮನ್ : ಜೋ ರೂಟ್

* ಅಂತಾರಾಷ್ಟ್ರೀಯ ಬೌಲರ್ : ಆರ್ ಅಶ್ವಿನ್ (ಭಾರತ)

* ಟೆಸ್ಟ್ ಕ್ರಿಕೆಟರ್ : ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

* ಏಕದಿನ ಕ್ರಿಕೆಟರ್ : ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)

* ಟಿ 20ಐ ಕ್ರಿಕೆಟರ್: ವಿರಾಟ್ ಕೊಹ್ಲಿ (ಭಾರತ)

* ಭಾರತದ ಶ್ರೇಷ್ಠ ಕ್ರಿಕೆಟರ್ : ರೋಹಿತ್ ಶರ್ಮ

* ವಾರ್ಷಿಕ ದೇಶಿ ಕ್ರಿಕೆಟರ್ :
ಶ್ರೇಯಸ್ ಐಯರ್

* ಉದಯೋನ್ಮುಖ ಆಟಗಾರ: ರಿಷಬ್ ಪಂತ್

* ವಿಶೇಷ ಪ್ರಶಸ್ತಿ: ಅಜಿಂಕ್ಯ ರಹಾನೆ [ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಐದನೇ ಕ್ರಿಕೆಟರ್ , ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿ]

ಪ್ರಶಸ್ತಿ ಪ್ರದಾನ ಸಮಾರಂಭದ ವರ್ಣ ರಂಜಿತ ಚಿತ್ರಗಳನ್ನು ಗ್ಯಾಲರಿಯಲ್ಲಿ ನೋಡಿ

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X