ವಿಂಡೀಸ್ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಆದ್ರೆ ಭಾರತ ನಂ.1

By:
Subscribe to Oneindia Kannada

ಬೆಂಗಳೂರು, ಜುಲೈ 26: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಭರ್ಜರಿ ಆರಂಭ ಮಾಡಿದೆ. ಈಗ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರುವ ಅವಕಾಶ ಕೊಹ್ಲಿ ತಂಡಕ್ಕೆ ಒದಗಿ ಬಂದಿದೆ.

ಟೀಂ ಇಂಡಿಯಾ ಈ ಟೆಸ್ಟ್ ಸರಣಿಯಲ್ಲಿ 4-0 ಯಿಂದ ಕ್ಲೀನ್​ಸ್ವೀಪ್ ಸಾಧಿಸಿದರೆ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಹಾಗೂ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಫಲಿತಾಂಶದ ಮೇಲೆ ಅವಲಂಬಿಸಿದೆ.[ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಗೆಲುವಿನ ನಗೆ]

ಜುಲೈ 25ರಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ರಾಜ ದಂಡ (mace) ಹಾಗೂ 1 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಗಳಿಸಿದರು.

ಸದ್ಯ ಆಸ್ಟ್ರೇಲಿಯಾ (118), ಭಾರತ (112), ಪಾಕಿಸ್ತಾನ (111) ಮತ್ತು ಇಂಗ್ಲೆಂಡ್ (108) ನಡುವೆ ಸದ್ಯ 10 ಅಂಕಗಳ ಅಂತರ ಮಾತ್ರವಿದೆ. ನಂ. 1 ಸ್ಥಾನಕ್ಕೇರಲು ಈ ನಾಲ್ಕು ತಂಡಗಳ ನಡುವೆ ಪೈಪೋಟಿ ಇದೆ. ಈ ನಾಲ್ಕು ತಂಡಗಳಿಗೆ ಅಗ್ರಸ್ಥಾನಕ್ಕೇರಲು ಇರುವ ಸಾಧ್ಯಾಸಾಧ್ಯತೆ ಏನಿದೆ? ಮುಂದೆ ಓದಿ...

ಭಾರತ ನಂ.1 ಸ್ಥಾನಕ್ಕೇರಬಹುದು ಹೇಗೆ?

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯನ್ನು ಭಾರತ ತಂಡ 4-0 ರಿಂದ ಗೆಲ್ಲಬೇಕು ಇದೇ ವೇಳೆ ಇಂಗ್ಲೆಂಡ್- ಪಾಕ್ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಬೇಕು. ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ 1-0 ಅಥವಾ ಅದಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆದ್ದರೆ ಭಾರತ ನಂ. 1 ಸ್ಥಾನಕ್ಕೇರಬಹುದು. ಚಿತ್ರದಲ್ಲಿ: ಕೊಹ್ಲಿ ಹಾಗೂ ತಂಡ ಮೊದಲ ಟೆಸ್ಟ್ ಗೆಲುವಿನ ನಂತರ

ಇಂಗ್ಲೆಂಡ್ ತಂಡಕ್ಕೆ ಇರುವ ಸಾಧ್ಯತೆ

ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಉಳಿದ ಮೂರು ಟೆಸ್ಟ್ ಗೆದ್ದರೆ ಇಂಗ್ಲೆಂಡ್ ನಂ. 1 ಸ್ಥಾನಕ್ಕೇರಬಹುದು.

ಆದರೆ, ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಒಂದು ಟೆಸ್ಟ್ ಪಂದ್ಯವನ್ನಾದರೂ ಸೋಲಬೇಕು. ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಸರಣಿ ಸೋಲು ಕಾಣಬೇಕು. ಚಿತ್ರದಲ್ಲಿ: ಇಂಗ್ಲೆಂಡ್ ತಂಡದ ಆಟಗಾರರು

ಆಸ್ಟ್ರೇಲಿಯಾ ಆಗ್ರಸ್ಥಾನ ಕಾಯ್ದುಕೊಳ್ಳಬಹುದೆ?

ಆಸ್ಟ್ರೇಲಿಯಾ ತಂಡ ತನ್ನ ಅಗ್ರಸ್ಥಾನ ಉಳಿಸಿಕೊಳ್ಳಬೇಕಾದರೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕನಿಷ್ಠ 1-0 ಅಂತರದಿಂದ ಗೆಲ್ಲಬೇಕಾಗುತ್ತದೆ. ಅತ್ತ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ ಒಂದಾದರೂ ಟೆಸ್ಟ್ ಗೆಲ್ಲಬೇಕು.

ಪಾಕಿಸ್ತಾನಕ್ಕೆ ಏನು ಚಾನ್ಸ್ ಇದೆ

ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದರೂ ಪಾಕಿಸ್ತಾನ ತಂಡ ಅಗ್ರಸ್ಥಾನಕ್ಕೇರಲು, ಆಸೀಸ್ ತಂಡ ಲಂಕಾ ವಿರುದ್ಧ ಸರಣಿ ಸೋಲಬೇಕು. ಇದು ಸಾಧ್ಯವಾದರೆ ಭಾರತ-ವಿಂಡೀಸ್ ಸರಣಿಯ ಫಲಿತಾಂಶ ಲೆಕ್ಕಕ್ಕೆ ಬರುವುದಿಲ್ಲ. ಚಿತ್ರದಲ್ಲಿ: ಪಾಕಿಸ್ತಾನದ ಯೂನಿಸ್ ಖಾನ್

English summary
Virat Kohli-led Team India can return to the top of the ICC Test Rankings if they whitewash West Indies 4-0 and other series results go in their favour.
Please Wait while comments are loading...